Asianet Suvarna News Asianet Suvarna News

ಜೋಡಿಗಲ್ಲ ಸಮಸ್ಯೆಗೆ ಸೊಲ್ಯೂಷನ್ ಇಲ್ಲಿದೆ...

ದೇಹದ ತೂಕ ಜಾಸ್ತಿಯಾದರೆ ಆಂತರಿಕವಾಗಿ ಕಾಡೋ ಅನಾರೋಗ್ಯ ಒಂದೆರಡಲ್ಲ. ಜತೆಗೆ ಬಾಹ್ಯ ಸೌಂದರ್ಯದ ಮೇಲೂ ಪರಿಣಾಮ ಬೀರುವುದರಿಂದ ಮತ್ತಷ್ಟು ಚಿಂತಿಸುವಂತೆ ಮಾಡುತ್ತದೆ. ದೇಹದ ತೂಕ ಹೆಚ್ಚಾದರೆ ಜೋಡಿಗಲ್ಲದ ಸಮಸ್ಯೆಯೂ ಕಾಡುತ್ತದೆ. ಇದಕ್ಕೇನು ಪರಿಹಾರ?

simple solution to get rid of double chin
Author
Bangalore, First Published Apr 30, 2019, 4:26 PM IST

ದೇಹದ ತೂಕ ಏರು ಪೇರಾದರೆ ಜೋಡಿಗಲ್ಲದ ಸಮಸ್ಯೆ ಎದುರಾಗುತ್ತದೆ. ಅನುವಂಶಿಕವಾಗಿ ಅಲ್ಲದೇ ಹೋದರೂ, ವೃದ್ಧಾಪ್ಯದಿಂದ ಹೆಚ್ಚು ಮಂದಿಯನ್ನು ಇದು ಕಾಡಬಹುದು. ತಕ್ಷಣವೇ ಇದಕ್ಕೆ ಪರಿಹಾರವಿಲ್ಲದಿದ್ದರೂ ಕೆಲವೊಂದು ಸುಲಭ ಮಾರ್ಗದಿಂದ ಕಡಿಮೆ ಕಾಣುವಂತೆ ಮಾಡಬಹುದು.

ಹೈಟಾಗಿ ಕಾಣಿಸಬೇಕೆಂದರೆ ಹಿಂಗಿರಲಿ ನಿಮ್ ಡ್ರೆಸ್!

ಹಾಗಾದರೆ ಮಾಡಬೇಕಾದ್ದೇನು?

  • ನಾಲಿಗೆ ಹೊರ ಹಾಕಿ: ನಾಲಿಗೆ ಹೊರ ಹಾಕಿ ಗಲ್ಲಕ್ಕೆ ತಾಗಿಸಬೇಕು. ಇದನ್ನು ದಿನಕ್ಕೆ 10 ಸಲ 10 ಸೆಕೆಂಡ್ ಮಾಡಬೇಕು.
  • ಮಲಗಿದಾಗ ತಲೆ ಎತ್ತಿ: ಬೆನ್ನ ಮೇಲೆ ಮಲಗಿ ನಿಧಾನವಾಗಿ ಕತ್ತನ್ನು ಎತ್ತಿ, ಎದೆಗೆ ತಾಗಿಸಬೇಕು. ಇದನ್ನು ಮಾಡುವಾಗ ಮಧ್ಯದಲ್ಲಿ ಬ್ರೇಕ್ ತೆಗೆದುಕೊಂಡು, ನೆಲದ ಮೇಲೆ ಕೂರಬೇಕು. ಇಲ್ಲವಾದರೆ ತಲೆ ಸುತ್ತು ಬರುತ್ತದೆ.
  • ಕ್ಲಾಕ್‌ವೈಸ್ ಮತ್ತು ಆ್ಯಂಟಿ ಕ್ಲಾಕ್‌ವೈಸ್ ದಿಕ್ಕಿನಲ್ಲಿ ಕತ್ತನ್ನು ತಿರುಗಿಸುವುದು ಸುಲಭದ ವ್ಯಾಯಾಮ. ದಿನಕ್ಕೆ 2-3 ನಿಮಿಷ ತಲೆ ತಿರುಗಿಸಬೇಕು. ಇದನ್ನು ಮಾಡುವಾಗ ಯಾವುದೇ ರೀತಿಯಲ್ಲಿ ಮೈ ಮರೆಯಬಾರದು.  ಹೀಗೆ ಮಾಡುವಾಗ ಇರಲಿ ಎಚ್ಚರ. ತಲೆ ಸುತ್ತಬಹುದು.
  • ಬಾಲಿನಿಂದ ಕತ್ತು ಹಿಸುಕಿ. ಬಾಲನ್ನು ಕುತ್ತಿಗೆ ಭಾಗದಲ್ಲಿಟ್ಟು ಹಿಸುಕಬೇಕು. ಇದನ್ನು ದಿನಕ್ಕೆ 10 ಸಾರಿ ಮಾಡಿದರೆ ಸಾಕು.
  • ಆಕಾಶಕ್ಕೆ ಮುತ್ತಿಡಿ. ಕತ್ತಿನ ಚರ್ಮ ಎಳೆಯುವಷ್ಟು ಹಿಂದಕ್ಕೆ ಬಗ್ಗಿಸಿ, ಆಕಾಶ ನೋಡಿ. ಇದನ್ನು 5 ಸೆಕೆಂಡ್ ಮಾಡಿದರೆ ಸಾಕು. 
Follow Us:
Download App:
  • android
  • ios