ಪ್ಯಾನ್ ಇಂಡಿಯಾ ನಿರ್ದೇಶಕನ ಆತ್ಮ ನಿವೇದನೆ

ಮೂಲತಃ ತೆಲುಗು ನಿರ್ದೇಶಕ, ಪ್ರಸ್ತುತ ಪ್ಯಾನ್ ಇಂಡಿಯಾ ನಿರ್ದೇಶಕ ಪುರಿ ಜಗನ್ನಾಥ್‌ ತನ್ನನ್ನು ಕಾಡಿದ, ತನ್ನನ್ನು ರೂಪಿಸಿದ ಹೊಳಕುಗಳನ್ನು ಪಾಡ್‌ಕಾಸ್ಟ್‌ ಮೂಲಕ ಹಂಚುತ್ತಿರುತ್ತಾರೆ. ಅದರ ಅನುವಾದ ಇಲ್ಲಿದೆ. 

Self Declaration of Pan India Director Vin

ಅನು: ಆರ್. ಕೇಶವಮೂರ್ತಿ

ಬೇಟೆ
ಮಂಗಳವಾರ ಒಳ್ಳೆಯ ದಿನ ಅಲ್ಲವೆಂದು ಒಂದು ಕತ್ತೆಗೂ ಕನ್ವಿನ್ಸ್ ಮಾಡಕ್ಕೆ ಆಗಲ್ಲ. ಶ್ರಾವಣ ಶುಕ್ರವಾರ ಸ್ನಾನ ಮಾಡಿದರೆ ಸ್ವರ್ಗಕ್ಕೆ ಹೋಗುತ್ತೇವೆ ಎಂದು ಕೋತಿಗೂ ಒಪ್ಪಿಸಲಿಕ್ಕೆ ಆಗಲ್ಲ. ಪ್ರಪಂಚದಲ್ಲಿ ಇರುವ ಯಾವ ಪ್ರಾಣಿಯೂ ಇಂಥ ಫಿಕ್ಷನಲ್ ಸ್ಟೋರಿಗಳನ್ನು ನಂಬಲ್ಲ. ಅವು ನಿಜವನ್ನೇ ನಂಬುತ್ತವೆ. ಆದರೆ, ಬೂದಿ ಬಳಿದುಕೊಂಡರೆ ದೆವ್ವ ಬರಲ್ಲ ಎಂದು ಹೇಳಿದರೆ ಮನುಷ್ಯರಾದ ನಾವು ನಂಬುತ್ತೇವೆ. ಈ ಕಲ್ಲು ಮನೆಯೊಳಗೆ ಇಟ್ಟುಕೊ, ಈ ಬಣ್ಣದ ಉಂಗುರ ಬೆರಳಿಗೆ ಹಾಕಿಕೋ, ಆಗ ನೀನು ಪ್ರಪಂಚವನ್ನೇ ಆಳ್ತಿಯಾ ಎಂದರೆ ನಾವು ನಂಬುತ್ತೇವೆ.

ಮನುಷ್ಯ ಮೈಗ್ರೇಟ್ ಆಗುತ್ತಿದ್ದಷ್ಟು ದಿನ ಚೆನ್ನಾಗಿಯೇ ಇದ್ದ. ಅರ್ಥಾತ್ ಆತ ಬದುಕಿನ ಸ್ಥಾವರ ಹುಡುಕುತ್ತಾ ಹೋದಂತೆ ವಾಸ್ತವದಲ್ಲೇ ಜೀವಿಸುತ್ತಿದ್ದ. 7 ಸಾವಿರ ವರ್ಷಗಳ ಹಿಂದೆ ವ್ಯವಸಾಯ ಕಂಡು ಹಿಡಿದ. ಒಂದು ಕಡೆ ನಿಂತ. ಆ ನಂತರ ಬೇಟೆಯಾಡುವುದನ್ನು ಕೈ ಬಿಟ್ಟ. ಮನೆ ಸುತ್ತ ಭೂಮಿ, ವ್ಯವಸಾಯ ಮಾಡಲು ಶುರು ಮಾಡಿದೆ. ಕೈಗೇ ಅನ್ನದ ತಟ್ಟೆ ಬಂತು. ಕೆಲಸ ಕಡಿಮೆ ಆಯಿತು. ಅಂದರೆ ದುಡಿಮೆಯನ್ನು ಕಡಿಮೆ ಮಾಡಿಕೊಂಡ. ಆಗಲೇ ಫಿಕ್ಷನಲ್ ಸ್ಟೋರಿಗಳು ಹುಟ್ಟಿಕೊಂಡವು.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ವಲಸೆ ನಿಲ್ಲಿಸಿ, ಒಂದು ಕಡೆ ಕೂತು ತಿನ್ನಕ್ಕೆ ಶುರು ಮಾಡಿಕೊಂಡ ಮೇಲೆ ಈ ಫಿಕ್ಷನಲ್ ಸ್ಟೋರಿಗಳನ್ನು ಕೇಳುವುದು ಮಾತ್ರವಲ್ಲ, ಅದೇ ನಿಜವೆಂದು ನಂಬಲು ಶುರು ಮಾಡಿದ. ಅಲ್ಲಿಂದ ಎಲ್ಲ ದರಿದ್ರಗಳು ಮನುಷ್ಯನಿಗೆ ಸುತ್ತಿಕೊಂಡವು.

ಈ ಹಂತದಲ್ಲೇ ದೇವರು, ಧರ್ಮ ಕೂಡ ಹುಟ್ಟಿಕೊಂಡಿತು. ಬಿಲೀಫ್ ಸಿಸ್ಟಮ್‌ಗಳು (ನಂಬಿಕೆ ಪ್ರಪಂಚ) ತಯಾರಾದವು. ಇವುಗಳ ಮಧ್ಯೆ ಬೆಳೆದ್ವಿ. ಪ್ರಶ್ನೆ ಮಾಡೋ ಧೈರ್ಯ ಕಳೆದುಕೊಂಡ್ವಿ. ನಾಲ್ಕು ಜನರ ಜತೆ ಸೇರಿ ನಾರಾಯಣ, ಗುಂಪಲ್ಲಿ ಗೋವಿಂದ ಎಂದು ಹೇಳುವ ಹಂತಕ್ಕೆ ಬಂದ್ವಿ. ಯಾರೋ ಒಬ್ಬರನ್ನು ಫಾಲೋ ಮಾಡುವುದಕ್ಕೆ ಆರಂಭಿಸಿದ್ವಿ. ಆದರೆ, ಮೈಗ್ರೇಟ್ ಆಗುತ್ತಲೇ ಇರುವ ಪ್ರಾಣಿಗಳು ನಿಜಾಂಶ- ವಾಸ್ತವದಲ್ಲೇ ಬದುಕುತ್ತಿವೆ. ವಲಸೆ ನಿಲ್ಲಿಸಿದ ಮಾನವ- ಮನುಷ್ಯ ಮಾತ್ರ ಸುಳ್ಳಿನಲ್ಲಿ ಬದುಕುತ್ತಿದ್ದಾನೆ. ಅಂದರೆ ಕೂತು ತಿನ್ನಕ್ಕೆ ಶುರು ಮಾಡಿದ ಮೇಲೆ, ಕೈಗೆ ಅನ್ನದ ತಟ್ಟೆ ಬಂದ ಮೇಲೆ, ಬೇಟೆ ನಿಲ್ಲಿಸಿದ ಮೇಲೆ ಮನುಷ್ಯ ಅಲರ್ಟ್ ಆಗಿಲ್ಲ.

ಆದರೆ, ಬೇಟೆಗಾರ ಮಾತ್ರ ಯಾವಾಗಲೂ ಅಲರ್ಟ್ ಆಗಿರಕ್ಕೆ ಸಾಧ್ಯ. ಹೀಗಾಗಿ ನಿಮ್ಮ ಬೇಟೆ ನಿಲ್ಲಿಸಬೇಡಿ, ನಿಮ್ಮ ಊರಲ್ಲಿ ಇರಬೇಡಿ. ಹೊಟ್ಟೆ ತುಂಬಿದವನ ಪಕ್ಕದಲ್ಲಂತೂ ಖಂಡಿತ ಕೂರಬೇಡಿ.

