ಆರು ವರ್ಷದ ಈ ಬಾಲಕನ ವಾರ್ಷಿಕ ಆದಾಯ 1.1 ಕೋಟಿ ರೂ!

First Published 20, Jul 2018, 4:24 PM IST
Ryan earns 1.1 crore per annum
Highlights

'ಯಾವ ಹುತ್ತದಲ್ಲಿ ಯಾವ ಹಾವಿರುತ್ತೆ...' ಎಂದು ಹೇಳಲಿಕ್ಕಾಗೋಲ್ಲ. ಅದಕ್ಕೇ ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ನೀರೆರೆಯಬೇಕೇ ಹೊರತು, ಒತ್ತಡ ಹಾಕಬಾರದು. ಅದಕ್ಕೊಂದು ಸಾಕ್ಷಿ ಇಲ್ಲಿದೆ...

ಯಾವ ಮಕ್ಕಳು ತಾನೇ ಗೊಂಬೆಯೊಂದಿಗೆ ಆಡೋಲ್ಲ ಹೇಳಿ. ಆಟಾನೂ ಆಡ್ತಾರೆ, ಹಾಳೂ ಮಾಡ್ತಾರೆ. ಅದೇನೂ ಮಕ್ಕಳಿಗೆ ಹೊಸ ವಿಷಯವೇ ಅಲ್ಲ. ಆದರೆ, ಇಲ್ಲೊಬ್ಬ ಆರು ವರ್ಷದ ಬಾಲಕ ಇದೇ ಟಾಯ್ಸ್‌ ಇಟ್ಕೊಂಡು ವರ್ಷಕ್ಕೆ ಕೋಟಿಗಟ್ಟಲೆ ದುಡಿಯುತ್ತಿದ್ದಾನೆ! ಮಗನ ತುಂಟಾಟವನ್ನೇ ಎನ್‌ಕ್ಯಾಷ್ ಮಾಡಿಕೊಳ್ಳುವಲ್ಲಿ ಪೋಷಕರೂಯಶಸ್ವಿಯಾಗಿದ್ದಾರೆ.

ಹೇಗೆ?

ರಯಾನ್ ಎಂಬ ಈ ಬಾಲಕ ತನ್ನದೇ ಆದ 'ರಯಾನ್ ಟಾಯ್ ರಿವ್ಯೂ' ಎಂಬ ಯು ಟ್ಯೂಬ್ ಚಾನೆಲ್ ಹೊಂದಿದ್ದಾನೆ. ಮಾರುಕಟ್ಟೆಗೆ ಬರುವ ಹೊಸ ಗೊಂಬೆಗಳನ್ನು ಮಕ್ಕಳಿಗೆ ಪೋಷಕರು ಸಹಜವಾಗಿಯೇ ಕೊಡಿಸುತ್ತಾರೆ. ಉಳ್ಳವರು ವಿಪರೀತ ಕೊಡಿಸಿದರೆ, ಇಲ್ಲದವರು ಸಾಧ್ಯವಾದಷ್ಟು ಕೊಡಿಸುತ್ತಾರೆ.  ತಂದು ಕೊಟ್ಟ ಆಟಿಕೆಯನ್ನೇ ರಯಾನ್‍‌ ವಿಮರ್ಶಿಸುತ್ತಿದ್ದ. ಆತನ ವಿಮರ್ಶೆ ಯುಟ್ಯೂಬ್‌ನಲ್ಲಿ ಅಪ್‌ಲೋಡ್  ಆಗುತ್ತದೆ. 

ಕೈಯಲ್ಲಿ ಆಟಿಕೆ ಇಟ್ಕೊಂಡು ಅದರ ಬಗ್ಗೆ ಮುಗ್ಧ ರಯಾನ್‌ ಮಾತನಾಡುವುದನ್ನು ನೋಡಲೇ ಚೆಂದ. ಈತನ ಮಾತಿಗೆ ಆಕರ್ಷಿತರಾಗಿ, ಈತನ ಯು ಟ್ಯೂಬ್ ಚಾನೆಲ್‌ ಅನ್ನು ಬರೋಬ್ಬರಿ 15 ದಶಲಕ್ಷ ಚಂದದಾರರಿದ್ದಾರೆ. 

ಮೊಟ್ಟೆ ವಿಮರ್ಶಿಸಿ ದೊಡ್ಡವನಾದ ರಯಾನ್!

ನಾಲ್ಕು ವರ್ಷದಿಂದಲೇ ಈ ಕೆಲಸ ಆರಂಭಿಸಿದ ರಯಾನ್ 2015ರಲ್ಲಿ ಒಮ್ಮೆ ದೊಡ್ಡ ಗಾತ್ರದ ಮೊಟ್ಟೆಯೊಂದರ ಬಗ್ಗೆ ವಿಮರ್ಶೆ ಮಾಡಿದ್ದ. ಅದನ್ನು ಬರೋಬ್ಬರಿ 800 ದಶಲಕ್ಷ ಮಂದಿ ವೀಕ್ಷಿಸಿಬಿಟ್ಟರು. ಕೂಡಲೇ ಗಣ್ಯರ ಸಾಲಿಗೆ ಸೇರಿ ದೊಡ್ಡವನಾಗಿಬಿಟ್ಟ ರಯಾನ್.ಪೋಷಕರ ಸಹಕಾರದೊಂದಿಗೆ ರಯಾನ್ ಮಾರುಕಟ್ಟೆ ಪ್ರವೇಶಿಸುವ ಬಹುತೇಕ ತಿಂಡಿ-ಆಟಿಕೆಗಳನ್ನು ವಿಮರ್ಶಿಸುತ್ತಾನೆ. ಅದನ್ನು ಅಪ್ಲೋಡ್ ಮಾಡುತ್ತಾನೆ. ಈತನ ಚಾನೆಲ್ ಚಂದಾದಾರರು ಹೆಚ್ಚುತ್ತಲೇ ಇದ್ದಾರೆ. ಕೀರ್ತಿಯೂ ಹೆಚ್ಚುತ್ತಲೇ ಇದೆ. ಅಲ್ಲದೇ ಬ್ಯಾಂಕ್ ಅಕೌಂಟ್‌ನ ಬ್ಯಾಲೆನ್ಸ್ ಸಹ. ಮಕ್ಕಳಲ್ಲಿ ಏನೆಲ್ಲ ಪ್ರತಿಭೆ ಇರಬಹುದು ನೋಡಿ. ಅದನ್ನು ಗುರುತಿಸುವುದು ಪೋಷಕರ ಹೊಣೆ.

 

loader