ರುದ್ರಾಕ್ಷಿ ಮಹಿಮೆ ಅಪಾರ, ನೈಜ ಮಣಿಯನ್ನು ಕಂಡು ಹಿಡಿಯೋದು ಹೇಗೆ?
ನಮ್ಮಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಅನೇಕ ದಾರಿಗಳಿವೆ. ಅವೂಗಳಲ್ಲಿ ರುದ್ರಾಕ್ಷ ಧಾರಣೆಯೂ ಒಂದು. ಭಾರತದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಬೆಳೆಯುವ ಈ ರುದ್ರಾಕ್ಷಿಯೊಂದು ಅಪರೂಪದ ಸಸ್ಯ ಸಂಕುಲ. ಆದರೆ, ಇದರ ನಾಟವನ್ನು ರೈಲ್ವೆ ಸ್ಲೀಪರ್ಸ್ ಮಾಡಲು ಬಳುಸುವುದರಿಂದ, ಇದು ಸಿಗುವುದೇ ಅಪರೂಪವಾಗುತ್ತಿದೆ.
ನಮ್ಮಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಅನೇಕ ದಾರಿಗಳಿವೆ. ಅವೂಗಳಲ್ಲಿ ರುದ್ರಾಕ್ಷ ಧಾರಣೆಯೂ ಒಂದು. ಭಾರತದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಬೆಳೆಯುವ ಈ ರುದ್ರಾಕ್ಷಿಯೊಂದು ಅಪರೂಪದ ಸಸ್ಯ ಸಂಕುಲ. ಆದರೆ, ಇದರ ನಾಟವನ್ನು ರೈಲ್ವೆ ಸ್ಲೀಪರ್ಸ್ ಮಾಡಲು ಬಳುಸುವುದರಿಂದ, ಇದು ಸಿಗುವುದೇ ಅಪರೂಪವಾಗುತ್ತಿದೆ.
ನೇಪಾಳ, ಬರ್ಮಾ, ಥೈಲಾಂಡ್ ಹಾಗೂ ಇಂಡೋನೇಷ್ಯಾದಲ್ಲಿ ಈ ರುದ್ರಾಕ್ಷಿ ಹೆಚ್ಚಾಗಿ ಸಿಗುತ್ತದೆ. ದಕ್ಷಿಣ ಭಾರತ ಪಶ್ಚಿಮ ಘಟ್ಟಗಳಲ್ಲಿಯೂ ಸಿಗುವ ಈ ರುದ್ರಾಕ್ಷಿಯಲ್ಲಿ ವಿಶೇಷ ಕಂಪನದ ಪ್ರಭಾವವಿದ್ದು, ದೈವಿಕ ಶಕ್ತಿ ಇದೇ ನಂಬಲಾಗುತ್ತದೆ.
ಶಿವನ ಕಣ್ಣೀರು ಭೂಮಿಗೆ ಬಿದ್ದಾಗ, ಹಣ್ಣುಗಳಿರುವ ಮರ ಹುಟ್ಟಿತಂತೆ. ಶಿವನ ಕಣ್ಣೀರು ಮತ್ತು ಬೆಸುಗೆಯಿಂದ ಪ್ರಬಲ ಮಣಿಗಳಾಗಿ, ರುದ್ರಾಕ್ಷಿ ಎಂಬ ಹೆಸರಲ್ಲಿ ರೂಪುಗೊಂಡಿತಂತೆ. ಇದು ಸದಾ ಮಾನವಕುಲಕ್ಕೆ ಒಳಿತನ್ನೇ ಮಾಡುತ್ತಿದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಒಂದು ಕಣ್ಣು, ತ್ರೀ ನೇತ್ರ, ಪಂಚಮುಖ...ಹೀಗೆ ವಿಭಿನ್ನ ರೀತಿಯ ರುದ್ರಾಕ್ಷಗಳಿದ್ದು, ಒಂದೊಂದಕ್ಕೆ ಒಂದೊಂದು ಮಹತ್ವವಿದೆ.
ರುದ್ರಾಕ್ಷ ಧಾರಣೆಯಿಂದೇನು ಲಾಭ ಗೊತ್ತಾ?
