ವಿಶ್ವದ ಹವಾಮಾನದಲ್ಲಿ ಆಗಿರುವ ಬದಲಾವಣೆಗಳು ಸಮೃದ್ಧ ಹುಲ್ಲುಗಾವಲು ಪ್ರದೇಶವನ್ನು ಮರುಭೂಮಿಯಾಗಿ ಪರಿವರ್ತಿಸಿದೆ. ಹೀಗಾಗಿ, 6 ಸಾವಿರ ವರ್ಷಗಳ ಹಿಂದೆ ಹುಲ್ಲುಗಾವಲಾಗಿದ್ದ ಸಹರಾವು ಈಗ ಮರುಭೂಮಿಯಾಗಿದೆ ಎಂದಿದ್ದಾರೆ ಸಂಶೋಧಕರು.
ಟೆಕ್ಸಾಸ್(ಡಿ.03): ವಿಶ್ವದ ಅತ್ಯಂತ ದೊಡ್ಡ ಮರುಭೂಮಿ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಸಹರಾ ಆರು ಸಾವಿರ ವರ್ಷಗಳ ಹಿಂದೆ ಸಂಪೂರ್ಣ ಹಸಿರು ಹುಲ್ಲುಗಾವಲಾಗಿತ್ತು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಅಮೆರಿಕದ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದ ಸಂಶೋಧಕರು ಈ ವಿಚಾರ ಕಂಡುಕೊಂಡಿದ್ದಾರೆ.