Asianet Suvarna News Asianet Suvarna News

ಸುಂದರ-ಹೊಳೆಯುವ ವದನಕ್ಕಾಗಿ ಇಲ್ಲಿವೆ ಕೆಲ ಬೆಸ್ಟ್ ಟಿಪ್ಸ್..!

ಸುಂದರವಾಗಿ ಕಾಣಬೇಕು, ಚರ್ಮ ಥಳ ಥಳ ಹೊಳೆಯಬೇಕು ಎನ್ನುವ ಬಯಕೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ನಾಲ್ಕು ಜನರ ನಡುವೆ ನಾವು ಎದ್ದು ಕಾಣಬೇಕೆಂಬ ಆಸೆಯೂ ಸಹಜವಾದುದಾಗಿದೆ. ಅಂತಹ ಆಸೆ ಈಡೇರಲು ನಾವಿಂದು ನಿಮಗೆ ಸಹಾಯ ಮಾಡುತ್ತೇವೆ. ಸುಂದರ ಸ್ಕಿನ್ ಪಡೆಯಲು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿಸುತ್ತೇವೆ. ಅದರಲ್ಲೂ ಈ ಚಳಿಗಾದಲ್ಲಿ ಚರ್ಮದ ಸಮಸ್ಯೆಯು ಹೆಚ್ಚಾಗಿರುವುದರಿಂದ ನೀವು ಚರ್ಮ ರಕ್ಷಣೆಯ ಬಗ್ಗೆ ತಿಳಿಯುವುದು ಅತ್ಯಗತ್ಯ.

skincare steps you must follow for flawless skin

ಬೆಂಗಳೂರು : ಸುಂದರವಾಗಿ ಕಾಣಬೇಕು, ಚರ್ಮ ಥಳ ಥಳ ಹೊಳೆಯಬೇಕು ಎನ್ನುವ ಬಯಕೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ನಾಲ್ಕು ಜನರ ನಡುವೆ ನಾವು ಎದ್ದು ಕಾಣಬೇಕೆಂಬ ಆಸೆಯೂ ಸಹಜವಾದುದಾಗಿದೆ. ಅಂತಹ ಆಸೆ ಈಡೇರಲು ನಾವಿಂದು ನಿಮಗೆ ಸಹಾಯ ಮಾಡುತ್ತೇವೆ. ಸುಂದರ ಸ್ಕಿನ್ ಪಡೆಯಲು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿಸುತ್ತೇವೆ. ಅದರಲ್ಲೂ ಈ ಚಳಿಗಾದಲ್ಲಿ ಚರ್ಮದ ಸಮಸ್ಯೆಯು ಹೆಚ್ಚಾಗಿರುವುದರಿಂದ ನೀವು ಚರ್ಮ ರಕ್ಷಣೆಯ ಬಗ್ಗೆ ತಿಳಿಯುವುದು ಅತ್ಯಗತ್ಯ.

ಬೆಳಗ್ಗೆ ಶುದ್ಧ ನೀರು ಸೇವನೆ

ಪ್ರತಿನಿತ್ಯ ಎದ್ದ ಬಳಿಕ ಶುದ್ಧವಾದ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶವು ಹೊರಹಾಕಲು ಅನುಕೂಲವಾಗುತ್ತದೆ.  ಕಾಫಿ, ಟೀ ಸೇವನೆಯನ್ನು ಮರೆತು ಇನ್ನು ಈ ಮಾರ್ಗ ಅನುಸರಿಸಿ

ಕ್ಲೆನ್ಸಿಂಗ್

ಕೊರಿಯನ್ ಮಹಿಳೆಯರ ಚರ್ಮವು ಅತ್ಯಂತ ಹೆಚ್ಚು ನಯವಾಗಿರುತ್ತದೆ. ಅದಕ್ಕೆ ಕಾರಣ ಅವರು ಅನುಸರಿಸುವ ಮಾರ್ಗವಾಗಿದೆ. ಅದೇನು ಗೊತ್ತಾ..? ಚರ್ಮವನ್ನು ಕ್ಲೆನ್ಸಿಂಗ್ ಮಾಡುವುದಾಗಿದೆ. ಮೊದಲು ಮುಖವನ್ನು ಬೆಚ್ಚಗಿನ ನೀರಲ್ಲಿ ತೊಳೆದು ಕ್ಲೆನ್ಸರ್ ಹಚ್ಚಿ. ಇದು ಮುಖದ ಕೊಳೆಯನ್ನು ತೆಗೆಯಲು ಸಹಕರಿಸುತ್ತದೆ.

ಟೋನರ್ ಬಳಕೆ

ಟೋನರ್ ಬಳಸುವುದನ್ನು ಬಿಟ್ಟರೆ ಚರ್ಮದ ಪ್ರಮುಖ ಆರೋಗ್ಯಕಾರಿ ವಿಚಾರವನ್ನೇ ನೀವು ಮರೆತಂತೆ. ಆದ್ದರಿಂದ ಪಿಎಚ್ ಲೆವೆಲ್ ನಿರ್ವಹಿಸಲು ಪ್ರತಿನಿತ್ಯ ಟೋನರ್ ಬಳಸಿ, ಆದರೆ ಆಲ್ಕೋಹಾಲ್ ರಹಿತ ಟೋನರ್ ಬಳಸಿರಿ. ಅಲ್ಲದೇ ಗುಲಾಬಿ ಜಲವನ್ನು ಬಳಸಬಹುದಾಗಿದೆ.

ಚರ್ಮವನ್ನು ಮಾಯಿಶ್ಚರೈಸ್ ಮಾಡಿ

ಚರ್ಮಕ್ಕೆ ಮಾಯಿಶ್ಚರೈಸರ್ ಅತ್ಯಂತ ಮುಖ್ಯವಾಗಿರುತ್ತದೆ. ಅದರಲ್ಲಿ ವಿವಿಧ ರೀತಿಯಾದ ಮಾಯಿಶ್ಚರೈಸರ್ ಬಳಕೆ ಮಾಡಬಹುದು. ಏಂಜಿಂಗ್ ಆಗುವುದನ್ನು ತಡೆಯಲು ಉಪಯುಕ್ತವಾಗುತ್ತದೆ.

ಸೆರಮ್ ಬಳಕೆ

ವಿವಿಧ ರೀತಿಯ ಸೆರಮ್ ಬಳಕೆಯೂ ಕೂಡ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.

ಸ್ಕ್ರಬ್ ಮಾಡುವುದನ್ನು ಮರೆಯದಿರಿ

ಸ್ಕ್ರಬ್ ಮಾಡುವುದರಿಂದ ಚರ್ಮದ ಸತ್ತ ಕೋಶಗಳ ನಿವಾರಣೆ ಸಾಧ್ಯವಾಗುತ್ತದೆ.  ವಾರಕ್ಕೊಮ್ಮೆಯಾದರೂ ಸ್ಕ್ರಬ್ ಮಾಡುವುದು ಅಗತ್ಯ.

Follow Us:
Download App:
  • android
  • ios