ಅಮೆರಿಕಾ...
ಅಮೆರಿಕಾಗೆ ಚರಿತ್ರೆ ಇಲ್ಲ. ಆದರೆ ಭಾರತೀಯರಾದ ನಮಗೆ ಚರಿತ್ರೆ ಇದೆ. ಅಮೆರಿಕಾ ಕುರಿತು ಮಾತನಾಡಿಕೊಳ್ಳಲು ಏನೂ ಇಲ್ಲ. ಆದರೆ, ಇಂಡಿಯಾ ಕುರಿತು ಮಾತನಾಡಿಕೊಳ್ಳುವುದಕ್ಕೆ ಹಲವು ದಶಕಗಳ ಇತಿಹಾಸ, ಪರಂಪರೆ, ಸಂಸ್ಕೃತಿ ಇದೆ. ಆದರೆ, ಈ ಚರಿತ್ರೆಯಿಂದಲೇ ನಾವು ಉದ್ಧಾರ ಆಗುತ್ತಿಲ್ಲ. 97 ವರ್ಷದ ಮುದುಕ ಕೂಡ ಭವಿಷ್ಯದ ಕುರಿತು ಆಲೋಚನೆ ಮಾಡಲ್ಲ. ಗತದಲ್ಲೇ ಸಿಕ್ಕಿಕೊಂಡಿದ್ದಾನೆ. ಅಂದರೆ ಹಿಂದಿನ ಚರಿತ್ರೆಯನ್ನೇ ಮೆಲುಕು ಹಾಕಿಕೊಂಡು ಕೂತಿದ್ದಾನೆ. ನಮ್ಮ ಕಾಲ ಹೇಗಿತ್ತು ಗೊತ್ತಾ... ಎನ್ನುತ್ತಾ ಹಿಂದಕ್ಕೆ ಹೋಗುವ ಪ್ರಯತ್ನ ಮಾಡುತ್ತಾನೆ ಹೊರತು, ಮುಂದಕ್ಕೆ ಹೋಗುವ ಸಾಹಸ ಮಾಡಲಾರ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಹಳೆಯದನ್ನು ಸಿಹಿಯಾದ ನೆನಪುಗಳು ಎಂದು ಅವುಗಳನ್ನೇ ಮೆಲುಕು ಹಾಕುತ್ತ ಕಾಲ ಕಳೆಯುತ್ತಾನೆ. ನೋ ಫ್ಯೂಚರ್ ಥಿಂಕಿಂಗ್. ಹೋಗ್ಲಿ ಇಷ್ಟು ವರ್ಷಗಳ ಚರಿತ್ರೆ- ಪರಂಪರೆಯಿಂದ ನಾವೇನಾದರೂ ಕಲಿತಿದ್ದೇವೆಯೇ ಅಂದರೆ ಅದೂ ಇಲ್ಲ! ವೇದ, ಉಪನಿಷತ್ತುಗಳನ್ನು ನೆನಪಿಸಿಕೊಂಡು ಉಬ್ಬಿ ಹೋಗುವುದು ಬಿಟ್ಟರೆ, ಎಂದಾದರೂ ಬಗ್ಗಿ ನೋಡಿದ್ದೇವೆಯೇ ಅಂದರೆ ಇಲ್ಲ.

ಯಾರ ಮನೆಯಲ್ಲೂ ಭಗದ್ಗೀತೆ ಪುಸ್ತಕ ಇರಲ್ಲ. ಇದ್ದರೂ ಅದರಲ್ಲೇನಿದೆ ಎಂದು ಓದಲ್ಲ-ತಿಳಿಯಲ್ಲ. ಮನೆಯಲ್ಲಿ ಯಾರಾದರೂ ಸತ್ತಾಗಲೇ ಘಂಟಸಾಲ ಕ್ಯಾಸೆಟ್- ಹಾಡನ್ನು ಪ್ಲೇ ಮಾಡುತ್ತೇವೆ. ಹೋಗ್ಲಿ ಆಗಲಾದರೂ ಆ ಗೀತೆಯನ್ನು ಆಲಿಸುತ್ತೇವೆಯೇ ಎಂದರೂ ಅದೂ ಇಲ್ಲ. ಘಂಟಸಾಲ ಹಾಡುತ್ತಿದ್ದರೆ ಯಾರೋ ಇನ್ನಾರನ್ನೋ ಹಿಡಿದುಕೊಂಡು ಅಳುತ್ತಿರುತ್ತೇವೆ. ನಾನು ಹೇಳಕ್ಕೆ ಹೊರಟಿರುವುದು ಇಷ್ಟೇ, ದಶಕಗಳ ಇತಿಹಾಸ ಇಟ್ಟುಕೊಂಡಿರುವ ಭಾರತೀಯರು ಮುದುಕರಂತೆ ತಯಾರಾಗಿದ್ದೇವೆ. ಹಾಗೇ ಯೋಚನೆ ಕೂಡ ಮಾಡುತ್ತಿದ್ದೇವೆ. ಮತ್ತು ಭೂತದಲ್ಲೇ ಬದುಕುತ್ತಿದ್ದೇವೆ. ನಾವು ಯಾವುದನ್ನೂ ಓದುತ್ತಿಲ್ಲ, ಕಲಿಯುತ್ತಿಲ್ಲ, ಹೊಸದಾಗಿ ಯೋಚಿಸುತ್ತಿಲ್ಲ. ಕಲಿಯಬೇಕೆಂಬ ಮನಸ್ಸು- ಮೂಡು ಎರಡೂ ಇಲ್ಲ. ಆದರೆ, ಅಮೆರಿಕಗೆ ಯಾವ ಚರಿತ್ರೆಯೂ ಇಲ್ಲದೆ ಹೋಗಿದ್ದರಿಂದ ಮುಗ್ಧ ಮಕ್ಕಳಂತೆ ಎಲ್ಲವನ್ನೂ ಕಲಿಯುತ್ತಿದ್ದಾರೆ.

ಧರ್ಮ
ಈಗ ನಾನು ಹೇಳೋದನ್ನು ಕೇಳಿದ ಮೇಲೆ ನೀವು ನನ್ನ ಮೇಲೆ ಸಿಟ್ಟು ಮಾಡಿಕೊಳ್ಳಬಹುದು. ಆದರೆ, ಕೋಪಿಸಿಕೊಳ್ಳುವ ಮುನ್ನ ಒಂದೆರಡು ನಿಮಿಷ ನನ್ನ ಮಾತು ಕೇಳಿ. ನಿಮಗೆ ಗೊತ್ತಿದೆಯೋ ಇಲ್ಲವೋ ಹಲವು ದೇಶಗಳಲ್ಲಿ ಜನರು ದೇವ-ಮಂದಿರಗಳಿಗೆ ನಮಿಸಿ, ಪ್ರಾರ್ಥಿಸುವುದನ್ನು ಬಿಟ್ಟಿದ್ದಾರೆ. ಅತೀ ದೊಡ್ಡ ಸಂಖ್ಯೆಯಲ್ಲಿ ಈ ದೇಶಗಳಲ್ಲಿನ ಜನ ಧರ್ಮದ ವಿಚಾರಗಳಿಂದ ಆಚೆ ಬಂದಿದ್ದಾರೆ. ಹೀಗೆ ಧರ್ಮಗಳಿಂದ ಆಚೆ ಬಂದಿರುವ ಕೆಲ ದೇಶಗಳ ಹೆಸರುಗಳನ್ನು ಹೇಳುತ್ತೇನೆ ಕೇಳಿ.

ಜೆಕ್ ರಿಪಬ್ಲಿಕ್, ಎಸ್ತೋನಿಯಾ, ನೆದರ್‌ಲ್ಯಾಂಡ್, ವಿಯೆಟ್ನಾಮ್, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಸ್ವೀಡನ್, ಯುಕೆ, ಅಲ್ಬೇನಿಯ, ಜಪಾನ್, ಚೈನಾ, ನ್ಯೂಜಿಲೆಂಡ್, ರಷ್ಯಾ, ಬೆಲಾರಸ್, ಉರುಗ್ವೆ, ಫ್ರಾನ್ಸ್, ಕ್ಯೂಬಾ, ಫಿನ್‌ಲ್ಯಾಂಡ್, ಹಂಗರಿ, ಐಸ್ಲ್ಯಾಂಡ್, ಲಾಟ್ವಿಯಾ, ಚಿಲಿ, ಬೆಲ್ಜಿಯಂ. ಈ ದೇಶಗಳಲ್ಲಿ ಶೇ.52 ರಿಂದ 70ರಷ್ಟು ಜನ ಧರ್ಮ-ಮಂದಿರದ ವಿಚಾರಗಳಿಂದ ದೂರ ಬಂದಿದ್ದಾರೆ.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ದೇವ-ಮಂದಿರ ಕೈ ಬಿಟ್ಟ ಈ ದೇಶಗಳ ಕ್ರೈಮ್ ರೇಟು ಚೆಕ್ ಮಾಡಿ, ತುಂಬಾ ಕಡಿಮೆ ಇದೆ. ದಾಳಿ, ರಾಬರಿ, ಕೊಲೆ, ಬೆದರಿಕೆಗಳು ಧರ್ಮ-ಮಂದಿರ ಪರವಾದ ದೇಶಗಳಲ್ಲೇ ಹೆಚ್ಚು ನಡೆಯುತ್ತಿರುತ್ತವೆ. ದೇವ-ಮಂದಿರಗಳಿಗಾಗಿ ದೇಶಗಳು ಹೊಡೆದಾಡಿಕೊಂಡು ಸಾಯುತ್ತಿರುತ್ತವೆ. ಎಲ್ಲಾ ಧರ್ಮಗಳು ಮನಃಶಾಂತಿಗಾಗಿಯೇ ಅಂತಾರೆ. ಆದರೆ, ದೇಶಕ್ಕಾಗಿ ನಡೆಯುವ ಯುದ್ಧಗಳಿಗಿಂತ ಧರ್ಮಕ್ಕಾಗಿ ನಡೆದ ಯುದ್ಧಗಳಲ್ಲೇ ಹೆಚ್ಚು ಮಂದಿ ಸಾವು ಕಂಡಿದ್ದಾರೆ.

