ಎಣ್ಣೆ ಅಭ್ಯಂಜನ ಮನಸ್ಸಿಗೂ, ದೇಹಕ್ಕೂ ಮುದ ನೀಡುತ್ತೆ. ಅಲ್ಲದೇ, ಅನೇಕ ಆರೋಗ್ಯ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ನಿಮಗೆ ಸೂಟ್ ಆಗೋ ಎಣ್ಣೆಯಿಂದ ಮಸಾಜ್ ಮಾಡಿಕೊಂಡು, ಸ್ನಾನ ಮಾಡಿದರೊಳಿತು. ಎಳ್ಳೆಣ್ಣೆಯಿಂದೇನು ಪ್ರಯೋಜನ?
ಎಳ್ಳಿನಲ್ಲಿ ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಮೆಗ್ನೆಷಿಯಂ, ವಿಟಾಮಿನ್ ಬಿ1 ಮೊದಲಾದ ಅಗತ್ಯ ಅಂಶಗಳಿವೆ. ಇದು ಅರೋಗ್ಯ ಉತ್ತಮವಾಗಿಡಲು ಸಹಕರಿಸುತ್ತದೆ. ಎಳ್ಳೆಣ್ಣೆಯನ್ನು ಬಳಕೆ ಮಾಡಿದರೆ ತ್ವಚೆ ಇನ್ನಷ್ಟು ಹೊಳೆಯಲು, ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ: ಸಾಸಿವೆ ಇದ್ದರೆ ಸೊರಗೋಲ್ಲ ಆರೋಗ್ಯ
- ಎಳ್ಳೆಣ್ಣೆ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
- ಕಣ್ಣುಗಳು ಮಿಂಚಬೇಕು ಮತ್ತು ನಿಮ್ಮ ವಯಸ್ಸು ತಿಳಿಯಬಾರದು ಎಂದರೆ ನಿತ್ಯ ರಾತ್ರಿ ಮಲಗುವ ಮುನ್ನ ಎಳ್ಳೆಣ್ಣೆಯನ್ನು ಕಣ್ಣಿನ ಕೆಳಗೆ ಸುಕ್ಕಾದ ಚರ್ಮಕ್ಕೆ ಹಚ್ಚಿ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಎಳ್ಳೆಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ, ಅಭ್ಯಂಜನ ಮಾಡಿದರೆ, ಚರ್ಮ ರೋಗಗಳು ನಿವಾರಣೆಯಾಗುತ್ತವೆ.
- ಶರೀರದಲ್ಲಿ ಊತ, ನೋವು ಕಾಣಿಸಿಕೊಂಡರೆ ಎಳ್ಳೆಣ್ಣೆ ಬಳಸಿ.
- ಎಳ್ಳೆಣ್ಣೆ ಹಚ್ಚಿದರೆ, ಗಾಯ ಮಾಗುತ್ತದೆ.
- ಮುಖದ ಮೇಲಿನ ಎಳ್ಳೆಣ್ಣೆ ಮಸಾಜ್ ಮಾಡುವುದರಿಂದ ಮುಖದ ಪೋರ್ಸ್ ಬಂದ್ ಆಗುತ್ತದೆ.
- ತಲೆಯಲ್ಲಿ ಹೊಟ್ಟಿದ್ದರೆ, ಎಳ್ಳೆಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ಡ್ರೈನೆಸ್ ಸಹ ಕಡಿಮೆ ಆಗುವುದು ಕಡಿಮೆ ಆಗುವುದು. ಕೂದಲುದುರುವುದು ಕಡಿಮೆಯಾಗುತ್ತದೆ.
- ಟ್ಯಾನ್, ಡ್ರೈ ಸ್ಕಿನ್ ಸಮಸ್ಯೆಗೆ ಎಳ್ಳೆಣ್ಣೆ ಬೆಸ್ಟ್ ಮದ್ದು.
- ಎಳ್ಳೆಣ್ಣೆಗೆ ಆಪಲ್ ಸೀಡರ್ ವಿನೆಗರ್ ಮತ್ತು ನೀರು ಬೆರೆಸಿ ಪ್ರತಿದಿನ ಮಸಾಜ್ ಮಾಡಿದರೆ ಮುಖ ಸುಕ್ಕಾಗಿರುವುದು ನಿವಾರಣೆಯಾಗುವುದು. -ತುರಿಕೆಗೆ ಎಳ್ಳೆಣ್ಣೆ ಮಸಾಜ್ ಬೆಸ್ಟ್ ಮದ್ದು.
- ಪಾದಗಳ ಚರ್ಮ ಬಿರುಕು ಬಿಟ್ಟಿದ್ದರೆ, ಎಳ್ಳೆಣ್ಣೆ ಹಚ್ಚಿ. ಸರಿ ಹೋಗುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Aug 10, 2018, 4:07 PM IST