ಕೂದಲ ರಕ್ಷಣೆಗೇನು ಮಾಡಬೇಕು?
ಅಬ್ಬಾ! ಧೂಳು, ಜೀವನಶೈಲಿ, ತಲೆಬಿಸಿ...ಹೀಗೆ ನೂರಾರು ಸಮಸ್ಯೆಗಳಿಂದ ಬೊಕ್ಕ ತಲೆ ಸಮಸ್ಯೆಯೂ ವಿಪರೀತವಾಗುತ್ತಿದೆ. ಆದರೆ, ಕೆಲವು ಟಿಪ್ಸ್ ಫಾಲೋ ಮಾಡೋದ್ರಿಂದ ದಲುದುರುವ ಸ್ವಲ್ಪ ಸಮಸ್ಯೆಯನ್ನು ತಡೆಯಬಹುದು. ಇಲ್ಲಿವೆ ಟಿಪ್ಸ್...
Bengaluru, First Published Jul 22, 2018, 1:21 PM IST | Last Updated Jul 22, 2018, 1:21 PM IST
ಕೂದಲು ಸದೃಢ ಸುಂದರವಾಗಿ ಬೆಳೆಯಬೇಕೆಂದರೆ ಸ್ಕಿನ್‌ನಂತೆ ಕೂದಲಿನ ಆರೈಕೆ ಮಾಡಬೇಕು. ಅದಕ್ಕಾಗಿ ತುಂಬಾ ಕೇರ್ ತೆಗೆದುಕೊಳ್ಳಬೇಕು. ತಲೆಗೆ ಹಚ್ಚುವ ಕಂಡೀಷನರ್‌ನಿಂದ ಹಿಡಿದು ಹೆಚ್ಚು ವಾಷ್ ಮಾಡುವವರೆಗೂ ಕೂದಲಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕೆಲವೊಂದು ಅಂಶಗಳು ಇಲ್ಲಿವೆ..
- ಪದೇ ಪದೇ ತಲೆ ಬಾಚುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಜೊತೆಗೆ ಕೂದಲು ತುಂಡಾಗುತ್ತದೆ. ತಲೆಯಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಕೂದಲು ಗ್ರೀಸ್ ಹಚ್ಚಿದಂತೆ ಕಾಣುತ್ತದೆ.
- ಕಡಿಮೆ ಬಾರಿ ಶಾಂಪೂ ಹಚ್ಚಿಕೊಂಡರೆ ಉತ್ತಮ. ಹೆಚ್ಚು ಬಾರಿ ಕೂದಲು ತೊಳೆದರೆ ಕೂದಲು ಹೆಚ್ಚು ಉದುರುತ್ತವೆ. ಅಲ್ಲದೆ ಸಹಜ ತೈಲದ ಅಂಶ ಕಡಿಮೆಯಾಗುತ್ತದೆ. ಇದರಿಂದ ಕೂದಲು ಡ್ರೈ ಆಗಿ ಕಾಣುತ್ತದೆ.
- ಒದ್ದೆ ಕೂದಲನ್ನು ಬಾಚುವುದು ಅಥವಾ ಡ್ರೈ ಮಾಡುವುದು, ಸ್ಟ್ರೈಟ್ ಮಾಡುವುದು ಮಾಡಬೇಡಿ. ಕೂದಲು ಅದಾಗಿಯೇ ಒಣಗಲು ಬಿಡಿ. ನಂತ್ರ ಏನು ಬೇಕಾದರೂ ಮಾಡಬಹುದು.
- ಕಂಡೀಷನರ್ ಅನ್ನು ಯಾವತ್ತೂ ಕೂದಲಿನ ಬುಡಕ್ಕೆ ಹಚ್ಚಬೇಡಿ. ಕೇವಲ ಕೂದಲಿಗೆ ಮಾತ್ರ ಹಚ್ಚಿ. ಇಲ್ಲವಾದರೆ ತಲೆಯಲ್ಲಿ ಎಣ್ಣೆ ಅಂಶ ಹೆಚ್ಚಾದಂತೆ ಕಾಣಿಸುತ್ತದೆ.
- ಶಾಂಪೂ ಹಚ್ಚಿದ ಮೇಲೆ ಕಂಡೀಷನರ್ ಹಚ್ಚಲೇಬೇಕು. ಇಲ್ಲವಾದರೆ ಕೂದಲು ಉದುರುವ, ತುಂಡಾಗುವ ಸಾಧ್ಯತೆ ಇದೆ.
- ಯಾವುದೇ ಕಾರಣಕ್ಕೂ ತುಂಬಾ ಬಿಸಿ ನೀರನ್ನು ತಲೆ ಸ್ನಾನ ಮಾಡಲು ಬಳಸಬೇಡಿ. ಇದರಿಂದ ಕೂದಲು ಬೇಗನೆ ಡ್ಯಾಮೇಜ್ ಆಗುತ್ತದೆ. ಜೊತೆಗೆ ಕೂದಲು ದುರ್ಬಲವಾಗುತ್ತದೆ.