ನಮ್ಮ ಇಷ್ಟದ ನಂಬಿಕೆಗಳ ಬಗ್ಗೆ ಬೇರೆ ಯಾರಾದರೂ ಕಡಿಮೆ ಮಾಡಿ ಮಾತನಾಡಿದರೆ ಅಂಥವನನ್ನು ಕೊಲ್ಲಬೇಕು ಅನಿಸುತ್ತದೆ. ಹಾಗೆ ಕೊಲ್ಲಬೇಕು ಎನ್ನುವ ಮನಸ್ಥಿತಿ ಹುಟ್ಟೋದು ಧರ್ಮದಿಂದಲೇ! ಎಷ್ಟು ದೊಡ್ಡ ಧರ್ಮವಾದರೆ ಅಷ್ಟೇ ದೊಡ್ಡ ಯುದ್ಧ ಮಾಡುತ್ತಾನೆ.

ಅತೀ ದೊಡ್ಡ ಭ್ರಷ್ಟಾಚಾರ ನಡೆಯುವುದು, ಅತೀ ದೊಡ್ಡ ದೇವ-ಮಂದಿರದಲ್ಲೇ! ಎಲ್ಲರು ದೇವ-ಮಂದಿರಕ್ಕೆ ಹೋಗುವುದು ಮನಃಶಾಂತಿಗಾಗಿಯೇ ಅಂತಾರೆ. ಅಂದರೆ ಮನಃಶಾಂತಿ ಇಲ್ಲದಿರುವವರೆಲ್ಲ ದೇವ-ಮಂದಿರಗಳಿಗೆ ಹೋಗುತ್ತಾರೆ ಎಂದಾಯಿತು ಅಲ್ಲವೇ? ದೇ ಆರ್ ಫ್ರಸ್ಟೇಟೆಡ್ ಇನ್ ಲೈಫ್.

ದೆ ವಾಂಟ್ ಆನ್ಸರ್, ಎಕ್ಸ್‌ಪೆಕ್ಟಿಂಗ್ ಲಾಟ್ ಆಫ್ ಮನಿ, ಹೆವೆನ್ ಇತ್ಯಾದಿ. ಈಗಾಗಲೇ ಫ್ರರ್ಸ್ಟೇಟೆಡ್ ಆಗಿರುವವರನ್ನು ಕೆದಕಿದರೆ ದೇ ಬಿಕಮ್ ಮೋರ್ ವೈಲೆಂಟ್. ಅಂದರೆ ಪೀಪಲ್ ವಿಲ್ ಬಿಕಮ್ ವೈಲೆಂಟ್, ಬಿಕಾಸ್ ಆಫ್ ಗಾಡ್. ಅದಕ್ಕೆ ನಾನು ಮೊದಲೇ ಹೇಳಿದ್ದು, ನನ್ನ ಈ ಮಾತು ಕೆಲವರಿಗೆ ಕೋಪ ತರಿಸಬಹುದು ಎಂದು. ನಾನು ಹೇಳೋದು ಕೂಡ ಅದನ್ನೇ, ‘ನನಗೆ ಕೋಪ ಯಾಕೆ ಬರುತ್ತಿದೆ’ ಎಂದು ಒಮ್ಮೆ ಯೋಚಿಸಿ ನೋಡಿ. ದೇವರು ಹುಟ್ಟಿದ್ದೇ ನಮಗಾಗಿ, ನಮ್ಮ ರಕ್ಷಣೆಗಾಗಿಯೇ ಎಂದು ನಾನು-ನೀವು ನಂಬೋದಾದರೆ ದೇವರು ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾನೆ ಅಂತ ಸುಮ್ಮನೆ ಇದ್ದು ಬಿಡೋಣ. ನಮ್ಮ ಕೆಲಸ ನಾವು ಮಾಡೋಣ. ಕೆಲಸವೇ ದೇವರು-ಮಂದಿರ ಮತ್ತು ಪ್ರಾರ್ಥನೆ ಎನ್ನುವ ಭಾವನೆ ಮತ್ತು ನಿಲುವು ನಮ್ಮದಾಗಲಿ. ಒಂದು ವೇಳೆ ನಾವು ದೇವ-ಮಂದಿರಗಳಿಂದ ದೂರ ಇದ್ದರೆ ಅತೀ ಹೆಚ್ಚು ಖುಷಿಪಡೋದು ಆ ಭಗವಂತನೇ ಹೊರತು, ಬೇರಾರೂ ಅಲ್ಲ. ದೇವರು ಅನುಭವಿಸೋ ಈ ಖುಷಿ ಮತ್ತು ಸಂತೋಷ ನಿಮಗೂ ಸಿಗುತ್ತದೆ. ಬೇಕಿದ್ದರೆ ಒಂದು ಸಲ ಇದನ್ನ ಟ್ರೈ ಮಾಡಿ ನೋಡಿ.

‘ಹಾಯ್ ಅಂಕಲ್, ಹಾಯ್ ಆಂಟಿ... ಉಫ್... ದೇವ್ರೆ!’
- ಇದು ತೊಂಭತ್ತು ಮತ್ತು ಎರಡು ಸಾವಿರ ಇಸವಿಯ ನಡುವೆ ಹುಟ್ಟಿದವರ ಬಹು ದೊಡ್ಡ ಸಮಸ್ಯೆ. ಜಸ್ಟ್ ಒಂದೆರೆಡು ವರ್ಷ ಬೇಗ ಭೂಮಿಗೆ ಬಂದ ಪರಿಣಾಮ ಓಲ್ಡ್ ಮಾಡೆಲ್ ಅನಿಸಿಕೊಂಡಿದ್ದೇವೆ. ಶೋರೂಮಿನಲ್ಲಿರುವ ಕಾರ್‌ನಂತೆ!

ಈ ತೊಂಭತ್ತರ ಕಿಡ್ಸ್ ಜರ್ನಿ ಏನಾಯಿತು ಗೊತ್ತಾ? ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಸ್ಕೂಲ್ ಡೇಸ್ ಮುಗಿದಿರುತ್ತದೆ. ನಾಲ್ಕು ಕಾಸು ಕೂಡಿಡೋ ಮೊದಲೇ ಮದುವೆಗಳಾದವು. ಮೊದಲ ಸಂಬಳ ಕೈಗೆ ಬರುವ ಹೊತ್ತಿಗೆ ಮನೆಯಲ್ಲಿ ಇಬ್ಬರು ಮಕ್ಕಳು ಶಾಲೆಗೆ ಹೋಗಲು ರೆಡಿಯಾಗಿ ನಿಂತರು. ಯಾವುದು ಸರಿ, ಯಾವುದು ತಪ್ಪು ಅಂತ ತಿಳಿಯುವಷ್ಟರಲ್ಲಿ ವಯಸ್ಸು ಫಿಫ್ಟಿ ಕ್ರಾಸ್ ಮಾಡಿತು. ಹೋಗ್ಲಿ ಆಗಲಾದರೂ ನಮ್ಮ ಜೀವನದ ಜತೆಗೆ ನಾವೇ ಬದುಕೋಣ, ಹೊಂದಿಕೊಳ್ಳೋಣ ಎಂದುಕೊಳ್ಳುವಷ್ಟರಲ್ಲಿ ಸಾವು ಎದುರಿಗೆ ಬಂದು ನಿಂತ ಪರಿಣಾಮ, ನಾಲ್ಕು ಜನರ ಹೆಗಲು ಏರಿ ಅಂತಿಮ ಪಯಣ ಹೊರಟು ಬಿಡುತ್ತೇವೆ.