- ವಿಭಿನ್ನ ಕಡೆಗಳಲ್ಲಿ ನಿದ್ರಿಸುವವರಿಗೆ ಈ ರುದ್ರಾಕ್ಷಿ ತಮ್ಮ ಶಕ್ತಿಯನ್ನು ರಕ್ಷಿಸುಕೊಳ್ಳುವಲ್ಲಿ ನೆರವಾಗುತ್ತದೆ. ಕೆಲವೊಂದೆಡೆ ಮಲಗಿದ ಕೂಡಲೇ ನಿದ್ರಿಸಿ ಬಿಡುತ್ತೇವೆ, ಮತ್ತೆ ಕೆಲವೆಡೆ ಸುಸ್ತಾದರೂ ನಿದ್ರೆ ಬರೋಲ್ಲ. ಅದಕ್ಕೆ ನಮ್ಮ ಶಕ್ತಿಯನ್ನೇ ಸುಪ್ತಗೊಳಿಸಿಕೊಳ್ಳಲು ಈ ರುದ್ರಾಕ್ಷಿ ನೆರವಾಗುತ್ತದೆ.
- ಸಾಧು, ಸಾನ್ಯಾಸಿಗಳು ಕಾಡಲ್ಲಿ ಹೆಚ್ಚು ನೆಲೆಸುತ್ತಾರೆ. ಆದರೆ, ಎಲ್ಲಿಯಾಯಿತೋ, ಅಲ್ಲಿ ನೀರು ಕುಡಿಯುವುದಿಲ್ಲ. ವಿಷಯುಕ್ತವಾಗಿಯೂ ಇರಬಹುದಾದ ಸಾಧ್ಯತೆ ಇರುವ ಈ ನೀರನ್ನು ಕುಡಿದರೆ, ಸಾಯುವ ಸಾಧ್ಯತೆಯೂ ಇರುತ್ತದೆ. ವಿಷವಿಲ್ಲದ ನೀರನ್ನು ಕಂಡು ಹಿಡಿಯುವುದು ಈ ರುದ್ರಾಕ್ಷಿಯಿಂದಲೇ. ನೀರಿನ ಮೇಲೆ ರುದ್ರಾಕ್ಷಿಯನ್ನು ಹಾಕಿದರೆ, ಪ್ರದಕ್ಷಿಣೆಯಾಗಿ ತಿರುಗಿದರೆ ನೀರು ಕುಡಿಯಲು ಯೋಗ್ಯವೆಂದರ್ಥ. ಅಪ್ರದಕ್ಷಿಣೆ ಹಾಕಿದರೆ, ಕುಡಿಯಲು ಯೋಗ್ಯವಲ್ಲವೆಂದರ್ಥ. ಇದೇ ರೀತಿ ಆಹಾರದ ಗುಣಮಟ್ಟವನ್ನೂ ಕಂಡು ಹಿಡಿಯಲು ಇದೇ ಮಾರ್ಗವನ್ನು ಅನುಸರಿಸಲಾಗುತ್ತದೆ.
-ಋಣಾತ್ಮಕ ಶಕ್ತಿಯನ್ನು ಇದು ಹೋಗಲಾಡಿಸುತ್ತದೆ. ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರುವುದನ್ನು ಇದು ತಡೆಯುತ್ತದೆ.
ನೈಜ ರುದ್ರಾಕ್ಷವನ್ನು ಕಂಡು ಹಿಡಿಯುವುದು ಹೇಗೆ?
ರುದ್ರಾಕ್ಷಿ ಮಹತ್ವವನ್ನು ಜನರು ಅರಿತುಕೊಳ್ಳುವುದು ಹೆಚ್ಚಾದಂತೆ, ಬಾದ್ರಾಕ್ಷ ಎಂಬ ರುದ್ರಾಕ್ಷಿಯನ್ನೇ ಹೋಲುವ ಮಣಿಯನ್ನು ಮಾರಲಾಗುತ್ತಿದೆ. ಉತ್ತರ ಪ್ರದೇಶ, ಬಿಹಾರಗಳಲ್ಲಿ ಹೆಚ್ಚಾಗಿ ಬೆಳೆಯುವ ಇದು ವಿಷಕಾರಿ ಬೀಜ. ವಿಷಯುತವಾದ ಇದನ್ನು ದೇಹದ ಮೇಲೆ ಧರಿಸಲೇಬಾರದು. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗೊತ್ತಾಗುವ ಈ ಬೀಜವನ್ನು ಹಲವು ಅಧಿಕೃತ ಮಾರಾಟಗಾರರೂ ಮಾರುತ್ತಿದ್ದು, ಕೊಳ್ಳುವಾಗ ಹೆಚ್ಚು ಎಚ್ಚರದಿಂದ ಇರುವುದೊಳಿತು.
PHOTO CREDIT: Isha Foundation Website