Asianet Suvarna News Asianet Suvarna News

ಸೆಕ್ಸ್ಟ್ ಮಾಡುವವರಿಗಿದೆ ಆತಂಕಗೊಳಿಸುವ ಸುದ್ದಿ

ನಿರಂತರವಾಗಿ ಸೆಕ್ಸ್ಟಿಂಗ್ ಮಾಡುವವರು ಸೆಕ್ಸ್ಟಿಂಗ್ ಮಾಡದವರಿಗಿಂತ ಹೆಚ್ಚಿನ ಲೈಂಗಿಕ ಸಂತೃಪ್ತಿ ಹೊಂದಿರುತ್ತಾರೆ ಎಂದು ಈ ಹಿಂದೆ ಅಧ್ಯಯನಗಳು ತಿಳಿಸಿತ್ತು.

Sexting Can Negatively Impact Relationship Says Study

ಸೆಕ್ಸ್ಟಿಂಗ್ ಮಾಡುವುದು ಸಂಬಂಧವನ್ನು ಉತ್ತಮಗೊಳಿಸುತ್ತದೆ ಎಂದು ಕೆಲವರು ಭಾವಿಸಿರಬಹುದು, ಆದರೆ ಹೊಸ ಅಧ್ಯಯನವೊಂದು ವ್ಯತಿರಿಕ್ತವಾದ ಅಂಶಗಳನ್ನು ಬಹಿರಂಗಪಡಿಸಿದೆ.

ಅಲ್ಬರ್ಟಾ ವಿವಿಯ ಸಂಶೋಧನಾಕಾರರು, ಸೆಕ್ಸ್ಟಿಂಗ್ ಅಭ್ಯಾಸ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಸೆಕ್ಸ್ಟಿಂಗ್ ಮಾಡುವ ಸುಮಾರು 615 ಮಂದಿಗಳನ್ನು ಅಧ್ಯಯನ ಮಾಡಿದಾಗ ಕೆಲವು ಆತಂಕಕಾರಿ ಅಂಶಗಳು ಹೊರಬಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸೆಕ್ಸ್ಟಿಂಗ್ ಅಭ್ಯಾಸವು ಸಂಬಂಧಗಳನ್ನು ಹಾಳುಮಾಡುವ ಸಾಧ್ಯತೆಗಳು ಕೂಡ ಅಧ್ಯಯನದಿಂದ ತಿಳಿದುಬಂದಿದೆ. ಸೆಕ್ಸ್ಟಿಂಗ್ ಮಾಡುವವರು ಸಂಬಂಧದ ಬಗ್ಗೆ ಅಸುರಕ್ಷತೆ ಭಾವನೆ ಹೊಂದಿರುತ್ತಾರಲ್ಲದೇ, ಸಂಬಂಧಗಳ ಬಗ್ಗೆ ಬದ್ಧತೆ ಕೂಡಾ ಕಡಿಮೆಯಿರುತ್ತದೆ ಎಂದು ಹೇಳಲಾಗಿದೆ.

ಅತೀ ಹೆಚ್ಚು ಸೆಕ್ಸ್ಟಿಂಗ್ ಮಾಡುವವರು ಸಂಬಂಧಗಳ ಇತರ ಆಯಾಮಗಳ ಬಗ್ಗೆ ಅತೀ ಕಡಿಮೆ ಸಂತೃಪ್ತಿ ಹೊಂದಿರುತ್ತಾರೆ ಎನ್ನಲಾಗಿದೆ. ಅಂಥವರು ಸಂಬಂಧಗಳಲ್ಲಿ ‘ಸೆಕ್ಸ್’ಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಇತರ ವಿಷಯಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿರುತ್ತಾರೆ ಎಂದು ಅಧ್ಯಯನವು ತಿಳಿಸಿದೆ.

ಸೆಕ್ಸ್ಟಿಂಗ್ ತಂತ್ರಜ್ಞಾನಾಧಾರಿತ ಅಭ್ಯಾಸವಾಗಿರುವುದರಿಂದ, ಅಂಥವರು ಸಂಗಾತಿಯ ಜೊತೆ ಫೋನ್ ಮೂಲಕವೇ ಹೆಚ್ಚು ಸಮಯವನ್ನು ಕಳೆಯುತ್ತಾರೆಂಬುವುದನ್ನು ಸೂಚಿಸುತ್ತದೆ.  

ನಿರಂತರವಾಗಿ ಸೆಕ್ಸ್ಟಿಂಗ್ ಮಾಡುವವರು ಸೆಕ್ಸ್ಟಿಂಗ್ ಮಾಡದವರಿಗಿಂತ ಹೆಚ್ಚಿನ ಲೈಂಗಿಕ ಸಂತೃಪ್ತಿ ಹೊಂದಿರುತ್ತಾರೆ ಎಂದು ಈ ಹಿಂದೆ ಅಧ್ಯಯನಗಳು ತಿಳಿಸಿತ್ತು.

Follow Us:
Download App:
  • android
  • ios