ನಮ್ಮ ನಾವೇ ಲೈಫ್ ಟೈಮ್ ಲೈನ್ ನೋಡಿಕೊಂಡರೆ ಛೇ... ಎಂಥ ಜೀವನ ನಮ್ಮದು, ಎಂಥಾ ಕರ್ಮ ಎಂದು ನಮಗೇ ನಾವು ಬೈಯ್ದುಕೊಳ್ಳುತ್ತೇವೆ. ಬ್ಯಾಂಕಾಕ್‌ಗೆ ಹೋಗಕ್ಕೆ ಟೈಮ್ ಇಲ್ಲ. ಹಾಗೇ ತಿರುಗಾಡಿಕೊಂಡು ಬರಲು ಆಗುತ್ತಿಲ್ಲ. ಮನಸ್ಸು ಮಾತ್ರ ಡಿಸ್ಕೋ ಡ್ಯಾನ್ಸ್ ಆಡುತ್ತಿದೆ. ಹೇಗಪ್ಪ ಭಗವಂತ ಎಂದು ನಮ್ಮ ಟೆನ್ಷನ್‌ನಲ್ಲಿ ನಾವು ಇದ್ದಾಗ ಬೇಗ ಮದುವೆ ಆಗಿ 29 ವರ್ಷಕ್ಕೆ ಇಬ್ಬರು ಮಕ್ಕಳು ತಾಯಿ ಆಗಿರುವ ಸರಿತಾ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಸುಕ್ಕು ಕಟ್ಟಬಹುದಾದ ಮುಖಕ್ಕೆ ಯಾವ ಕ್ರೀಮು ಹಚ್ಚಬೇಕೆಂದು. ಅದೇ ಸಮಯಕ್ಕೆ ಪಕ್ಕದ್ಮನೆಯಲ್ಲಿರುವ 20 ವರ್ಷದ ಹುಡುಗಿ ಬಂದು, ಸರಿತಾ ಆಂಟಿ ಅಂತ ಕರೆದರೆ ಹೇಗಿರುತ್ತದೆ? ಎಲ್ಲೋ ಉರಿಯಲ್ವಾ? ಸರಿತಾ ಮೇಲ್ನೋಟಕ್ಕೆ ‘ಏನಮ್ಮ...’ ಅಂತ ಪ್ರತಿಕ್ರಿಯಿಸಬಹುದೇ ಹೊರತು, ಹಾಗೆ ಬಾಗಿಲಲ್ಲಿ ನಿಂತು ಆಂಟಿ ಅಂತ ಕರೆದ ಆ ಹುಡುಗಿಯ ಮೈ ತುಂಬಾ ಬರೆ ಎಳೆಯಬೇಕು ಅನ್ನುವಷ್ಟು ಸಿಟ್ಟು- ಕೋಪ ಬಂದಿರುತ್ತದೆ.

ನನಗೋ ಇನ್ನೂ ನಲವತ್ತು ತುಂಬಿಲ್ಲ. ಒಂದು ದಿನ ಪಬ್‌ಗೆ ಹೋಗಿದ್ದೆ. ಅಲ್ಲೊಬ್ಬಳು ಹುಡುಗಿಯನ್ನು ನೋಡಿ ಪರಿಚಯಿಸಿಕೊಂಡೆ. ಆ ರಂಗುರಂಗಿನ ಬೆಳಕಿನ ಕಾರ್ನರ್ ಟೇಬಲ್‌ನಲ್ಲಿ. ಕೂತು ತುಂಬಾ ಎಕ್ಸೈಟ್‌ ಆಗಿ ಆ ಹುಡುಗಿ ಜತೆ ಮಾತನಾಡುತ್ತಿದ್ದೆ. ಒಬ್ಬ ಅಯೋಗ್ಯ ಅಲ್ಲಿಗೆ ಬಂದ. ಅವನಿಗೆ 25 ವರ್ಷ ವಯಸ್ಸು ಇರಬಹುದು. ಅವನು ನನ್ನ ನೋಡಿದ ಕೂಡಲೇ ‘ಅಂಕಲ್ ನೀವೇನು ಇಲ್ಲಿ, ನೀವೂ ಕೂಡ ಪಬ್‌ಗೆ ಬರ್ತೀರಾ...’ ಅಂತ ರಾಗ ಎಳೆದರೆ ನನಗೆ ಹೇಗಿರುತ್ತದೆ ಹೇಳಿ! ಅವನ ಜುಟ್ಟು ಹಿಡಿದು ಎಳೆದು ಟೇಬಲ್‌ಗೆ ಹಾಕಿ ಬೆನ್ನು ಮೇಲೆ ಬಾಸುಂಡೆ ಬರೋವರೆಗೂ ಗುದ್ದಬೇಕು ಅನಿಸಿತು.

ಈ ಯಂಗ್ ಜನರೇಷನ್‌ಗೆ ನನ್ನ ಒಂದು ಮನವಿ ಇದೆ, ಪ್ಲೀಸ್ ಕೇಳಿಸಿಕೊಳ್ಳಿ. ದಯವಿಟ್ಟು ಅಂಕಲ್, ಆಂಟಿ ಅಂತ ಮಾತ್ರ ನಮ್ಮನ್ನು ಕರೆಯಬೇಡಿ. ಬೇಕಾದರೆ ಸರ್ ಅಂತ ಕರೆಯಿರಿ. ಹೋಗ್ಲಿ ಹೆಸರಿಟ್ಟು ಮಾತನಾಡಿಸಿ. ಇದೂ ಆಗಿಲ್ವಾ ನಟ ಪ್ರಭಾಸ್ ಅವರಂತೆ ಎಲ್ಲರನ್ನೂ ಡಾರ್ಲಿಂಗ್... ಡಾರ್ಲಿಂಗ್ ಅಂತ ಕರೆದು ಬಿಡಿ. ಹಾಗೆ ಕರೆದರೆ ನಮಗೂ ಏನೋ ಆನಂದ ಇರುತ್ತದೆ. ಅಷ್ಟೇ ಹೊರತು, ಅಂಕಲ್, ಆಂಟಿ ಅಂದರೆ ನಿಮ್ಮನ್ನ ಸಾಯಂಗೆ ಹೊಡೆಯಬೇಕು ಅನಿಸುತ್ತದೆ. ಸೋ ಡೋಂಟ್ ಕಾಲ್ ಅಂಕಲ್ ಆಂಡ್ ಆಂಟಿ.

ಬಿಚ್
ನೀವು ನನ್ನ ಈ ಮಾತುಗಳನ್ನು ಒಪ್ಪದೆ ಇರಬಹುದು. ಬಟ್ ಓದಿ.

ಹೆಣ್ಣು ಮಕ್ಕಳು ಎರಡು ರೀತಿ. ಏಂಜಲ್ ಹಾಗೂ ಬಿಚ್. bitch ಎಂದ ಕೂಡಲೇ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಬಿಚ್ ಎಂದರೆ ಬುದ್ಧಿವಂತ ಹುಡುಗಿ ಎಂದರ್ಥ. ಅದು ಹೇಗೆ ಅಂತೀರಾ. ಒಂದು ಉದಾಹರಣೆ ಕೊಡ್ತಿನಿ ಕೇಳಿ. ಆಫೀಸ್ ಕೆಲಸದ ಮೇಲೆ ಗಂಡ ವಿದೇಶಕ್ಕೆ ಹೋಗಿ ಎರಡ್ಮೂರು ದಿನಗಳಾಗಿದ್ದರೂ ಗಂಡ ತನ್ನ ಪತ್ನಿಗೆ ಫೋನ್ ಮಾಡಿಲ್ಲ. ಮೂರನೇಯ ದಿನ ಫೋನ್ ಮಾಡುತ್ತಾನೆ. ಫೋನ್ ತೆಗೆದುಕೊಂಡ ಅವನ ಹೆಂಡತಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಗಂಡ ಗಾಬರಿಯಾಗಿ ಏನಾಯಿತೇ ಎಂದು ಕೇಳುತ್ತಾನೆ. ನೀವು ಮಲೆಷಿಯಾಗೆ ಹೋಗಿ ಎರಡ್ಮೂರು ದಿನ ಕಳೆದರೂ ನನಗೆ ಫೋನ್ ಮಾಡಿಲ್ಲ, ನಿಮಗೆ ಏನಾಗಿದಿಯೋ ಅಂತ ಭಯ ಪಟ್ಟುಕೊಂಡೆ, ಯಾಕೆ ನೀವು ಫೋನ್ ಮಾಡಿಲ್ಲ, ನಿಮ್ಮ ನೆನಪಿನಲ್ಲಿ ನಾನು ಇಡೀ ರಾತ್ರಿ ನಿದ್ದೆನೇ ಮಾಡಿಲ್ಲ, ಊಟ ಸರಿಯಾಗಿ ಮಾಡಿಲ್ಲ ಎಂದು ಹೇಳಿಕೊಂಡು ಮತ್ತೆ ಅಳಕ್ಕೆ ಶುರು ಮಾಡುತ್ತಾಳೆ.

ತನ್ನ ಪತ್ನಿಯ ಅಳುವಿನ ಮಾತುಗಳನ್ನು ಕೇಳಿಸಿಕೊಂಡ ಗಂಡ ಈಗ ಸಿಟ್ಟಾಗುತ್ತಾನೆ. ಏಯ್ ಯಾಕೆ ಪ್ರತಿಯೊಂದಕ್ಕೂ ಅಳ್ತಿಯಾ, ಕೆಲಸದಲ್ಲಿ ಬ್ಯುಸಿ ಆಗಿದ್ದೇ. ಅದಕ್ಕೆ ಫೋನ್ ಮಾಡಕ್ಕೆ ಆಗಿಲ್ಲ. ಫೋನ್ ಮಾಡಿಲ್ಲ ಅಂದ ಕೂಡಲೇ ಏನೋ ಆಗಿಬಿಟ್ಟಿದೆ ಅಂತ ಅಂದುಕೊಳ್ತಿಯಲ್ಲ, ಕರ್ಮ. ಅರ್ಥ ಮಾಡಿಕೊಳ್ಳಬೇಕು ತಾನೆ ಅಂತ ಬಾಯಿಗೆ ಬಂದಂತೆ ಪತ್ನಿಗೆ ಬೈಯ್ದು ಸಿಟ್ಟು ಮಾಡಿಕೊಂಡು ಫೋನ್ ಇಡುತ್ತಾನೆ. ಹೀಗೆ ಗಂಡನಿಂದ ಫೋನ್ ನಲ್ಲಿ ಬೈಸಿಕೊಂಡವಳು ಏಂಜಲ್.

