ಫುಡ್ ಅಲರ್ಜಿ ತಡೆಯಲು ಇಲ್ಲಿದೆ ಮನೆ ಮದ್ದು

ಒಂದು ತಿಂದರೆ ಹೆಚ್ಚು, ಇನ್ನೊಂದು ತಿಂದರೆ ಕಡಿಮೆ. ಏನೋ ತಿನ್ನಬೇಕೆಂಬ ಆಸೆ. ಆದರೆ, ದೇಹಕ್ಕೆ ಹಿಡಿಯೋಲ್ಲ ಎನ್ನೋ ಭಯ. ಅಲರ್ಜಿಯಾದರೆ ಎನ್ನೋ ಚಿಂತೆ. ಈ ಸಮಸ್ಯೆಗಿದೆ ಮನೆ ಮದ್ದು. ಏನದು?

Simple home remedies for allergy

ಕೆಲವರಿಗೆ ಕೆಲವು ಆಹಾರ ತಿಂದರೆ ದೇಹಕ್ಕೆ ಆಗಿ ಬರುವುದಿಲ್ಲ. ಆದರೆ, ಯಾರು, ಯಾವ ಫುಡ್ ತಿಂದರೆ ಏನಾಗುತ್ತೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿರೋಲ್ಲ. ಅಲರ್ಜಿಯಾದರೆ ಸಾಮಾನ್ಯವಾಗಿ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆಯಂಥ ಸಮಸ್ಯೆ ಕಾಡುತ್ತದೆ. ಅದಕ್ಕೆ ಇಲ್ಲಿದೆ ಮನೆ ಮದ್ದು...

  • ದಿನಕ್ಕೆ 2 ರಿಂದ 3 ಪೀಸ್ ಶುಂಠಿ ಜಗಿಯಬೇಕು. ಇಲ್ಲವಾದರೆ ಶುಂಠಿ ಟೀ ಕುಡಿಯಿರಿ. ಇದರಿಂದ ವಾಂತಿ, ಅಜೀರ್ಣ ಹಾಗೂ ಡಯೇರಿಯಾ ಕಡಿಮೆಯಾಗುತ್ತದೆ. 
  • 1 ಕಪ್ ಮೊಸರು ಸೇವಿಸಿದರೆ, ದೇಹದ ಬ್ಯಾಕ್ಟೀರಿಯಾ ಹೊರ ಹೋಗುತ್ತದೆ. ಇದು ಕಿಬ್ಬೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.
  • ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕಲು ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ನಿಂಬೆಹಣ್ಣು, ಕಿತ್ತಲೆ, ದಾಕ್ಷಿ ಹಾಗೂ ಟೊಮ್ಯಾಟೊ ದೇಹವನ್ನು ಹೆಚ್ಚೆಚ್ಚು ಸೇರುವಂತೆ ನೋಡಿಕೊಳ್ಳಿ.
  • ನಾಚಿಕೆ ಮುಳ್ಳು, ದೊಡ್ಡ ಪತ್ರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ನೆಗಡಿ, ಚರ್ಮ ತುರಿಕೆ ಹಾಗೂ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಈ ಔಷಧಿಯನ್ನು ವಾರ ಪೂರ್ತಿ ಮಾಡಬೇಕು. 
  • ದಿನ ಬೆಳಗೆ ಒಂದು ಗ್ಲಾಸ್ ನೀರಿಗೆ ನಿಂಬೆ ಹಣ್ಣಿನ ರಸ ಸೇರಿಸಿ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಯಾವುದೇ ಅಲರ್ಜಿ ಇದ್ದರೂ ದೂರವಾಗುತ್ತದೆ. 
Latest Videos
Follow Us:
Download App:
  • android
  • ios