ಪ್ರೇಯಸಿಯೊಂದಿಗೆ ಇವನ್ನು ಶೇರ್ ಮಾಡಿಕೊಳ್ಳಲಿಕ್ಕೆ ಹುಡುಗರಿಗೆ ನಾಚಿಕೆ!

life | Tuesday, June 12th, 2018
Suvarna Web Desk
Highlights

ಹೆಣ್ಣಿಗಿಂತಲೂ ದೈಹಿಕವಾಗಿ ಬಲವಾಗಿರುವ ಪುರುಷರು ಮಾನಸಿಕವಾಗಿಯೂ ಸಿಕ್ಕಾಪಟ್ಟೆ ಸ್ಟ್ರಾಂಗ್ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ, ಮಾನಸಿಕವಾಗಿ ಹೆಣ್ಣಿನಷ್ಟು ಪುರುಷ ಸ್ಟ್ರಾಂಗ್ ಅಲ್ಲವೆಂಬುವುದು ಈಗಾಗಲೇ ಸಾಕಷ್ಟು ಅಧ್ಯಯನಗಳು ದೃಢಪಡಿಸಿವೆ. 

ಈ ಪುರುಷ ಮಹಾಶಯ ಪತ್ನಿ ಅಥವಾ ಪ್ರೆಯಸಿಯೊಡನೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಸಿಕ್ಕಾಪಟ್ಟೆ ಸಂಕೋಚ ಪಟ್ಟುಕೊಳ್ಳುತ್ತಾನೆ. ಅಥವಾ ಯಾವುದೇ ಕಾರಣಕ್ಕೂ ಈ  ವಿಷಯಗಳ ಬಗ್ಗೆ ಸಂಗಾತಿಯೊಡನೆ ಮನ ಬಿಚ್ಚಿ ಗಂಡು ಮಾತನಾಡುವುದೇ ಇಲ್ಲ.  ಅಷ್ಟಕ್ಕೂ ಗಂಡು ಸೀಕ್ರೆಟ್ ಕಾಪಾಡಿಕೊಳ್ಳುವ ವಿಷಯಗಳು ಯಾವುವು?

ವೇತನ

 ಯಾವೊಬ್ಬ ಪುರುಷನೂ ತನ್ನ ಸಂಬಳದ ಬಗ್ಗೆ ತನ್ನ ಪ್ರೇಯಸಿ ಜತೆ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ. ಬಡ್ತಿ ಬಗ್ಗೆ ಹೇಳುತ್ತಾನೆಯೇ ಹೊರತು, ತನ್ನ ಮೂಲ ವೇತನದ ಬಗ್ಗೆ ಬಾಯಿ ಬಿಡದಂತೆ ಎಚ್ಚರ ವಹಿಸುತ್ತಾನೆ. ಜಾಣ ಹೆಂಡತಿ ಅದನ್ನು ಹೇಗಾದ್ರೂ ಪತ್ತೆ ಹಚ್ಚಿರುತ್ತಾಳೆಂಬುವುದು ಗಂಡಿಗೆ ಗೊತ್ತಿರೋಲ್ಲ.

ಅಷ್ಟೇ ಅಲ್ಲ, ತನಗಿಂತಲೂ ಪ್ರೇಯಸಿ ಹೆಚ್ಚಿನ ಸಂಬಳ ಪಡೆಯುತ್ತಿದ್ದರೆ, ಅದನ್ನೂ ಪ್ರಶ್ನಿಸಲೂ ಹೋಗುವುದಿಲ್ಲ. ಅಲ್ಲದೇ, ಈಗೀಗ ಯಾವ ಗಂಡೂ ತನ್ನ ಸಂಗಾತಿ ಮನೆಯಲ್ಲಿಯೇ ಅಡುಗೆ ಮಾಡಿಕೊಂಡಿರಬೇಕೆಂದು ಬಯಸುವುದಿಲ್ಲ. ತನ್ನ ವೇತನದ ವಿಷಯವಾಗಿ ಆದಷ್ಟು ಸೈಲೆಂಟ್ ಆಗಿರುತ್ತಾನೆ.