ಒಂದು ವೇಳೆ ಅವನ ಹೆಂಡತಿ ಬಿಚ್ ಆಗಿದ್ದರೆ, ಐ ಮೀನ್ ಬುದ್ಧಿವಂತೆ ಅಂದುಕೊಳ್ಳಿ. ಎರಡು ದಿನಗಳ ನಂತರ ಗಂಡ ಫೋನ್ ಮಾಡಿದರೆ ಆಕೆ ಏಂಜಲ್‌ನಂತೆ ಅಳುವುದಿಲ್ಲ. ‘ಹಾಯ್ ಡಾರ್ಲಿಂಗ್ ಹೌಸ್ ಈಸ್ ಯೂವರ್ ಮಲೆಷಿಯಾ ಟ್ರಿಪ್, ಐ ಹೋಪ್ ಯೂ ಹ್ಯಾವಿಂಗ್ ಎ ಗುಡ್ ಟೈಮ್’ ಅಂತಾಳೆ. ಆಗ ಗಂಡ ಏನ್ ಹೇಳ್ತಾನೆ ಗೊತ್ತಾ, ‘ಸಾರಿ ಡಾರ್ಲಿಂಗ್ ಎರಡು ದಿನಗಳಿಂದ ನಾನು ನಿನಗೆ ಫೋನ್ ಮಾಡಲಿಕ್ಕೆ ಆಗಲಿಲ್ಲ. ಕೆಲಸದಲ್ಲಿ ಬ್ಯುಸಿ ಆಗಿದ್ದೆ. ನನಗೆ ಗೊತ್ತು ನೀನು ಎಷ್ಟು ಗಾಬರಿ ಆಗಿರುತ್ತಿಯಾ ಅಂತ. ಸಾರಿ ಬಂಗಾರಿ’ ಅಂತಾನೆ. ಇಲ್ಲಿ ಗಂಡ ಆದವನು ಸಾರಿ ಯಾರಿಗೆ ಹೇಳಿದ ಅಂತ ನೋಡಿ. ಅಳುತ್ತಿದ್ದ ಏಂಜಲ್‌ನನ್ನು ಬೈಯ್ದು, ಯಾವುದಕ್ಕೂ ಕೇರ್ ಮಾಡದೆ ಇದ್ದ ಬಿಚ್ ಕ್ಯಾಟಗಿರಿ ಹುಡುಗಿಗೆ ಸಾರಿ ಹೇಳಿದ. ಅದಕ್ಕೆ ಲೈಫ್ ನಲ್ಲಿ ಏಂಜಲ್ ಆಗಿರಬೇಡಿ. ಒಂದು ಪುಸ್ತಕ ಇದೆ. Why Men Love Bitches ಅನ್ನೋದು ಆ ಪುಸ್ತಕದ ಹೆಸರು. ಹುಡುಗಿಯರು ಓದಲೇಬೇಕಾದ ಪುಸ್ತಕ ಅದು. ಗಂಡನನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅಂತ ಗೊತ್ತಾಗುತ್ತದೆ. ಅಂದರೆ ಗಂಡಸರನ್ನು ಮ್ಯಾನಿಪ್ಲೇಟ್ ಮಾಡಲಿಕ್ಕೆ ಅಲ್ಲ, ಅವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ. ದಯವಿಟ್ಟು ಓದಿ, ‘ವೈ ಮೆನ್ ಲವ್ ಬಿಚಸ್’- ಇಟ್ಸ್ ಬೈಬಲ್ ಫಾರ್ ಗರ್ಲ್ಸ್.

ಮರಗಳು
ಮುನ್ನೂರು ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿಗೆ ದಕ್ಕಿದ ಅದೃಷ್ಟ ಗಿಡ ಮತ್ತು ಮರಳು. ಇವು ಹುಟ್ಟಿದ ಮೇಲೆಯೇ ನಮಗೆ ಅನ್ನ ಹುಟ್ಟಿಕೊಂಡಿದ್ದು. ಮೊಟ್ಟ ಮೊದಲು ಜನಿಸಿದ ಗಿಡಕ್ಕೆ ಎಲೆಗಳು ಇಲ್ಲ ಎಂದು ಹೇಳುತ್ತಾರೆ ವಿಜ್ಞಾನಿಗಳು. ಅಂದರೆ ಲೀಫ್ ಲೆಸ್ ಟ್ರೀ. ಈ ಗಿಡಗಳು ತುಂಬಾ ಬುದ್ಧಿವಂತವು. ಅವು ತಮಗೆ ಎದುರಾಗುತ್ತಿದ್ದ ಅಪಾಯಗಳಿಗೆ ಅನುಗುಣವಾಗಿ ಅವು ಬದಲಾಗುತ್ತಾ, ಬೆಳೆಯುತ್ತಾ ಬಂದವು. ಅಂದರೆ ತಮ್ಮನ್ನು ಯಾರೂ ಹತ್ತಲು ಆಗದಂತೆ ಹುಲ್ಲಾಗಿ ಬದಲಾದವು. ಎಲೆಗಳನ್ನು ತಿನ್ನದಂತೆ ಜಿರಾಫೆಗಿಂತಲೂ ಎತ್ತರವಾಗಿ ಬೆಳೆದವು. ಕೆಲ ಗಿಡಗಳು ತಮ್ಮ ಸುತ್ತ ಮುಳ್ಳುಗಳನ್ನು ಸುತ್ತಿಕೊಂಡರೆ, ಇನ್ನೂ ಕೆಲ ಗಿಡಗಳು ತಮ್ಮ ಮೈ ತುಂಬಾ ಮುಳ್ಳುಗಳನ್ನೇ ಬೆಳೆಸಿಕೊಂಡವು.

ಒಂದು ದೊಡ್ಡ ಗಿಡ ತನ್ನ ನೆರಳಿನಲ್ಲಿ ತನ್ನದೇ ಬೀಜ ಬೆಳೆಯಲಾರದು ಎಂದು ತಿಳಿದುಕೊಂಡಿತು. ಯಾಕೆಂದರೆ ಸೂರ್ಯನ ಬೆಳಕು ದೊರೆಯದು. ಹೀಗಾಗಿ ತನ್ನ ಬೀಜಗಳಿಗೆ ಎರಡು ರೆಕ್ಕೆಗಳನ್ನು ಕೊಟ್ಟು, ಅವು ಹೆಲಿಕಾಪ್ಟರ್‌ನಂತೆ ಜಿಗಿಯುತ್ತ ಮತ್ತೆಲ್ಲೋ ಬಿದ್ದು ಅಲ್ಲಿ ತನ್ನ ಜಾತಿಯ ಸಂತಾನ ಬೆಳೆಯುವಂತೆ ನೋಡಿಕೊಂಡಿತು. ಬಹಳಷ್ಟು ಸೀಡ್ಸ್ ಗ್ಲೈಡರ್, ಪ್ಯಾರಾಚೂಟ್ ಅಟ್ಯಾಚ್ಡ್ ಆಗಿರುತ್ತವೆ. ಕೆಲ ಗಿಡಗಳ ಹಣ್ಣುಗಳನ್ನು ತಿನ್ನಬೇಕು ಅಂದುಕೊಂಡರೆ ಅವು ಒಂದು ರೀತಿಯ ಗ್ಯಾಸ್ ಬಿಡುಗಡೆ ಮಾಡುತ್ತವೆ. ಇಂಥ ಹಣ್ಣುಗಳನ್ನು ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಿನ್ನಲು ಆಗದು. ಈ ರೀತಿಯ ಹಣ ಕೊಡುವ ಗಿಡಗಳು ಆಫ್ರಿಕದಲ್ಲಿವೆ. ಭೂಮಿ ಮೇಲಿನ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯನಿಗಿಂತಲೂ ಮೊದಲು ಹುಟ್ಟಿದ ಗಿಡಗಳಿಗೆ ಇನ್ನೆಷ್ಟು ಜಾಣತನ ಇರುತ್ತದೆ.

