ದಾಂಪತ್ಯ ಪ್ರೀತಿ ಹೆಚ್ಚಲು ಇಲ್ಲಿವೆ ವಾಸ್ತು ಟಿಪ್ಸ್...
ವಾಸ್ತು ಮತ್ತು ವೈವಾಹಿಕ ಜೀವನಕ್ಕೆ ಆವಿನಾಭಾವ ಸಂಬಂಧವಿದೆ. ಬೆಡ್ ರೂಮಿನಲ್ಲಿ ಕೆಲವೊಂದು ವಸ್ತುಗಳಿದ್ದರೆ ದಂಪತಿಯಲ್ಲಿ ಪ್ರೀತಿ ಹೆಚ್ಚುತ್ತೆ. ಅಂತಹ ವಸ್ತುಗಳು ಯಾವುವು?
ಮಾಡುತ್ತಾರೆ. ಅವುಗಳಲ್ಲಿ ವಾಸ್ತು ಕೂಡ ಅತ್ಯಂತ ಮುಖ್ಯ. ನೀವು ಮಲಗುವ ಕೋಣೆಯ ವಾಸ್ತು ಹೇಗೆ ಮುಖ್ಯವಾಗಿದೆಯೋ ಅದೇ ರೀತಿ ಅಲ್ಲಿ ಇಡುವ ವಸ್ತುಗಳೂ ವಾಸ್ತು ಪ್ರಕಾರದಲ್ಲಿದ್ದರೆ ಗಂಡ ಹೆಂಡತಿ ನಡುವೆ ಪ್ರೀತಿ ಶಾಶ್ವತವಾಗಿರುತ್ತದೆ.
- ವೈವಾಹಿಕ ಜೀವನ ಸುಖಮಯವಾಗಿರಲು ಪತಿ ಮತ್ತು ಪತ್ನಿ ಬೆಡ್ ರೂಮಿನಲ್ಲಿ ಎರಡು ಬೇರೆ ಬೇರೆ ಹೂದಾನಿಗಳನ್ನು ಇಡಿ. ಇದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
- ಬೆಡ್ ರೂಮಿನಲ್ಲಿ ಸಿರಾಮಿಕ್ ವಿಂಡ್ ಚೈಮ್ ಇಟ್ಟರೂ ವೈವಾಹಿಕ ಜೀವನದಲ್ಲಿ ಪ್ರೀತಿ ತುಂಬಿರುತ್ತದೆ.
- ದಾಂಪತ್ಯ ಜೀವನ ಸುಖಮಯವಾಗಿರಲು ಒಂದು ಸುಂದರ ಬೌಲ್‌ನಲ್ಲಿ ಅಕ್ಕಿಯ ಜೊತೆಗೆ ಪವಿತ್ರವಾದ ಕ್ರಿಸ್ಟಲ್ ಹಾಕಿ ರೂಮಿನಲ್ಲಿಡಿ.
- ಲವ್‌ಬರ್ಡ್ಸ್, ಪ್ರೀತಿಯ ಸಂಕೇತ . ಆದುದರಿಂದ ಈ ಪ್ರೀತಿಯ ಸಂಕೇತದ ಫೋಟೋವನ್ನು ಅಥವಾ ಪಕ್ಷಿಗಳ ಮೂರ್ತಿ ಇರಲಿ.
- ಪತಿ - ಪತ್ನಿಯ ನಡುವೆ ರೊಮ್ಯಾನ್ಸ್ ಹೆಚ್ಚಲು ಬೆಡ್‌ರೂಮ್‌ನಲ್ಲಿ ಹೃದಯಾಕಾರದ ಯಾವುದಾದರು ವಸ್ತುವನ್ನಿಡಿ. ಹಾರ್ಟ್ ದಿಂಬು, ಗೊಂಬೆ ಸಹ ಇಡಬಹುದು.
- ಬೆಡ್‌ರೂಮ್‌ನಲ್ಲಿ ರಾಧಾ ಕೃಷ್ಣರ ಫೋಟೊವನ್ನ ತೂಗು ಹಾಕಿ.ರಾಧಾ ಕೃಷ್ಣ ಪ್ರೀತಿಯ ಸಂಕೇತ. ಇವರಿಬ್ಬರ ಪ್ರೀತಿ ಇಂದಿಗೂ ಅಜರಾಮರ. ಇವರ ಫೋಟೋ ಬೆಡ್ ರೂಮ್ ನಲ್ಲಿ ಇಡುವುದರಿಂದ ಪತಿ -ಪತ್ನಿಯರಿಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸ ಹೆಚ್ಚಾಗುತ್ತದೆ.
- ಕೆಂಪು ಅಥವಾ ಗುಲಾಬಿ ಬಣ್ಣ ರೊಮ್ಯಾನ್ಸ್ ಸಂಕೇತ ಆದುದರಿಂದ ಬೆಡ್‌ರೂಮ್‌ನಲ್ಲಿ ಈ ಬಣ್ಣವನ್ನು ಹೆಚ್ಚಾಗಿ ಬಳಸಿ. ಗುಲಾಬಿ ಹೂವುಗಳನ್ನು ರೂಮಿನಲ್ಲಿ ಇಟ್ಟರೆ ಉತ್ತಮ. ಅದರಲ್ಲೂ ತಾಜಾ ಗುಲಾಬಿ ಹೂವುಗಳಿಡಿ.
ವಾಸ್ತು ಸುದ್ದಿಗಳಿಗಾಗಿ ಇಳ್ಲಿ ಕ್ಲಿಕ್ ಮಾಡಿ