ಎಸ್‌ಬಿಐನಲ್ಲಿದೆ ಉದ್ಯೋಗ ಅವಕಾಶ

First Published 2, Apr 2018, 4:28 PM IST
SBI Recruitment 2018 for Specialist Cadre Officer 119 Posts
Highlights

ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಉನ್ನತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 119 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 7 ಕಡೆಯ ದಿನಾಂಕವಾಗಿರುತ್ತದೆ.

ಬೆಂಗಳೂರು: ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಉನ್ನತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 119 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 7 ಕಡೆಯ ದಿನಾಂಕವಾಗಿರುತ್ತದೆ.

ಹುದ್ದೆ ವಿವರಗಳು ಕೆಳಗಿನಂತಿವೆ...
1. ಸ್ಪೆಷಲ್ ಮ್ಯಾನೇಜ್‌ಮೆಂಟ್ ಎಕ್ಸ್‌ಕ್ಯೂಟಿವ್: 35 ಹುದ್ದೆಗಳು
ವಿದ್ಯಾರ್ಹತೆ: ಸಿಎ, ಐಸಿಡಬ್ಲ್ಯೂ, ಎಸಿಎಸ್ ಅಥವಾ ಎಂಬಿಎ ಅಥವಾ ಆರ್ಥಿಕ ವಿಷಯದಲ್ಲಿ ಎರಡು ವರ್ಷದ ಡಿಪ್ಲೋಮಾ.
ಅನುಭವ: ಶಿಕ್ಷಣ ಮುಗಿಸಿದ ನಂತರ ಐದು ವರ್ಷಗಳ ಅರ್ಹ ಅನುಭವ ಪಡೆದಿರಬೇಕು.

2.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕಾನೂನು): 02 ಹುದ್ದೆಗಳು
ವಿದ್ಯಾರ್ಹತೆ: 17 ವರ್ಷಗಳ ಅನುಭವದೊಂದಿಗೆ ಕಾನೂನು ಪದವಿ.

3. ಡೆಪ್ಯೂಟಿ ಮ್ಯಾನೇಜರ್ (ಕಾನೂನು): 82 ಹುದ್ದೆಗಳು
ಅರ್ಹತೆ: ನಾಲ್ಕು ವರ್ಷಗಳ ಕಾಲ ವಕೀಲಿಕೆ ಅನುಭವದೊಂದಿಗೆ ಕಾನೂನು ಪದವಿ.

ವಯೋಮಿತಿ (31, ಡಿಸೆಂಬರ್,2017ಕ್ಕೆ)
ಕನಿಷ್ಠ ವಯೋಮಿತಿ: 25 ವರ್ಷ
ಗರಿಷ್ಠ: 52 ವರ್ಷ (ಕಾನೂನಿನಂತೆ ವಯೋಮಿತಿ ಸಡಿಲಿಕೆ ಇರುತ್ತದೆ)

ಹೆಚ್ಚಿನ ಮಾಹಿತಿಗಾಗಿ: ಎಸ್‌ಬಿ‌ಐ ವೆಬ್‌ಸೈಟ್ https://www.sbi.co.in/careers/ongoing-recruitment.htmlಗೆ ಭೇಟಿ ನೀಡಿ.
 

loader