ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತಮ್ಮ 29ನೇ ಹುಟ್ಟುಹಬ್ಬದ ಬೆನ್ನಲ್ಲೇ ಸ್ವಿಟ್ಜರ್ಲ್ಯಾಂಡ್‌ಗೆ ತೆರಳಿ ಸಂಭ್ರಮಿಸಿದ್ದಾರೆ. ತಂದೆಯ ಭಾವುಕ ಶುಭಾಶಯ ಮತ್ತು ಶುಭಮನ್ ಗಿಲ್ ಜೊತೆಗಿನ ವದಂತಿಗಳ ನಡುವೆ, ಈ ಪ್ರವಾಸದಲ್ಲಿ ಅವರ ಜೊತೆಗಿದ್ದವರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಕ್ರಿಕೆಟ್‌ ಲೋಕದಲ್ಲಿ ಇತಿಹಾಸ ಬರೆದ ದಿಗ್ಗಜ ಹಾಗೂ ಕ್ರಿಕೆಟ್‌ ದೇವರು ಎಂಬ ಖ್ಯಾತ ಪಡೆದ ಸಚಿನ ತೆಂಡೂಲ್ಕರ್ ಅವರ ಪುತ್ರಿ ಜನ್ಮ ದಿನಕ್ಕೆ ವಿಶೇಷವಾಗಿ ಶುಭಾಷಯ ತಿಳಿಸಿದ್ದರು, ಅಲ್ಲದೇ, ಸಾರಾ ಉದ್ಯಮ ಕ್ಷೇತ್ರದಲ್ಲಿನ ಒಲುವು ಹಾಗೂ ಸಾರಾ ತೆಂಡೂಲ್ಕರ್‍‌ಗೆ ನೀಡಿದ ಅವರ ಬೆಂಬಲ ನಿಜವಾಗಿಯೂ ಮತ್ತೊಬ್ಬರಿಗೂ ಮಾದರಿಯಾಗುವಂತಹದು. ಈ ಹಿನ್ನೆಲೆಯಲ್ಲಿ ಸಾರಾ ಕುರಿತು ಮತ್ತೊಂದು ವಿಷಯ ಚರ್ಚೆ ಮುನ್ನೆಲೆಗೆ ಬಂದಿದೆ. ಅದೇ ಜನ್ಮ ದಿನದ ಬೆನ್ನಲ್ಲೆ ಸ್ವಿಟ್ಜರ್ಲ್ಯಾಂಡ್‌ಗೆ ಹೋಗಿ ಕೇಕ್‌ ಮಾಡಿದ್ದು ಸಹ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಆಯಾಮಗಳಲ್ಲಿ ವೈರಲ್‌ ಆಗುತ್ತಿದೆ.

ಸಾರಾಗೆ ತಂದೆ ವಿಶೇಷ ಶುಭಾಷಯ!

ಹೌದು ಸಾರಾಗೆ ಸಚಿನ್‌ ತೆಂಡೂಲ್ಕರ್‍ ತಿಳಿಸಿದ ಶುಭಾಷಯ, ಹಲವು ಸಂಗತಿಗಳನ್ನು ಹೇಳುತ್ತಿತ್ತು, ಅಷ್ಟೇ ಅಲ್ಲಿ ತಂದೆ-ಮಗಳ ಭಾವನಾತ್ಮಕತೆಯೂ ಮನೆ ಮಾಡಿತ್ತು. ಮೊದಲು ಏನಾದರೂ ಮಾಡಬೇಕಾದರೆ, ಏನೆ ಕಾರ್ಯ ಕೈಗೊಳ್ಳುವುದಿದ್ದರೂ ನನ್ನ ಕೇಳುತ್ತಿದ್ದೆ, ನಾನು ಅಡ್ವೈಸ್‌ ಮಾಡುತ್ತಿದೆ. ಆದರೆ ಈಗ ನಿನ್ನ ಸ್ವಂತ ದಾರಿ ನೀನೆ ಹುಡುಕಿಕೊಂಡಿರುವುದು ‌ಖುಷಿ ಕೊಟ್ಟಿದೆ, ನಿನ್ನ ಬಾಳು ಬಂಗಾರವಾಗಲಿ ಎಂದು ಶುಭ ಕೋರಿದ್ದಾರೆ. ಇದು ಅವರು ಉದ್ಯಮ ಕ್ಷೇತ್ರಕ್ಕೆ ನೀಡಿದ ಆಧ್ಯತೆ ಹಾಗೂ ಅವರ ಕನಸನ್ನು ಸಚಿನ್‌ ಬರಹ ಹೇಳುವಂತಿತ್ತು.

ಸಾರಾ ಹೆಸರಿಗೆ ತಳಕು ಹಾಕಿಕೊಂಡ ಶುಭಮನ್‌ ಹೆಸರು!

ಹೌದು ಕಳೆದ ಕೆಲದಿನಗಳಿಂದ ಸದಾ ಫಾರ್ಮನಲ್ಲಿರುವ ಶುಭಮನ್‌ ಗಿಲ್‌ ಹೆಸರಿನ ಜೊತೆ ಸಾರಾ ತೆಂಡೂಲ್ಕರ್‍‌ ಹೆಸರು ತಳಕು ಹಾಕಿಕೊಂಡಿದೆ. ಆದರೆ ಬಹಿರಂಗವಾಗಿ ಎಲ್ಲಿಯೂ ಪ್ರೀತಿಯ ವಿಷಯ ಇನ್ನು ಬಹಿರಂಗಗೊಂಡಿಲ್ಲ. ಆದರೆ ಕ್ರಿಕೆಟ್‌ ವಲಯದಲ್ಲಂತೂ ಅನುಮಾನ ಇದ್ದೇ ಇದೆ. ಈಗ ಮತ್ತೆ 29ನೇ ಬರ್ತಡೇ ಬೆನ್ನಲ್ಲೆ ಸ್ವಿಟ್ಜರ್ಲ್ಯಾಂಡ್‌ಗೆ ಹಾರಿದ ಸಾರಾ ಜತೆಗೆ ಇದ್ದವರೂ ಯಾರು ಎನ್ನುವ ವಿಷಯ ಸಂಚಲನ ಸೃಷ್ಟಿಸಿದೆ.

ಸ್ವಿಟ್ಜರ್ಲ್ಯಾಂಡ್‌ಗೆ ಹಾರಿದ ಸಾರಾ ಜತೆಗಿದ್ದವರು ಯಾರು?

ಇದೀಗ ಸಾರಾ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಅದರಲ್ಲೂ ಬರ್ತಡೇಯನ್ನು 29ನೇ ಚಾಪ್ಟರ್‍‌ ಎಂದು ಹಾಕಿದ್ದಾರೆ. ಅತ್ತಿಗೆ ಸಾನಿಯಾ ಚಾಂದವ್‌ ಸೇರಿ, ತಮ್ಮ ಬಂಧು-ಬಳಗ ಸ್ನೇಹಿತರೊಂದಿಗೆ, ವಿಶೇಷವಾಗಿ ಸ್ವಿಟ್ಜ್‌ರ್‍‌ಲ್ಯಾಂಡ್‌ನಲ್ಲಿ ಆಚರಿಸಿಕಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಭಿಮಾನಿಗಳು ಸಹ ಅವರ ಇನ್‌ಸ್ಟಾ ಸ್ಟೋರಿ ಹಾಗೂ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಕೆಲ ಪ್ರಶ್ನೆಗಳು ಜತೆಗಿದ್ದವರು ಯಾರು ಎನ್ನುವ ಪ್ರಶ್ನೆ ಕೇಳುವಂತಿದ್ದವು.