ರೆಸಿಪಿ : ಪೈನಾಪಲ್ ಖೀರ್
ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ
ಬೇಕಾಗುವ ಸಾಮಗ್ರಿ:
- ಪೈನಾಪಲ್ 1
- ಸಕ್ಕರೆ ಕಾಲು ಕಪ್
- ಕೊಕನಟ್ ಮಿಲ್ಕ್ 2
- ಕಪ್
- ತುಪ್ಪ 2 ಚಮಚ
- ಗೋಡಂಬಿ 50 ಗ್ರಾಂ
- ಕಾರ್ನ್‌ಫ್ಲೋರ್ 1 ಚಮಚ
ಮಾಡುವ ವಿಧಾನ:
ಮೊದಲು ಪೈನಾಪಲ್ ಪೀಸ್‌ಗಳನ್ನು ಗೋಡಂಬಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ ತೆಗೆದಿಡಿ. ನಂತರ ಕೋಕೋನಟ್ ಮಿಲ್ಕ್‌ಗೆ ಕಾರ್ನ್‌ಫ್ಲೊರ್ ಸೇರಿಸಿ, ಸಕ್ಕರೆ ಬೆರೆಸಿ ಒಲೆಯ ಮೇಲಿಟ್ಟು ಕದಕುತ್ತಿರಬೇಕು.ಮಿಶ್ರಣವು ಬಿಸಿಯಾಗುವಾಗ ಫ್ರೈ ಮಾಡಿದ ಪೈನಾಪಲ್ ಹಾಗೂ ಗೋಡಂಬಿ ಸೇರಿಸಿ ಒಂದು ಬಾರಿ ಕುದಿ ಬಂದ ಕೂಡಲೇ ಕೆಳಗಿಳಿಸಬೇಕು. ಬಿಸಿ ಬಿಸಿಯಿರುವಾಗಲೇ ಸರ್ವ್ ಮಾಡಬೇಕು.