ರುಚಿ ರುಚಿಯಾಗಿ ನಾನ್ ವೆಜ್ ತಿನ್ನೋರಿಗೆ ಮಾಡಿ ಕೊಳ್ಳಿಕ್ಕೆ ಮಾತ್ರ ಬೇಜಾರು. ಒಳ್ಳೆ ಹೊಟೇಲ್‌ಗೆ ಹೋಗಿ ಬೇಕಾದ್ದನ್ನು ತಿಂದು, ಪರ್ಸ್ ಖಾಲಿ ಮಾಡಿಕೊಂಡು ಬರುವವರೇ ಹೆಚ್ಚು. ಅಂಥವರಿಗೆ ಇಲ್ಲಿದೆ ಸ್ಪೆಷಲ್ ಚಿಕನ್ ರೆಸಿಪಿ...

ಬೇಕಾಗುವ ಸಾಮಾಗ್ರಿಗಳು: 

 • ಚಿಕನ್
 • ಈರುಳ್ಳಿ
 • ಕೊತ್ತಂಬರಿ ಮತ್ತು ಪುದಿನಾ ಸೊಪ್ಪು
 • ಹಸಿಮೆಣಸು
 • ಶುಂಠಿ ಬೆಳ್ಳುಳ್ಳಿ ಪೇಸ್ಟ್
 • ಮೊಸರು
 • ಗರಂ ಮಸಾಲ
 • ಚಿಲ್ಲಿ ಪುಡಿ
 • ಜೀರಿಗೆ
 • ದನಿಯಾ ಪುಡಿ
 • ಉಪ್ಪು
 • ಬೇಕಾದರೆ ತುಪ್ಪ

ಮಾಡುವ ವಿಧಾನ: 

- ಜಾರಿನಲ್ಲಿ ಕೊತ್ತಂಬರಿ, ಪುದಿನಾ ಹಾಗು ಹಸಿಮೆಣಸಿನಕಾಯಿ ಹಾಕಿ, ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಪ್ಯಾನ್‌ಗೆ ತುಪ್ಪ, ಈರುಳ್ಳಿ ಹಾಕಿ ಪ್ರೈ ಮಾಡಿಕೊಳ್ಳಬೇಕು. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಬೇಕು.

- ನಂತರ ಇದಕ್ಕೆ ತೊಳೆದ ಚಿಕನ್ ಸೇರಿಸಿ ಬೇಯಿಸಬೇಕು. ಬೆಂದ ನಂತರ ಗಟ್ಟಿ ಮೊಸರು ಮತ್ತು ಮಾಡಿದ ಪೇಸ್ಟ್ ಸೇರಿಸಬೇಕು. ಇದನ್ನು ಕೆಲ ಕಾಲ ಬೇಯಲು ಬಿಡಬೇಕು. ನಂತರ ಗರಂ ಮಸಾಲ, ಜೀರಿಗೆ ಪುಡಿ, ಚಿಲ್ಲಿ ಪುಡಿ, ದನಿಯಾ ಪುಡಿ ಹಾಗು ಸ್ವಲ್ಪ ನೀರು ಸೇರಿಸಿ. ಎಲ್ಲ ಆದ ನಂತರ ಪ್ಯಾನ್ ಬದಿಯಲ್ಲಿ ಎಣ್ಣಿ ಬಿಡುತ್ತದೆ. ಆಗ ಸವಿಯುವ ಸ್ಪೆಷಲ್ ಚಿಕನ್ ಸಿದ್ಧ.