ಓದುಗರೆ ಯುಗಾದಿ ಶುಭಾಶಯ : ವರ್ಷದ ನಿಮ್ಮ ರಾಶಿ ಫಲಾಫಲ ಹೇಗಿದೆ ಗೊತ್ತಾ..?

life | Sunday, March 18th, 2018
Suvarna Web Desk
Highlights

ಓದುಗರೆ ಯುಗಾದಿ ಶುಭಾಶಯ :  ವರ್ಷದ ನಿಮ್ಮ ರಾಶಿ ಫಲಾಫಲ ಹೇಗಿದೆ ಗೊತ್ತಾ..?

ಓದುಗರೆ ಯುಗಾದಿ ಶುಭಾಶಯ :  ವರ್ಷದ ನಿಮ್ಮ ರಾಶಿ ಫಲಾಫಲ ಹೇಗಿದೆ ಗೊತ್ತಾ..?

ಮೇಷ

ಲಾಭ ಮತ್ತು ಸಮಸ್ಯೆಗಳ ಮಧ್ಯೆ ಇದ್ದೀರಿ. ಸಮಸ್ಯೆಗಳನ್ನು

ಪರಿಹರಿಸಿಕೊಳ್ಳಲಿಕ್ಕೆ ಒದ್ದಾಟ. ಅಹಂಕಾರವನ್ನು ಬಿಡಬೇಕು. ಮೊದಲ ಆರು

ತಿಂಗಳು ಒಂದು ಫಲ, ನಂತರದ ಆರು ತಿಂಗಳು ಒಂದು ಫಲ. ಮಾನವತ್ವ

ಗುಣ ಅರಿತು ಬಾಳಿ. ಹೆಣ್ಣುಮಕ್ಕಳಿಗೆ ಕೊಂಚ ಅನಾರೋಗ್ಯ ಬಾಧೆ ಕಾಡಲಿದೆ.

ಧನ್ವಂತರಿ ಜಪ ಮಾಡಿ. ಸಾಧ್ಯವಾದಷ್ಟು ಮೌನದಿಂದಿರಿ.

 

ವೃಷಭ

ಆರೋಗ್ಯದ ಕಡೆ ಲಕ್ಷ್ಯವಿರಲಿ. ಒಬ್ಬರನ್ನು ನಂಬುವಾಗ ಹತ್ತುಬಾರಿ ಯೋಚಿಸಿ.

ನಂಬಿ ಮೋಸಹೋಗುವ ಸಾಧ್ಯತೆ ಇದೆ. ಹೃದಯ ಸಂಬಂಧೀ ಹಾಗೂ ಶೀತ

ರೋಗಗಳು ನಿಮ್ಮನ್ನು ಬಾಧಿಸಲಿವೆ. ಚಂದ್ರಶೇಖರನ ಪ್ರಾರ್ಥನೆ ಮಾಡಿ.

ವಾಹನದಲ್ಲಿ ಚಲಿಸುವಾಗ ಎಚ್ಚರದಿಂದಿರಬೇಕು. ಮೊಣಕಾಲು ನೋವು

ಕಾಡಲಿದೆ. ಮುಖ್ಯವಾದ ಕಾಗದ ಪತ್ರಗಳನ್ನು ಕಳೆದುಕೊಳ್ಳುತ್ತೀರಿ.

ಸಾಕುಪ್ರಾಣಿಗಳೊಂದಿಗೆ ಎಚ್ಚರದಿಂದಿರಿ. ಈ ವರ್ಷದಲ್ಲಿ ಸಮಾಧಾನವೂ ಇದೆ

ಅಸಮಧಾನವೂ ಇದೆ. ರೈತರಿಗೆ ಶುಭದಿನಗಳಿವೆ.

