Asianet Suvarna News Asianet Suvarna News

ಚಿಕನ್ ಪಾಕ್ಸ್ ಮರುಕಳಿಸಲು ಕಾರಣವೇನು?

ಬೇಸಿಗೆಯಲ್ಲಿ ಮಕ್ಕಳನ್ನು ಚಿಕನ್ ಪಾಕ್ಸ್‌ ಕಾಡೋದು ಸಾಮಾನ್ಯ. ಎಲ್ಲರನ್ನೂ ಒಂದಲ್ಲ, ಒಂದ್ಸಾರಿ ಕಾಡೋ ಈ ರೋಗ ಕೊಡೋ ಕಾಟ ಅಷ್ಟಿಷ್ಟಲ್ಲ. ಇದರಿಂದ ಉಂಟಾಗೋ ಕಲೆಯೂ ಜೀವಮಾನ ಪೂರ್ತಿ ಉಳಿಯುತ್ತದೆ. 

Reason for chicken pox to cause again
Author
Bengaluru, First Published Aug 23, 2018, 5:18 PM IST

ಚರ್ಮದ ತುರಿಕೆ ಮೂಲಕ ಕಾಣಿಸಿಕೊಳ್ಳುವ ಈ ರೋಗದ ಲಕ್ಷಣ, ನಂತರ ಬೆನ್ನು, ಮುಖ ಮತ್ತು ಹೊಟ್ಟೆ ಮೇಲೆ ಗುಳ್ಳೆಯೊಂದಿಗೆ ಉರಿ ಕಾಣಿಸುವ ಮೂಲಕ ಉಲ್ಬಣಗೊಳ್ಳುತ್ತದೆ. ಸುಮಾರು 250ರಿಂದ 500 ಗುಳ್ಳೆಗಳೂ ಏಳಬಹುದು. ಈ ಗುಳ್ಳೆಯೊಂದಿಗೆ ಜ್ವರ, ತಲೆನೋವು, ತಲೆಸುತ್ತು ಮತ್ತು ಆಯಾಸ ರೋಗದ ಹಲವು ಲಕ್ಷಣಗಳು.

ರೋಗಕ್ಕೇನು ಕಾರಣ?

  • ಚಿಕನ್ ಪಾಕ್ಸ್ ಸಾಂಕ್ರಾಮಿಕ ರೋಗ. ಒಬ್ಬರಿಂದ ಇನ್ನೊಬ್ಬರಿಗೆ  ಹರಡುತ್ತದೆ. 
  • ವೆರಿಸೆಲ್ಲಾ ವೈರಸ್ ದೇಹವನ್ನು ಆಕ್ರಮಿಸಿ 10 ರಿಂದ 15 ದಿನಗಳ ನಂತರ ರೋಗದ ಲಕ್ಷಣ ಒಂದೊಂದಾಗಿ ಕಾಣುತ್ತದೆ. 

ಎರಡು ಸಲ ಬರುತ್ತಾ? 

ವೆರಿಸೆಲ್ಲಾ ವೈರಸ್ ಇಡೀ ದೇಹವನ್ನು ಆಕ್ರಮಿಸಿ, ಕ್ಲಿನಿಕಲ್  ಸಿಂಡ್ರೋಮ್ ಕಾಯಿಲೆ ತರಿಸುತ್ತದೆ. ಹರ್ಪಿಸ್ ತರಿಸುವ ಈ ವೈರಸ್ ದೇಹವನ್ನು ಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಪುನಾ ಚಿಕನ್ ಪಾಕ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಇದನ್ನು ಹರ್ಪಿಸ್ ಜೋಸ್ಟರ್ ಎಂದು ಕರೆಯುತ್ತಾರೆ. 

ಅಷ್ಟು ಸುಲಭವಾಗಿ ಚಿಕನ್ ಪಾಕ್ಸ್ ಅಥವಾ ಅಮ್ಮ ಎಂದು ಕರೆಯುವ ಈ ರೋಗ ಮರುಕಳಿಸುವುದಿಲ್ಲ. ಆದರೆ ದೇಹದಲ್ಲಿ ಈ ವೈರಸ್ ಉಳಿದಿದ್ದರೆ, ತುರಿಕೆ ಮತ್ತು ಉರಿ ತರಿಸುತ್ತದೆ. ಆದರೆ ಗುಳ್ಳೆಗಳು ಬರುವುದಿಲ್ಲ. 

ಅಕಸ್ಮಾತ್ ಜೀವನದಲ್ಲಿ ಒಮ್ಮೆಯೂ ಅಮ್ಮ ಆಗಿಲ್ಲವೆಂದರೆ, ಗರ್ಭಿಣಿಯಾಗಬೇಕೆಂಬ ಹಂಬಲವುಳ್ಳವರು ಮುಂಚಿತವಾಗಿಯೇ ಈ ರೋಗ ತಡೆಯುವ ಚುಚ್ಚುಮದ್ದು ಪಡೆಯುವುದು ಒಳ್ಳೆಯದು. ಆಗ ಗರ್ಭಿಣಿಗೆ ಈ ರೋಗ ಕಾಡದಂತೆ ಎಚ್ಚರವಹಿಸಬಹುದು.

Follow Us:
Download App:
  • android
  • ios