ಹೆಣ್ಣನ್ನು ಹೆಮ್ಮೆ ಪಡುವಂತೆ ಮಾಡುವ ಮುಟ್ಟಿನಿಂದ ನೂರಾರು ಸಮಸ್ಯೆಗಳೂ ಇವೆ. ಮುಟ್ಟಿಗೂ ಮುನ್ನ ಅಥವಾ ನಂತರ ಕಾಡೋ ಸಮಸ್ಯೆಗಳಲ್ಲಿ ಪಿಎಂಡಿಡಿ ಸಹ ಒಂದು. ಏನಿದು ರೋಗ?

ಪ್ರಿಮೆಚ್ಯೂರ್ ಡೈಸ್ಫೋರಿಕ್ ಎಂದು ಕರೆಯಲ್ಪಡುವ ಪಿಎಂಡಿಡಿ ಮನಸ್ಸಿ ಮೇಲೆ ಪರಿಣಾಮ ಬೀರುವ ಸಮಸ್ಯೆ. ಸುಮ್ ಸುಮ್ಮನೆ ಅಳುವುದು, ಕೋಪ, ಯಾರ ಮೇಲಾದರೂ ಸುಮ್ಮನೆ ರೇಗುವಂತಾಗಿದ್ದರೆ, ಅದು ಪಿಎಂಡಿಡಿ ಎಂದು ಪರಿಗಣಿಸಬಹುದು. 'ಓ ಪಿರಿಯಡ್ಸ್ ಟೈಂ ಬಂತು, ಅದಕ್ಕೆ ಹೀಗಾಗುತ್ತಿದೆ,' ಎಂದು ಕೆಲವರು ಅರ್ಥ ಮಾಡಿಕೊಂಡು, ಅದನ್ನು ಓವರ್‌ಕಮ್ ಮಾಡಿಕೊಳ್ಳಲು ತಕ್ಕ ಕ್ರಮ ಕೈಗೊಳ್ಳುತ್ತಾರೆ. ಆದರೆ, ಮತ್ತೆ ಕೆಲವರು ಏನಾಗುತ್ತಿದೆ ಎಂಬುವುದೇ ಅರ್ಥವಾಗದೇ ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. 

ಮುಟ್ಟಾಗುವ ಮುನ್ನ ಆಗುವ ಹೈಪರ್‌ ಸ್ಯಾನಿಟಿ ಅಥವಾ ಹಾರ್ಮೋನ್ ಬದಲಾವಣೆಯಿಂದ ಈ ಸಮಸ್ಯೆ ತಲೆದೂರುತ್ತದೆ. ಅಲ್ಲದೇ ಕೆಲವೊಮ್ಮೆ ಅನುವಂಶಿಕವಾಗಿಯೂ ಬರುತ್ತದೆ. 

ಅಷ್ಟಕ್ಕೂ ಕಾಡೋ ಸಮಸ್ಯೆ ಏನು?

  • ಮೋಡ್ ಸ್ವಿಂಗ್
  • ಖಿನ್ನತೆ
  • ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ
  • ಕಂಗಾಲಾಗುವುದು/ ದಿಗಿಲುತನ
  • ನಿದ್ದೆ ಬಾರದಿರುವುದು
  • ಮೃದುವಾಗುವ ಸ್ತನ 
  • ತಲೆ ನೋವು

ಮದ್ದೇನು?

  • ನಿಯಮಿತ ವ್ಯಾಯಾಮ
  • ಕೊಬ್ಬನಂಶ ಕಡಿಮೆ ಮಾಡಿ ಕೊಳ್ಳುವಂಥ ನಿಯಮಿತ ಪಥ್ಯ
  • ಕಾಲು ಮೇಲೆ ಕಾಲು ಹಾಕಿ ಕೂರದಿರುವುದು.
  • ಮನಸ್ಸು ಸಕ್ರಿಯವಾಗುವಂಥ ಚಟುವಟಿಕೆಗಳಲ್ಲಿ ತೊಡಗುವುದು.