 

ಮಿಥುನ

ಲಾಭದ ದಿನಗಳನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಸುಖವನ್ನು

ಕಾಣಲಿದ್ದೀರಿ. ನಿಮ್ಮ ಮನೋಭಿಲಾಷೆಗಳು ಈಡೇರುತ್ತವೆ. ಸಂಧ್ಯಾಕಾಲದಲ್ಲಿ

ದೇವರ ಪ್ರಾರ್ಥನೆ ಮಾಡಿ. ಮಾಡುವ ಕೆಲಸದ ಬಗ್ಗೆ ಹತ್ತು ಬಾರಿ ಯೋಚಿಸಿ,

ಆರೋಗ್ಯದ ಕಡೆ ಹೆಚ್ಚು ಗಮನವಹಿಸಿ. ಲಾಭ-ನಷ್ಟಗಳೆರಡನ್ನೂ ಈ ವರ್ಷ

ಕಾಣಲಿದ್ದೀರಿ. ಕೊನೆಯ ಮೂರು ತಿಂಗಳು ಕಚೇರಿ, ವ್ಯಾಪಾರ,

ಉದ್ಯೋಗಗಳಲ್ಲಿ ತೊಂದರೆ ಅನುಭವಿಸುತ್ತೀರಿ. ದೇವಿ ಆರಾಧನೆ

ಮಾಡುವುದರಿಂದ ಮನಸ್ಸಿಗೆ ನೆಮ್ಮದಿ.

 

ಕಟಕ

ಎಲ್ಲರನ್ನೂ ಒಗ್ಗೂಡಿಸಿ ನಡೆಸುವ ಗುಣ ನಿಮ್ಮದು. ಮನಸ್ಸು ಸದಾ ಚಂಚಲ.

ನೀವು ಹೇಳಿದಂತೆಯೇ ನಡೆಯಬೇಕು ಎಂಬ ಧೋರಣೆ. ಆ ಗುಣ ಬೇಡ.

ತೀರ್ಥಕ್ಷೇತ್ರಗಳ ದರ್ಶನ ಮಾಡಿ. ಮುಂದಿನ ದಿನಗಳಲ್ಲಿ ಸಮಸ್ಯೆಗಳು

ಎದುರಾಗಲಿವೆ, ನಿಮಗೆ ಮಾರ್ಗದರ್ಶನ ಮಾಡುತ್ತಿರುವವರ ಮಾತು ಕೇಳಿ.

ದುರ್ಗಾ ಆರಾಧನೆ ಮಾಡುವುದರಿಂದ ಕಷ್ಟ ಪರಿಹಾರ.

 

ಸಿಂಹ

ಆರೋಗ್ಯ ಹಾಗೂ ವ್ಯಾಪಾರದಲ್ಲಿ ಕಾಳಜಿ ಇರಲಿ. ನಂಬಿಕೆ

ಅರ್ಥಪೂರ್ಣವಾಗಿರಲಿ. ರೈತರು ಹಾಗೂ ವ್ಯಾಪಾರಿಗಳಿಗೆ ಲಾಭ ಹಾಗೂ ನಷ್ಟ

ಎರಡೂ ಫಲಗಳಿವೆ. ದುರ್ಗೆಗೆ ದೀಪ ನಮಸ್ಕಾರ ಮಾಡುವುದರಿಂದ ಕಷ್ಟ

ನಿವಾರಣೆಯಾಗುವ ಸಾಧ್ಯತೆ. ಆದಿಶಕ್ತಿಯ ಆರಾಧನೆ ಮಾಡಿ, ಜೇನು

ನೈವೇದ್ಯ ಮಾಡಿ. ಯಜ್ಞ-ಯಾಗಾದಿಗಳಲ್ಲಿ ಭಾಗವಹಿಸಿ.ಸಮಸ್ಯೆಗಳನ್ನು

ಬಗೆಹರಿಸಿಕೊಳ್ಳಿ.

 

ಕನ್ಯಾ

ಕಳೆದ ವರ್ಷ ನೀವು ಅನುಭವಿಸಿದ್ದ ಸಮಸ್ಯೆಗಳು ಈ ವರ್ಷ

ಪರಿಹಾರವಾಗಲಿವೆ. ಲಾಭದ ದಿನಗಳನ್ನು ನಿರೀಕ್ಷಿಸಬಹುದು. ಶತ್ರುಗಳೂ

ಕೂಡ ಮಿತ್ರರಾಗುತ್ತಾರೆ. ಶಾಂತಿ-ನೆಮ್ಮದಿಯನ್ನು ಕಾಣಲಿದ್ದೀರಿ. ಏಳಿಗೆಯ

ದಿನಗಳು ಇವು. ಒಂಭತ್ತು ಶುಕ್ರವಾರ ದೇವಿ ದೇವಸ್ಥಾನಕ್ಕೆ ಹೋಗಿಬನ್ನಿ.

