ತೂಕ ಇಳಿಸಿಕೊಳ್ಳಲು ಸಿಂಪಲ್ ಫುಡ್ಸ್

Simple weight loss food
Highlights

ತೂಕ ಇಳಿಸಿಕೊಳ್ಳಲು ಎಷ್ಟೆಲ್ಲ ಹೆಣಗಾಡುತ್ತಿರಾ  ಅಲ್ಲವೇ? ಬೊಜ್ಜು ಕರಗಿಸಿಕೊಳ್ಳುವುದಕ್ಕಾಗಿ ಊಟ ತಿಂಡಿ ಬಿಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತೀರ? ನಿಮ್ಮ ಆರೋಗ್ಯದ ಕಾಳಜಿಗಾಗಿ ನಾವು ಕೆಲವು ಆರೋಗ್ಯಯುತ ಆಹಾರ ಸೇವಿಸಿದರೆ ಫಿಟ್ ಆಗಿರಬಹುದು. ಇಲ್ಲಿವೆ ಕೆಲವು ಸಿಂಪಲ್ ಫುಡ್ಸ್

ಸಲಾಡ್:

ಕತ್ತರಿಸಿದ ಕ್ಯಾರೆಟ್ 2 ಟೀ ಚಮಚ, ಸಣ್ಣದಾಗಿ ಹೆಚ್ಚಿದ ಟೊಮೆಟೋ 2 ಟೀ ಚಮಚ, ಕತ್ತರಿಸಿದ ಸೌತೇಕಾಯಿ 2 ಟೀ ಚಮಚ, ಈರುಳ್ಳಿ 2 ಟೀ ಚಮಚ. ಶುಂಠಿ 1 ಟೀ ಚಮಚ, 2 ಹಸಿಮೆಣಸು, ಸೋಯಾ ಸಾಸ್ 1 ಟೀ ಚಮಚ, ನಿಂಬೆ ರಸ, ಉಪ್ಪು ಮತ್ತು ಸಕ್ಕರೆ ರುಚಿಗೆ ತಕ್ಕಷ್ಟು.

ಈ ಎಲ್ಲಾ ಪದಾರ್ಥಗಳನ್ನು ಒಟ್ಟಾಗಿ ಒಂದು ಪಾತ್ರೆಗೆ ಹಾಕಿ ಚನ್ನಾಗಿ ಮಿಶ್ರ ಮಾಡಿ ಸೇವಿಸಿ. ಇದರಿಂದ ನಿಮ್ಮ ತೂಕವೂ ಹತೋಟಿಯಲ್ಲಿರುತ್ತದೆ. ಮತ್ತು ಆರೋಗ್ಯಕ್ಕೂ ಒಳ್ಳೆಯದು. ದಿನಕ್ಕೊಂದು ಬಾರಿ ಊಟ ಅಥವಾ ತಿಂಡಿ ಬದಲು ಇದನ್ನು ಸೇವಿಸಿ.

ಪಪ್ಪಾಯ:

ಕತ್ತರಿಸಿದ 1 ಸಣ್ಣ ಪಪ್ಪಾಯ, 1 ಟೀ ಚಮಚ ಬಿಳಿ ವಿನೇಗರ್, 1 ಟೀ ಚಮಚ ಕೆಂಪು ಸಕ್ಕರೆ, 1 ಟೀ ಚಮಚ ಸಣ್ಣದಾಗಿ ಕತ್ತರಿಸಿದ ತುಳಸಿ ಮತ್ತು ಪುದೀನಾ ಎಲೆಗಳು.

ಒಂದು ಬಾಣಲೆಯಲ್ಲಿ ವಿನೇಗರ್ ಹಾಕಿ ಅದಕ್ಕೆ ಸಕ್ಕರೆ ಬೆರೆಸಿ ಚನ್ನಾಗಿ ಕಲಕಿ, ನಂತರ ಅದಕ್ಕೆ ಪಪ್ಪಾಯ ಹೋಳುಗಳನ್ನು ಹಾಕಿ. ಕಲಸಿ, ನಂತರ ಅದಕ್ಕೆ ತುಳಸಿ ಮತ್ತು ಪುದಿನಾ ಎಲೆಗಳ ಪುಡಿಯನ್ನು ಮೇಲಿನಿಂದ ಹಾಕಿ, ನಂತರ ಸೇವಿಸಿ. ಇದೂ ಆರೋಗ್ಯಕ್ಕೂ ಒಳ್ಳೆಯದು.

ಸೋಯಾ ತಂಪು ಕಾಫಿ:

200ಎಂಎಲ್ ತಂಪಾಗಿರುವ ಸೋಯಾ ಹಾಲು, 2 ಟೀ ಚಮಚ ಫಿಲ್ಟರ್ ಕಾಫಿ, ಸಕ್ಕರೆ 2 ಟೀ ಚಮಚ, ಬಿಸಿ ನೀರು ಸ್ವಲ್ಪ

ಸಕ್ಕರೆ, ಕಾಫಿ, ಮತ್ತು ಬಿಸಿ ನೀರನ್ನು ಒಟ್ಟಿಗೆ ಸೇರಿಸಿ ಚನ್ನಾಗಿ ಕಲಕಿ, ನಂತರ ಸೋಯಾ ಹಾಲನ್ನು ಸೇರಿಸಿ ಮಿಶ್ರ ಮಾಡಿ. ನಂತರ ಅದನ್ನು ಸ್ವಲ್ಪ ಸಮಯ ರೆಫ್ರಿಜರೇಟರ್‌ನಲ್ಲಿ ಇಡಿ. ನಂತರ ಅದನ್ನು ಸೇವಿಸಿ.

loader