- ಕುಡಿಯುವ ನೀರು

ವಿಮಾನದಲ್ಲಿ ನೀರನ್ನು ಬಹುಕಾಲ ಸುಂಗ್ರಹಿಸುವುದು ಅಸಾಧ್ಯ. ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಡುತ್ತಾರೆ, ಬಾಟಲಿನಲ್ಲಿ ಸಿಗುವ ನೀರು ಮಾತ್ರ ಆರೋಗ್ಯಕರ.  ಆ ಕಾರಣದಿಂದ ಲೋಟದಲ್ಲಿ ನೀರು ಪೂರೈಸುತ್ತಾರೆ ಗಗನಸಖಿಯರು. ಈ ಬಗ್ಗೆ ಮಾತ್ರ ಹೇಳೋಲ್ಲ.

- ತೊಳೆಯದ ತಟ್ಟೆ-ಲೋಟ

ವಿಮಾನದಲ್ಲಿ ಪಾತ್ರೆಯನ್ನು ಸ್ವಚ್ಚಗೊಳಿಸಲಾಗುವುದಿಲ್ಲ. ಅದರಿಂದ ಅದನ್ನು ಒರೆಸಿ ಇಡಲಾಗುತ್ತದೆ. ಅದಕ್ಕಾಗಿಯೇ ಸ್ಯಾನಿಟೈಜರ್ ಇರುತ್ತದೆ. ಆಹಾರ ಸೇವಿಸೋ ಮುನ್ನ ಈ ಬಗ್ಗೆ ಗಮನ ಇರಲಿ. 

- ವೇತನ

ನಗೆ ಬುಗ್ಗೆಗಳಂತಿರುವ ಗಗನಸಖಿಯರು ಚೆಂದ ಡ್ರೆಸ್ ಮಾಡಿಕೊಂಡು, ಪುಟ ಪುಟನೇ ಓಡಾಡುತ್ತಿರುತ್ತಾರೆ. ಆದರೆ, ಅವರಿಗೆ ಹೇಳಿಕೊಳ್ಳುವಂಥ ಯಾವುದೇ ವೇತನವಾಗಲಿ, ಸೌಲಭ್ಯಗಳಾಗಲಿ ಇರುವುದಿಲ್ಲ. ಅದೂ ಅಲ್ಲದೇ ವಿಮಾನದಲ್ಲಿ ಹಾರಾಡುವಾಗ ಮಾತ್ರ ವೇತನ ನೀಡಲಾಗುತ್ತದೆಯೇ ಹೊರತು, ಬೋರ್ಡಿಂಗ್‌ನಲ್ಲಿರುವಾಗ ವೇತನ ನೀಡಲಾಗುವುದಿಲ್ಲ.