ಸ್ಲಿಮ್ ಆಗಬೇಕಾ? ನೆಲದ ಮೇಲೆ ಕೂತು ಊಟ ಮಾಡಿ...
ಹಿಂದೆ ಆಚರಣೆಗೆ ತಂದ ಅನೇಕ ಆಚಾರಗಳಿಗೆ ತನ್ನದೇ ಆದ ವೈಚಾರಿಕ ಹಿನ್ನೆಲೆ ಇದೆ. ವೈಜ್ಞಾನಿಕ ಕಾರಣವೂ ಇದೆ. ಅಂಥ ಕೆಲವು ಆಚಾರಗಳ ಮಹತ್ವವನ್ನು ಅರಿತುಕೊಳ್ಳುವ ಪ್ರಯತ್ನವಿದು...
ಮನೆಗಳಲ್ಲಿ ಇಂದು ಊಟಕ್ಕೆ ಟೇಬಲ್ಲುಗಳು ಬಂದಿವೆ. ಆದರೂ ಕೆಲ ಸಂಪ್ರದಾಯಸ್ಥರು ಅವುಗಳನ್ನು ಬಳಸದೆ ನೆಲದ ಮೇಲೆಯೇ ಕುಳಿತು ಊಟ ಮಾಡುತ್ತಾರೆ. ಅನ್ನಯಜ್ಞವೆಂಬುದು ಒಂದು ಪವಿತ್ರ ಕ್ರಿಯೆ, ಟೇಬಲ್ ಮೇಲೆ ಅದನ್ನು ಮಾಡಬಾರದು, ಅದು ಪಾಶ್ಚಾತ್ಯ ಸಂಸ್ಕೃತಿ, ಭಾರತೀಯ ಸಂಸ್ಕೃತಿಯ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವುದೇ ಶ್ರೇಷ್ಠವೆನ್ನುತ್ತಾರೆ. ಇದಕ್ಕಿರುವ ವೈಜ್ಞಾನಿಕ ಹಿನ್ನೆಲೆ ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ.
ನೆಲದ ಮೇಲೆ ಊಟಕ್ಕೆ ಕುಳಿತಾಗ ಸಾಮಾನ್ಯವಾಗಿ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಳ್ಳುತ್ತೇವೆ. ಇದಕ್ಕೆ ಯೋಗದಲ್ಲಿ ಸುಖಾಸನ ಎನ್ನುತ್ತಾರೆ. ಇದೊಂದು ಆರೋಗ್ಯಕರ ಭಂಗಿ. ಇದು ದೇಹಕ್ಕೆ ಪ್ರಶಾಂತತೆಯನ್ನು ತಂದುಕೊಡುವ ಮೂಲಕ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗೆ ಕುಳಿತಾಗ ನಮ್ಮ ಮೆದುಳಿಗೆ ತನ್ನಿಂತಾನೇ ಸಂದೇಶ ರವಾನೆಯಾಗಿ, ಅದು ಹೊಟ್ಟೆಯನ್ನು ಜೀರ್ಣಕ್ರಿಯೆಗೆ ಸಿದ್ಧಪಡಿಸುತ್ತದೆ.
ದಾಂಪತ್ಯ ಪ್ರೀತಿ ಹೆಚ್ಚಲು ಇಲ್ಲಿವೆ ವಾಸ್ತು ಟಿಪ್ಸ್...
ಇನ್ನೊಂದು ಪ್ರಮುಖ ಕಾರಣವಿದೆ. ಯಾವತ್ತೂ ಹೊಟ್ಟೆ ಸಂಪೂರ್ಣ ತುಂಬುವಂತೆ ಊಟ ಮಾಡಬಾರದು. ಮಾಡಿದರೆ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಕುರ್ಚಿ ಮೇಲೆ ಕುಳಿತು ಊಟ ಮಾಡುವಾಗ ಇಡೀ ಹೊಟ್ಟೆ ತುಂಬುವಷ್ಟು ಊಟ ಮಾಡಲು ಸಾಧ್ಯ. ಆದರೆ, ನೆಲದ ಮೇಲೆ ಕುಳಿತು ಊಟ ಮಾಡುವಾಗ ನಾವು ಮುಂದಕ್ಕೆ ಬಗ್ಗುವುದರಿಂದ ಹೊಟ್ಟೆ ಇನ್ನೇನು ತುಂಬುತ್ತಿದೆ ಎನ್ನುವಾಗಲೇ ಮುಂದಕ್ಕೆ ಬಗ್ಗುವುದು ಕಷ್ಟವಾಗಿ, ಹೊಟ್ಟೆ ತುಂಬಿದಂತೆನ್ನಿಸುತ್ತದೆ. ಆಗ ಊಟ ನಿಲ್ಲಿಸುತ್ತೇವೆ. ಇದರಿಂದ ‘ಹೊಟ್ಟೆಬಿರಿ’ ಊಟ ಮಾಡದೆ, ಇನ್ನೂ ಸ್ವಲ್ಪ ಜಾಗ ಇರುವಾಗಲೇ ಊಟ ಮುಗಿಯುತ್ತದೆ. ಇದು ದೇಹಕ್ಕೆ ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಬೊಜ್ಜು ಬರುವುದು ತಪ್ಪುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡುವವರು ಸಾಮಾನ್ಯವಾಗಿ ಸ್ಲಿಮ್ ಆಗಿರುವುದನ್ನು ಗಮನಿಸಿದ್ದೀರಾ?