ಗಿಡಗಳನ್ನು ಬೆಳೆಸಿದರೆ ಒಳ್ಳೆಯದು ಎನ್ನುವ ಪಾಸಿಟೀವ್ ಆಲೋಚನೆಯನ್ನು ಈ ಗಿಡಗಳೇ ಕ್ರಿಯೇಟ್ ಮಾಡಿದಂತೆ. ತುಂಬಾ ಬುದ್ಧಿವಂತಿಕೆಯಿಂದ ನಮ್ಮ ಜತೆ ಆಡಿಕೊಳ್ಳುತ್ತಿವೆ ಎಂದು ತುಂಬಾ ಸಮೀಕ್ಷೆಗಳು ಹೇಳುತ್ತವೆ. ಈ ಭೂಮಿ ಮೇಲೆ 60 ಸಾವಿರ ಜಾತಿಯ ಗಿಡಗಳಿವೆ. ಪ್ರತಿ ಗಿಡಕ್ಕೂ ಒಂದೊಂದು ರೀತಿಯ ಸರ್ವೈವಲ್ ತಂತ್ರ ಅಥವಾ ದಾರಿಗಳು ಇವೆ. ಮರಗಳು ಪರಸ್ಪರ ಒಂದಕ್ಕೊಂದು ಕಮ್ಯೂನಿಕೇಟ್ ಮಾಡಿಕೊಳ್ಳುತ್ತವೆ. ಅವುಗಳಿಗೆ ಅಂಡರ್‌ಗ್ರೌಂಡ್ ಇಂಟರ್‌ನೆಟ್ ಇದೆ. ದೇ ಎಕ್ಸ್‌ಚೇಂಜ್ ನ್ಯೂಟ್ರಿಷಿಯನ್ಸ್. ಸಾಹಿಲ್, ಪಂಗೀಸ್. ಅವು ತಮ್ಮ ಈ ನೆಟ್ ವರ್ಕ್‌ನಿಂದ ಮನುಷ್ಯರನ್ನು ಗುರುತು ಹಿಡಿಯುತ್ತವೆ, ನಮ್ಮ ಎಮೋಷನ್‌ಗೆ ರಿಯಾಕ್ಟ್ ಮಾಡುತ್ತವೆ. ಒಂದೇ ದಿನ ಹುಟ್ಟಿದ ಗಿಡಗಳನ್ನು ಬೇರೆ ಬೇರೆ ರೂಮಿನಲ್ಲಿಟ್ಟು ಒಂದನ್ನು ಕೆಟ್ಟದಾಗಿ ಬೈಯ್ದು, ಮತ್ತೊಂದನ್ನು ಚಿನ್ನ, ರನ್ನ, ಬಂಗಾರಿ ಎಂದು ಮುದ್ದು ಮಾಡಿ. ಹಾಗೆ ಬೆಳೆಸಿದ ಗಿಡಗಳನ್ನು ಒಂದು ದಿನ ಅವುಗಳ ರೂಮಿನ ಬಾಗಿಲು ತೆಗೆದು ನೋಡಿದರೆ ಒಂದು ಗಿಡದಲ್ಲಿ ಎರಡು ಎಲೆ ಬೆಳೆದಿದ್ದರೆ, ಮತ್ತೊಂದು ಗಿಡ ಹತ್ತು ಎಲೆಗಳಿಂದ ಆರೋಗ್ಯವಾಗಿದ್ದನ್ನು ಕಂಡಿತಂತೆ. ಅಂದರೆ ಬೈಯಿಸಿಕೊಳ್ಳುತ್ತಿದ್ದ ಗಿಡ ಎರಡು ಎಲೆಗಳನ್ನು ಮಾತ್ರ ಬೆಳೆಸಿಕೊಂಡು ಅನಾರೋಗ್ಯದಿಂದ ಕೂಡಿತ್ತು ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಈ ಗಿಡಗಳು ಸಂಗೀತವನ್ನೂ ಕೂಡ ಮನಸಾರೆ ಅಸ್ವಾದಿಸುತ್ತವೆ. ಕಾರ್ನ್, ವೀಟ್ ಹಾರ್ವೆಸ್ಟಿಂಗ್‌ನಲ್ಲಿ ದಿನಾ ಮ್ಯೂಸಿಕ್ ಪ್ಲೇ ಮಾಡಿದಾಗ ಸುತ್ತ ಇರುವ ಗಿಡಗಳ ಬೆಳವಣಿಗೆಯಲ್ಲಿ ಎರಡು ಪಟ್ಟು ಹೆಚ್ಚಾಗಿವೆ. ಇದನ್ನ ಕೆನಡ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಬೇಕಿದ್ದರೆ ನಿಮ್ಮ ಮ್ಯೂಸಿಕ್ ಸಿಸ್ಟಮ್ ಪಕ್ಕದಲ್ಲಿ ಒಂದು ಪುಟ್ಟ ಪ್ಲಾನೆಟ್ ಇಟ್ಟು ನೋಡಿ. ನಿಮಗೆ ಗೊತ್ತಾ, ನೀವು ಸತ್ತ ಮೇಲೆ ಗಿಡ ಆಗಿ ಬದಲಾಗಬಹುದು. ಯು ಕೆನ್ ಬಿಕಮ್ ಎ ಟ್ರೀ.

ನರ್ಸ್
ಹದಿನೇಳು ವರ್ಷಗಳ ಹಿಂದೆ ಲಂಡನ್‌ನಲ್ಲಿ 75 ವರ್ಷ ವಯಸ್ಸಿನ ಅಂದವಾದ ಕೇರಳಾ ಹುಡುಗಿಯನ್ನು ಭೇಟಿ ಮಾಡಿದೆ. ಇನ್ನೂ ಮದುವೆ ಆಗಿಲ್ಲ ಅಂತ ಹೇಳಿದಳು. ನಾನು ಯಾಕೆ ಅಂತ ಕೇಳಿದಾಗ ಆಕೆ ಹೇಳಿದ ಮಾತುಗಳು ಇವು. ಡಿಗ್ರಿ ಮುಗಿದ ಕೂಡಲೇ ಕೇರಳಾದಿಂದ ಲಂಡನ್‌ಗೆ ಬಂದು ಬಿಟ್ಟೆ. ಉದ್ಯೋಗ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಇರುತ್ತಿದ್ದೆ. ಉದ್ಯೋಗ, ಸಂಪಾದನೆ ಬಿಟ್ಟರೆ ಮತ್ತೊಂದು ಕೆಲಸ ಇಲ್ಲ. ದುಡಿಮೆಯ ಜಂಜಾಟದಲ್ಲಿ ಮದುವೆ ಆಲೋಚನೆ ಬರಲಿಲ್ಲ. ಕೊನೆ ಕೊನೆಗೆ ಮದುವೆಯನ್ನು ನಾನೇ ಬೇಡ ಅಂದುಕೊಂಡೆ. ಇನ್ನೂ ಪ್ರೀತಿ- ಪ್ರೇಮದ ವಿಚಾರಕ್ಕೆ ಬಂದರೆ ಯಾವಾಗಲೂ ನನ್ನ ಅವರು ಪ್ರೀತಿಸಲಿಲ್ಲ, ಇವರು ಪ್ರೀತಿಸಲಿಲ್ಲ ಎಂದು ಪ್ರೀತಿಸದೆ ಇರುವ ಅಯೋಗ್ಯರಿಗಾಗಿ ಅಳುತ್ತೇವೆ ಹೊರತು, ನಿಜವಾಗಲೂ ನಮ್ಮನ್ನು ಪ್ರೀತಿಸಿದವರಿಗಾಗಿ ಯಾವತ್ತೂ ಅಳಲ್ಲ ಅನಿಸಿತು. ಹೀಗಾಗಿ ಪ್ರೀತಿ- ಪ್ರೇಮದ ವಿಚಾರದಲ್ಲೂ ಕನ್ಫ್ಯೂಸ್ ಆಗಿ ಲವ್ ಮಾಡೋ ಸಾವಾಸಕ್ಕೂ ನಾನು ಹೋಗಲಿಲ್ಲ. ನನಗೆ ಇಷ್ಟವಾದರೆ ಕೊಡುತ್ತೇನೆ, ನಿನ್ನದು ನನಗೆ ಬೇಡ ಅಂತ ಸುಮ್ಮನಾದೆ. ಅದಕ್ಕೆ ನನಗೆ ಸಾಕಷ್ಟು ಮಂದಿ ಬಾಯ್ ಫ್ರೆಂಡ್ಸ್ ಇರುತ್ತಿದ್ದರು. i enjoyed my life. ಕಳೆದ 50 ವರ್ಷಗಳಿಂದ ನನ್ನ ಮನೆಗೆ ಯಾರನ್ನೂ ನಾನು ಆಹ್ವಾನಿಸಿಲ್ಲ. ಇಷ್ಟಪಟ್ಟವರನ್ನು ನಾನೇ ಹೋಗಿ ಭೇಟಿ ಮಾಡುತ್ತಿದ್ದೆ. ಆದರೆ, ಈಗ ನನ್ನ ಬಾಯ್ ಫ್ರೆಂಡ್ಸ್ ಎಲ್ಲರು ಸತ್ತು ಹೋಗಿದ್ದಾರೆ. ಆ ಪೈಕಿ ಒಬ್ಬ ಬಾಯ್‌ ಫ್ರೆಂಡ್ ನನ್ನು ಭೇಟಿ ಮಾಡಕ್ಕೆ ಅಂತಲೇ ನಾನು ಈ ರೆಸ್ಟೋರೆಂಟ್‌ಗೆ ಆಗಾಗ ಬರುತ್ತಿರುತ್ತೇನೆ. ನನಗೆ ಮೂರು ಸ್ವಂತ ಮನೆಗಳಿವೆ. ಬ್ಯಾಂಕ್ ಬ್ಯಾಲೆನ್ಸ್ ಇದೆ. ನನ್ನ ಆಸ್ತಿ ನನ್ನ ನಂತರ ನನ್ನಂತಯೇ ಇರುವ ಅನಾಥರಿಗೆ ಸಲ್ಲಬೇಕೆಂದು ಬರೆದುಬಿಟ್ಟಿದ್ದೇನೆ. ನನಗೆ ಮಕ್ಕಳು ಬೇಡ. ಯಾಕೆಂದರೆ ಜೀವನ ಪರ್ಯಂತ ಕಷ್ಟಪಟ್ಟು ದುಡಿದಿದ್ದನ್ನು ಮಕ್ಕಳಿಗೆ ಕೊಡುತ್ತೇವೆ. ಅವರಿಗೆ ನಾವು ಎಷ್ಟೇ ಕೋಟಿ ಕೊಟ್ಟರೂ ತಾಯಿಗೆ ಹುಷಾರಿಲ್ಲ ಅಂದರೆ ಐಸಿಯೂನಲ್ಲೇ ಸೇರಿಸುತ್ತಾರೆ. ಒಬ್ಬ ನರ್ಸ್‌ನನ್ನು ನೇಮಿಸುತ್ತಾರೆ. ಅವರಿಗೆ ಹೆತ್ತವರನ್ನು ನೋಡಿಕೊಳ್ಳುವಷ್ಟು ಪುರುಸೊತ್ತು ಆಗಲಿ, ಆಸಕ್ತಿ, ಸಮಯ ಯಾವುದೂ ಇರಲ್ಲ. ಸೋ ಎಂಡ್ ಆಫ್ ದಿ ಡೇ ನನ್ನ ನೋಡಿಕೊಳ್ಳುವುದು, ನನಗೆ ಊಟ ಮಾಡಿಸುವುದು, ನನ್ನ ಬಾತ್‌ರೂಮ್‌ಗೆ ಕರೆದುಕೊಂಡು ಹೋಗುವುದು ಸೇರಿದಂತೆ ನನ್ನ ಇಡೀ ದಿನಚರಿ ನಿಭಾಯಿಸುವುದು ಒಬ್ಬ ನರ್ಸ್. ಅದಕ್ಕೆ ಆ ನರ್ಸ್‌ಗಾಗಿ ಒಂದಿಷ್ಟು ಹಣ ನನ್ನ ಬಳಿ ಇಟ್ಟುಕೊಂಡಿದ್ದೇನೆ. ನೀನು ಕೂಡ ನಿನ್ನ ನರ್ಸ್‌ಗಾಗಿ ಹಣ ಎತ್ತಿಟ್ಟುಕೋ.

