ನಮ್ಮ ಪೂರ್ವಜರು ಹಿಂದೆ ನೆಲದ ಮೇಲೆ ಮಲಗುತ್ತಿದ್ದರು.ಅಷ್ಟೇ ಯಾಕೆ ಇಂದು ಸಹ ಹಲವಾರು ಜನರು ನೆಲದ ಮೇಲೆ ಮಲಗುತ್ತಾರೆ. ಆದರೆ ಇದೀಗ ಆಧುನಿಕ ಜಗತ್ತಿನಲ್ಲಿ ಬೆಡ್, ಹಾಸಿಗೆ ಬಂದ ಮೇಲೆ ಅದರ ಮೇಲೆಯೇ ಮಲಗಿ ನೆಲದ ಮೇಲೆ ಮಲಗಿದರೆ ಹೇಗಿರುತ್ತದೆ ಅನ್ನೋದೇ ಮರೆತು ಹೋಗಿದೆ. ಆದರೆ ಬೆಡ್ ಮೇಲೆ ಮಲಗುವುದಕ್ಕಿಂತ, ನೆಲದ ಮೇಲೆ ಮಲಗುವುದು ಉತ್ತಮ.

 

ನೆಲದ ಮೇಲೆ ಮಲಗುವಾಗ ಬೆನ್ನಿನ ನೆರವಿನಿಂದ ಮಲಗಬೇಕು. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಜೊತೆಗೆ ದೇಹಕ್ಕೆ ಆರಾಮ ಸಿಗುತ್ತದೆ. ಮೊದಲಿಗೆ ಈ ರೀತಿ ಮಲಗುವುದು ಕಷ್ಟವಾಗುತ್ತದೆ. ಆದರೆ ನಂತರ ಇದು ಅಭ್ಯಾಸವಾಗುತ್ತದೆ. ಮೈ ಕೈ ನೋವೂ ಇರುವುದಿಲ್ಲ.

  • ಬೆಡ್ ಸಮತಟ್ಟಾಗಿ ಇರುವುದಿಲ್ಲ,ಮಲಗಿದ ಹಾಗೆ ಬೆಡ್ ಸಹ ಮೇಲೆ ಕೆಳಗೆ ಆಗುತ್ತದೆ. ಇದರಿಂದ ಬೆನ್ನು ನೋವು, ಕೈ ಕಾಲು ನೋವು ಕಾಣಿಸಿಕೊಳ್ಳುತ್ತದೆ.
  • ನೆಲದ ಮೇಲೆ ದಿಂಬು ಇಲ್ಲದೆ ಮಲಗಿದರೆ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ. ಇದು ಶ್ವಾಸಕೋಶದ ಸಮಸ್ಯೆ ಹೊಂದಿರುವ ರೋಗಿಗಳಿಗೂ ಉತ್ತಮ.
  • ತಪ್ಪಾಗಿ ಮಲಗುವುದರಿಂದ ಬಚಾವಾಗಬೇಕು ಅಂದರೆ ನೆಲದ ಮೇಲೆ ಮಲಗಬೇಕು. ಬೆಡ್ ಮೇಲೆ ಮಲಗುವುದು ಶರೀರಕ್ಕೆ ಹಾನಿಕಾರಕ.
  • ವೈಜ್ಞಾನಿಕವಾಗಿ ಹೇಳಬೇಕೆಂದರೆ ಸುಸ್ತು, ಆಯಾಸ ಕಡಿಮೆಯಾಗಿ, ಚಿಂತೆ ಇಲ್ಲದ ನಿದ್ರೆ ಬರಲು ಸಹಾಯವಾಗುತ್ತದೆ.
  • ಸಂಧಿಗಳಲ್ಲಿ ನೋವು ಕಾಣಿಸಿಕೊಂಡರೆ, ಸೊಂಟ ನೋವು ಕಾಣಿಸಿಕೊಂಡರೆ ಸಾಧ್ಯವಾದಷ್ಟು ನೆಲದ ಮೇಲೆ ಮಲಗಿ. ಇದರಿಂದ ಮಾಂಸಖಂಡಗಳ ನೋವು ಕಡಿಮೆಯಾಗಿ ದೇಹ ಹಗುರಾಗುತ್ತದೆ.
  • ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಇರಬೇಕು ಎಂದಾದರೆ ಅದಕ್ಕೆ ಮುಖವಾಗಿ ನೆಲದ ಮೇಲೆ ಮಲಗಬೇಕು. ನೆಲದ ಮೇಲೆ ಮಲಗಿದರೆ ಮಾಂಸಖಂಡಗಳು ರಿಲ್ಯಾಕ್ಸ್ ಆಗುತ್ತವೆ. ಇದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರಲು ಸಹಾಯವಾಗುತ್ತದೆ.