ಬೇಕಾಗುವ ಸಾಮಗ್ರಿಗಳು:

  • ಸಾಬುದಾನ (ಸೀಮೆ ಅಕ್ಕಿ) 1 ಕಪ್
  • ಆಲೂಗೆಡ್ಡೆ 2
  • ಶುಂಠಿ ಸ್ವಲ್ಪ
  • ರುಚಿಗೆ ತಕ್ಕಷ್ಟು ಉಪ್ಪು
  • ಕೊತ್ತಂಬರಿ
  •  ಕರಿಬೇವು
  • ಹಸಿಮೆಣಸು 2 ರಿಂದ 3
  •  ಕಡಲೆಕಾಯಿ ಬೀಜ- 1/4 ಕಪ್
  • ಎಣ್ಣೆ ಸ್ವಲ

ಮಾಡುವ ವಿಧಾನ:

ಸಾಬುದಾನವನ್ನು 2 ರಿಂದ 3 ಗಂಟೆಗಳ ಕಾಲ ನೀರಿನಲ್ಲಿ ನೆನಯಲು ಬೆಡಬೇಕು. ಆಲೂಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಕೊಂಡು ಇದಕ್ಕೆ ಹುರಿದ ಕಡಲೆಕಾಯಿಬೀಜವನ್ನು ಪುಡಿ ಮಾಡಿಕೊಂಡು ಸೇರಿಸಬೇಕು. ಸಣ್ಣಗೆ ಹೆಚ್ಚಿದ ಹಸಿಮೆಣಸು, ಕರಿಬೇವು, ಶುಂಠಿ, ಉಪ್ಪು ಎಲ್ಲವನ್ನೂ ಚೆನ್ನಾಗಿ ಬೆರೆಸಿ ಇದನ್ನು ಸಾಬುದಾನದೊಂದಿಗೆ ಮಿಶ್ರಣ ಮಾಡಿ ಸ್ವಲ್ಪ ಎಣ್ಣೆ ಸವರಿ ಚಪ್ಪಟೆಯಾಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ರುಚಿ-ರುಚಿಯಾದ ತಾಲಿಪಟ್ಟು ಸಿದ್ಧ.

ಬಿಸಿಯಲ್ಲಿ ಸಾಸ್ ಅಥವಾ ಚಟ್ನಿಯೊಂದಿಗೆ ಸವಿದರೆ ಇದರ ರುಚಿಯೇ ಸೂಪರ್.