ದೇವರು
ಒಂದು ವೇಳೆ ಆಕಸ್ಮಿಕವಾಗಿ ನನಗೇನಾದರೂ ದೇವರು ಕಂಡರೆ ನಾನು ಆತನ ಕಾಲಿಗೆ ಬೀಳಲ್ಲ.

ಯಾಕೆಂದರೆ ದೇವರಿಂದ ನಾನು ಏನನ್ನೂ ನಿರೀಕ್ಷೆ ಮಾಡುತ್ತಿಲ್ಲ. ಐ ಡೋಂಟ್ ಟ್ರಬಲ್ ಹಿಮ್ ಆಲ್‌ಸೋ. ಆದರೆ, ಕೂರಿಸಿಕೊಂಡು ಮಾತಾಡುತ್ತೇನೆ. ನನ್ನ ಕುರಿತು ಅಲ್ಲ, ಆತನ ಕುರಿತು. ಕೇಳ್ತಿನಿ; ಇಷ್ಟಕ್ಕೂ ನೀನು ಹುಟ್ಟಿದ್ದು ಯಾಕೆ, ಯಾವುದಕ್ಕೋಸ್ಕರ ಬದುಕುತ್ತಿದ್ದಿಯಾ, ಇನ್ನೂ ಎಷ್ಟು ದಿನ ಇರ್ತಿಯಾ, ಜೀವನದಲ್ಲಿ ನಿನ್ನ ಗೋಲ್ ಏನು, ಯಾವ ಗುರಿಯೂ ಇಲ್ಲದೆ ಯಾಕಾಗಿ ಬದುಕಿದ್ದಿಯಾ. ನಾನೇನು ನಾಲ್ಕು ದಿನ ಇದ್ದು ಹೋಗೋನು. ಆದರೆ, ನೀನು ನನ್ನ ಹಾಗೆ ಅಲ್ಲ. ಸಾವಿಲ್ಲದೆ ಬದುಕಲು ನಿನಗೆ ಬೋರ್ ಹೊಡೆಯುತ್ತಿಲ್ಲವಾ. ನೀನು ದೇವರಾದರೆ ಮನೆಯಲ್ಲಿ ಕೂರಬಹುದಿತ್ತಲ್ಲ, ಈ ಜಗತನ್ನು ಯಾಕೆ ಸೃಷ್ಟಿಸಿದೆ. ಮನರಂಜನೆಗಾಗಿನಾ?

ಸರಿ, ಜಗತ್ತನನ್ನೇನು ಸೃಷ್ಟಿಸಿದೆ. ಆದರೆ, ಮನುಷ್ಯರಲ್ಲಿ ಮನುಷ್ಯರಾಗಿ ಹುಟ್ಟೋದು, ಒಳ್ಳೆಯದು ಕೆಟ್ಟದು ಹೇಳೋದು, ಸ್ವರ್ಗ- ನರಕ ಮೇಂಟನ್ ಮಾಡೋ ಈ ಡ್ರಾಮಾಗಳು ಯಾತಕ್ಕೆ? ನಿನಗೆ ನೆಮ್ಮದಿ, ಶಾಂತಿಯಿಂದ ಬದಕಲು ಬರಲ್ಲವಾ, ನಿನ್ನ ತಿಳವಳಿಕೆ ನೋಡಿದರೆ ನನಗೆ ಅಚ್ಚರಿ ಆಗುತ್ತದೆ. ಹಾಗೆ ಸಾವಿಲ್ಲದ ನಿನ್ನ ಬದುಕು ನೋಡಿದರೆ ನಿನ್ನ ಮೇಲೆ ನನಗೇ ಕನಿಕರ ಹುಟ್ಟುತ್ತದೆ. ನಮ್ಮ ಜತೆ ನೀನು ಸಾಯಬಹುದಲ್ಲಾ!?

ಸಾಕು, ಇನ್ನು. ಅಂಗಡಿ ಕ್ಲೋಸ್ ಮಾಡೋಣ. ಯಾವ ಪ್ರಯೋಜನವೂ ಕಾಣುತ್ತಿಲ್ಲ. ನಿನ್ನಿಂದ ಇಲ್ಲಿ ಹುಟ್ಟಿದ್ದೇವೆ. ಹತ್ತಾರು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಕೊಲೆ, ಅತ್ಯಾಚಾರ, ಹಸಿವು, ಸಾವು, ಯುದ್ಧಗಳು... ಒಂದಾ, ಎರಡಾ! ಯಾರೇನು ಮಾಡುತ್ತಾರೆ ಅಂತ ಲೆಕ್ಕಾ ಬರೆದುಕೊಳ್ಳುತ್ತಿದ್ದಿಯಾ? ನೀನು ಬದುಕೋದೆ ಮನುಷ್ಯರಿಗಾಗಿ ಅಂತಿದ್ದಾರೆ ಇಲ್ಲಿ. ಎಲ್ಲರೂ ಇದನ್ನೇ ನಂಬುತ್ತಿದ್ದಾರೆ. ಈ ನಂಬಿಕೆಯೇ ನಿಜ ಆಗಿದ್ದರೆ ನಿನ್ನ ಮೇಲಿರೋ ಗೌರವ ಕೂಡ ಹೋಗುತ್ತದೆ. ನಿಜಕ್ಕೂ ಭೂಮಿ ಮೇಲೆ ಮನುಷ್ಯರು ಇದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಅಂತೇಳು, ನಾನು ನಿನ್ನ ಗೌರವಿಸುತ್ತೇನೆ. ಅದು ಬಿಟ್ಟು ಇಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಅಯೋಗ್ಯನ ಹೆಸರು ನನಗೆ ಗೊತ್ತು, ನಿಮ್ಮ ಕಷ್ಟಗಳು ಗೊತ್ತು, ನಿಮ್ಮ ಪ್ರಾರ್ಥನೆಗಳನ್ನು ನಾನು ಕೇಳುತ್ತಿದ್ದೇನೆ ಅಂತ ಹೇಳಿದರೆ ಮಾತ್ರ ಐ ಹೇಟ್ ಯೂ. ಯಾಕೆಂದರೆ ನಾನು ನಿನ್ನ ಕುರಿತು ಇದಕ್ಕಿಂತ ಹೆಚ್ಚಾಗಿ ಊಹೆ ಮಾಡಿಕೊಳ್ಳುತ್ತಿದ್ದೇನೆ. ಸೋ ಡೋಂಟ್ ಟೆಲ್ ಮಿ ಚೀಪ್ ಅನ್ಸರ್. ಯೂನಿವರ್ಸ್ ಎಷ್ಟಿದೆ ಅಂತ ನನಗೇ ಗೊತ್ತಿಲ್ಲ ಅಂತೇಳು, ಇಷ್ಟಕ್ಕೂ ಭೂಮಿ ಅನ್ನೋದು ಇದಿಯಾ ಇಲ್ವೋ ಅಂತ ಕೇಳು ಐ ಲವ್ ಯೂ ಫರ್ ದಟ್. ಇದರ ಹೊರತಾಗಿ ನನ್ನ ಹೆಸರು ನಿನಗೆ ತಿಳಿದರೂ, ನನ್ನೀ ಈ ಮಾತುಗಳನ್ನು ನೀನು ಕೇಳಿದರೂ ಐ ಕಂಪ್ಲೀಟ್ಲಿ ಲೂಸ್ ರೆಸ್ಪಾಟ್. ಐ ಥಿಂಗ್ ಯೂ ಆರ್ ಎ ಜಾಬ್ ಲೆಸ್ ಗೇ.

