ಬೇಕಾಗುವ ಸಾಮಗ್ರಿಗಳು:

 • ಚಾವಲ್ (ಅಕ್ಕಿ) 3/4 ಕಪ್
 • ಹುಳಿ ಮೊಸರು 1 ಕಪ್
 • ಶುಂಠಿ ತುರಿ 1 ಚಮಚ 
 • ಹಸಿಮೆಣಸು 1 
 • ಉಪ್ಪು 1 ಚಮಚ
 • ತುಪ್ಪ 2 ಚಮಚ
 • ಕರಿಬೇವು 6 ರಿಂದ 7 ದಳ
 • ಜೀರಿಗೆ
 • ಸಾಸಿವೆ 1 ಚಮಚ
 • ಇಂಗು ಚಿಟಿಕೆ
 • ಅಡುಗೆ ಸೋಡಾ ಅರ್ಧ ಚಮಚ
 • ಬೇಕಿಂಗ್ ಸೋಡಾ ಅರ್ಧ ಚಮಚ
 • ಎಣ್ಣೆ 1 ಚಮಚ
 • ತೆಂಗಿನತುರಿ
 • 1/4 ಕಪ್
 • ಕೊತ್ತಂಬರಿ ಸ್ವಲ್ಪ

ಮಾಡುವ ವಿಧಾನ:

ಅಕ್ಕಿಯನ್ನು ಪ್ಯಾನ್‌ನಲ್ಲಿ ಹಾಕಿ ಹುರಿದುಕೊಂಡು ಇದರೊಂದಿಗೆ ಹುಳಿಮೊಸರು, ಶುಂಠಿ, ಉಪ್ಪು ಬೆರೆಸಿ ರುಬ್ಬಿಕೊಳ್ಳಬೇಕು. ನಂತರ ಸುಮಾರು 5 ರಿಂದ 6 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಇದಕ್ಕೆ ಅಡುಗೆ ಸೋಡಾ, ಬೇಕಿಂಗ್ ಸೋಡಾ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ತುಪ್ಪ ಸವರಿದ ಬಟ್ಟಲಿಗೆ ಹಾಕಿ 15 ರಿಂದ 20 ನಿಮಿಷಗಳ ಕಾಲ ಸ್ಟೀಮರ್‌ನಲ್ಲಿ ಬೇಯಿಸಿ ನಂತರ ಮೇಲೆ ಇಂಗು, ಸಾಸಿವೆ, ಜೀರಿಗೆ, ಕರಿ ಬೇವಿನೊಂದಿಗೆ ಒಗ್ಗರಣೆ ಹಾಕಿ. ಅದರ ಮೇಲೆ ಕಾಯಿ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಂದವಾದ ಚಾವಲ್ ದೋಕ್ಲಾ ಚಟ್ನಿಯೊಂದಿಗೆ ಸವಿಯಲು ರೆಡಿ.