ಆ ಹುಡುಗಿಯನ್ನು ನೋಡು, ಅವಳು ನನ್ನ ಹಳೆಯ...!! 

ಇನ್ನೊಬ್ಬ ಯುವತಿಯೊಂದಿಗೆ ಮಾಡಿದ ಮೋಜು-ಮಸ್ತಿ ಬಗ್ಗೆಯೂ ಪುರುಷ ಮಹಾಶಯ ತನ್ನ ಪ್ರೇಯಸಿ ಅಥವಾ ಪತ್ನಿಯೊಂದಿಗೆ ಶೇರ್ ಮಾಡಿಕೊಳ್ಳುವ ಉಸಾಬರಿಗೋ ಹೋಗೋಲ್ಲ. ತನ್ನ ಎಕ್ಸ್ ಜತೆ ಕಳೆದ ಮಧುರಾಮಧುರ ಕ್ಷಣಗಳನ್ನು ಮನದಲ್ಲಿಯೇ ಮೆಲಕು ಹಾಕುತ್ತಾನೆಯೇ ಹೊರತು, ಅದನ್ನು ಬಾಯಿ ಬಿಟ್ಟು ಎಕ್ಸ್‌ಪ್ರೆಸ್ ಮಾಡೋ ಧೈರ್ಯ ತೋರುವುದಿಲ್ಲ. ಅಕಸ್ಮಾತ್ ಈ ಬಗ್ಗೆ ಪತ್ನಿ ಕೇಳಿದರೂ, ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಾನೆ.

 ಹೆಂಡತಿ ಪದೆ ಪದೇ ಕರೆ ಮಾಡಿದರೆ ಇರಿಟೇಟ್ ಆಗೋ ಗಂಡು, ಪ್ರೇಯಸಿ ಕರೆ ಮಾಡಿದರೆ ಮಾತ್ರ ಫುಲ್ ಖುಷ್ ಆಗುತ್ತಾನೆ. ಎಷ್ಟೇ ಬ್ಯುಸಿ ಇದ್ದರೂ ಕರೆ ಮಾಡಬೇಡವೆಂದು ಮಾತ್ರ ಹೇಳುವುದಿಲ್ಲ. 

 'ಸುಮ್ಮಿರು..' ಎನ್ನೋಲ್ಲ..

ಅಕಸ್ಮಾತ್ ಪ್ರೇಯಸಿ ಏನೋ ಹೇಳಲು ಬಂದರೆ, ಸುಮ್ಮಿರು ಎಂದು ಹೇಳುವುದಿಲ್ಲ. ಹೆಂಡ್ತಿ ಮೇಲೆ ದಬ್ಬಾಳಿಕೆ ಮಾಡೋ ಗಂಡು, ಪ್ರೇಯಿಸಿಯೊಂದಿಗೆ ವಾದಕ್ಕಿಳಿಯುವುದಿಲ್ಲ. 

ಇನ್ನೊಬ್ಬಳ ಮೇಲೆ ಕಣ್ಣು ಹಾಕಿದಾಗ...

ಅಲ್ಲಿ ಇಲ್ಲಿ ಅಲೆದಾಡೋ ಹೆಣ್ಣಿನ ಮೇಲೆ ಗಂಡು ಕಣ್ಣು ಹಾಕುವುದ ಸಹಜ. ಹಾಗಂತ ಪ್ರೇಯಸಿಯೊಂದಿಗೆ ಅದನ್ನು ಹೇಳಲು ಹೋಗುವುದಿಲ್ಲ. ಸುಖಾ ಸುಮ್ಮನೆ ಮನಸ್ಸಿನಲ್ಲಿಯೇ ಮಣ್ಣಿಗೆ ತಿನ್ನೋದೇ ಹೆಚ್ಚು.

Comments 0
Add Comment

    Related Posts

    Health Secret of Siddaganga Shri

    video | Sunday, April 1st, 2018
    Vaishnavi Chandrashekar