ದೂರು
ಕಾಡಿನಲ್ಲಿ ಪ್ರಾಣಿಗಳು ತಿನ್ನುತ್ತವೆ, ಆಡಿಕೊಳ್ಳುತ್ತವೆ, ಸಂತೋಷವಾಗಿರುತ್ತವೆ. ಹಾಗೆ ಎಚ್ಚರವಾಗಿಯೂ ಇರುತ್ತವೆ, ಇಲ್ಲವೇ ಮಲಗುತ್ತವೆ. ಆದರೆ ಅವುಗಳಿಗೆ ಅನ್ ಹ್ಯಾಪಿಯಾಗಿ ಇರೋದು ಅಂದರೆ ಏನೂ ಅಂತ ಗೊತ್ತಿಲ್ಲ. ಪ್ರಾಣಿಗಳಿಗೆ ಮಾತ್ರವಲ್ಲ, ಪಕ್ಷಿ, ಕೀಟಗಳಿಗೂ ಅನ್ ಹ್ಯಾಪಿಯಾಗಿರುವುದು ಹೇಗೆಂಬುದು ಗೊತ್ತಿಲ್ಲ. ಆದರೆ ಮನುಷ್ಯರಾದ ನಮಗೆ ಗೊತ್ತು. ಜೀವನದಲ್ಲಿ ಹೇಗೆ ಅನ್ ಹ್ಯಾಪಿಯಾಗಿರೋದು ಅಂತ. ನಮ್ಮ ಬಳಿ ಇಲ್ಲದಿವುದನ್ನೆಲ್ಲ ನೆನಪಿಸಿಕೊಂಡು ಅಳುತ್ತೇವೆ. ನಮ್ಮ ದುಃಖ ಪೂರ್ತಿ ಇಲ್ಲದಿರುವುದಕ್ಕಾಗಿಯೇ. ಇರೋದನ್ನು ನೋಡಿ ಆನಂದಿಸುವುದು ನಮಗೆ ಗೊತ್ತಿಲ್ಲ. ನೀನು ಮಲಗಿರೋದು ಚಾಪೆ ಆಗಿರಬಹುದು. ಅದಕ್ಕೆ ದೊಡ್ಡ ತೂತು ಇರಬಹುದು. ಇದ್ದರೆ ಇರಲಿ, ಮೇಲಿರೋ ಬೆಳದಿಂಗಳನ್ನು ನೋಡು, ಆ ಚಂದ್ರನನ್ನು ನೋಡು. ಚಂದಮಾಮನನ್ನು ನೋಡಲು ಕಣ್ಣು ಇದ್ದಿದ್ದಕ್ಕೆ ಸಂತೋಷಪಡು. ಯಾಕೆಂದರೆ ಕಣ್ಣಿಲ್ಲದವರು ಸಾಕಷ್ಟು ಮಂದಿ ನಮ್ಮ ಸುತ್ತ ಇದ್ದಾರೆ.

ಹೀಗೆ ಅನ್ ಹ್ಯಾಪಿಯಾಗಿರುವವರೇ ಯಾವಗಲೂ ಕಂಪ್ಲೇಂಟ್ ಮಾಡುತ್ತಿರುತ್ತಾರೆ. ಕಂಪ್ಲೇಂಟ್ ಮಾಡಿ ಮಾಡಿ ಅವರು ನೆಗೆಟೀವ್ ಆಗಿಬಿಡುತ್ತಾರೆ. ಅವರ ಮುಖಗಳು ಪ್ಲೆಸೆಂಟ್ ಆಗಿರಲ್ಲ. ಅವರ ಜತೆ ಮಾತನಾಡಲು ಬೇರೆಯವರಿಗೆ ಮನಸು ಬರಲ್ಲ. ನಮ್ಮ ಕಚೇರಿಯಲ್ಲಿ ಏನೇ ಸಮಸ್ಯೆ ಬಂದರೂ ಅದನ್ನ ಸಮಸ್ಯೆ ಅಂತ ಕರೆಯಲ್ಲ, ಸವಾಲು ಅಂತೀವಿ. ಸವಾಲು ಅಂದಾಗ ಅದಕ್ಕೊಂದು ಪರಿಹಾರ ಹುಡುಕುವುದಕ್ಕೆ ಮುಂದಾಗುತ್ತೇವೆ. ನಮಗೇ ಸಮಸ್ಯೆ ಎಂದಾಗ ಅದರಿಂದ ಎಸ್ಕೇಪ್ ಆಗಲು ನೋಡುತ್ತೇವೆ. ನಾನು ದಿನಾ ತಿನ್ನೋ ಊಟದ ಮೇಲೂ ಕಂಪ್ಲೇಂಟ್ ಮಾಡಲ್ಲ. ಆ ದಿನ ಏನು ಸಿಕ್ಕರೆ ಅದು ತಿಂತೀನಿ. ಹಣ ಕೊಟ್ಟು ಹೋಟೆಲ್‌ನಲ್ಲಿ ಮಾಡುವ ಊಟ ಕೂಡ ಚೆನ್ನಾಗಿಲ್ಲ ಅಂದಾಗ ಕಂಪ್ಲೇಂಟ್ ಮಾಡಲ್ಲ. ಆದರೆ, ಊಟ ಚೆನ್ನಾಗಿದ್ದರೆ ಮಾತ್ರ ಶೆಫ್ ನನ್ನು ಭೇಟಿಯಾಗಿ ಥಾಂಕ್ಸ್ ಹೇಳುತ್ತೇನೆ. ಸೈನ್ಯದಲ್ಲಿರುವ ಗಂಡ ಮನೆಗೆ ಬರಲ್ಲ ಅಂತ ವರ್ಷಪೂರ್ತಿ ಅಳಬಹುದು. ಆದರೆ, ಹಬ್ಬಕ್ಕೆ ಬರುತ್ತಾನೆ ಬಿಡು ಅಂತ ಪ್ರತಿ ದಿನ ಸಂತೋಷವಾಗಿ ಬದುಕಬಹುದು. ಆಯ್ಕೆ ನಮ್ಮ ಕೈಯಲ್ಲೇ ಇದೆ.

ಪ್ರತಿಯೊಂದಕ್ಕೂ ಅನ್ ಹ್ಯಾಪಿಯಾಗಿದ್ದರೆ ಹಾಳಾಗೋದು ನೀನೇ. ನಿನ್ನ ಮನೆ ಮುಂದಿನ ಗಿಡವನ್ನು ನೋಡು. ಅದು ಯಾವತ್ತೂ, ಯಾರಿಗೂ ಕಂಪ್ಲೇಂಟ್ ಮಾಡಲ್ಲ. ಈವನ್ ಟ್ರೀಸ್ ಡೋಂಟ್ ನೋ ಹೌ ಟು ಬಿ ಅನ್ ಹ್ಯಾಪಿ. ಅವು ನಗುತ್ತಿರುತ್ತವೆ, ನೆರಳು ಕೊಡುತ್ತವೆ, ಹಣ್ಣುಗಳನ್ನು ಕೊಡುತ್ತವೆ ಬಿಟ್ಟರೆ ಗಾಳಿ ಬಂದು ರಂಬೆಗಳು ಮುರಿದರೂ, ಮಚ್ಚಿನಿಂದ ಕತ್ತರಿಸಿದರೂ ದೆ ನೆವರ್ ಎವರ್ ಕಂಪ್ಲೇಂಟ್.

Latest Videos
Follow Us:
Download App:
  • android
  • ios