ಸಾಧ್ಯವಾದರೆ ದೀಪ ನಮಸ್ಕಾರ ಮಾಡಿ.

 

ತುಲಾ

ಹಿಂದಿನ ವರ್ಷದ ಸಮಸ್ಯೆಗಳೆಲ್ಲಾ ಬಗೆಹರಿದು ಹೊಸತನವನ್ನು ಕಾಣಲಿದ್ದೀರಿ.

ಭೂಮಿ ಲಾಭ ಹಾಗೂ ಆರ್ಥಿಕ ಲಾಭವನ್ನು ಹೊಂದಲಿದ್ದೀರಿ.

ಸುಖ-ಸಂತೋಷಗಳು ಸಮೃದ್ಧಿಯಾಗಲಿದೆ. ಹಿರಿಯರ ಆಶೀರ್ವಾದವೂ ನಿಮ್ಮ

ಮೇಲಿದೆ. ಆದರೆ ಮೂರು ತಿಂಗಳು ದಾಟಿದ ಮೇಲೆ ಸಮಸ್ಯೆಗಳು

ಕಾಡಲಾರಂಭಿಸುತ್ತವೆ. ಆನಂತರ ಮತ್ತೆ ಲಾಭದ ದಿನಗಳೂ ಇವೆ. ಶನೈಶ್ಚರನ

ಪ್ರಾರ್ಥನೆ ಮಾಡಿ ಜೊತೆಗೆ ಹನುಮನ ಪ್ರಾರ್ಥನೆಯನ್ನೂ ಮಾಡಿ.

 

ವೃಶ್ಚಿಕ

ಸಣ್ಣಪುಟ್ಟ ವ್ಯತ್ಯಾಸಗಳನ್ನು ಕಾಣಲಿದ್ದೀರಿ. ಆತಂಕದಿನಗಳೇ ಹೆಚ್ಚಾಗಿವೆ. ಅಳುಕಿನ

ದಿನಗಳು ಇವು. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲೇ ಜೀವನ

ಸಾಗುತ್ತದೆ. ಅಹಂಕಾರ ಸ್ವಭಾವವನ್ನು ಬಿಡಿ, ಶನಿದೇವರ ಹಾಗೂ ಹನುಮಂತ

ದೇವರ ಆರಾಧನೆ ಮಾಡುವುದರಿಂದ ಕಷ್ಟ ನಿವಾರಣೆಯಾಗಲಿದೆ. ಮನೆ ದೇವರ

ಪ್ರಾರ್ಥನೆ ಹಾಗೂ ಭೇಟಿಯನ್ನು ತಪ್ಪದೆ ಮಾಡಿ.

 

ಧನಸ್ಸು

ವ್ಯಾಪಾರದಲ್ಲಿ ನಷ್ಟ ಸಂಭವ. ಕಷ್ಟದ ದಿನಗಳು ನಿಮ್ಮ ಮುಂದಿವೆ.

ಮೋಸಹೋಗುವ ಸಾಧ್ಯತೆ ಹೆಚ್ಚಾಗಿದೆ. ಮುಖ್ಯ ವಸ್ತುಗಳು ಕಳವಾಗುತ್ತವೆ. ಎಷ್ಟೇ

ಜೋಪಾನ ಮಾಡಿದರೂ ಕಷ್ಟ ತಪ್ಪಿದ್ದಲ್ಲ. ಸ್ವಲ್ಪ ದಿನಗಳ ನಂತರ ಎಲ್ಲವೂ ಸುಸ್ಥಿತಿಗೆ

ಬರಲಿದೆ. ಸಂಕಷ್ಟಹರ ಗಣಪತಿ ವ್ರತ ಮಾಡಿ. ೨೧ ಗರಿಕೆಯನ್ನು ದೇವರಿಗೆ

ನಿವೇದಿಸಿ. ಓಂ ಗಂ ಗಣಪತಯೇ ನಮ: ಮಂತ್ರವನ್ನು ಹೇಳಿಕೊಳ್ಳಿ. ಆತ್ಮೀಯರು

ಹೇಳಿದ ಮಾತನ್ನು ಕೇಳಿ. ನಡವಳಿಕೆಯಲ್ಲಿ ಎಚ್ಚರವಹಿಸಿ.

 

ಮಕರ

ಸಾಡೇಸಾತ್ ಪ್ರಾರಂಭವಾಗಿದೆ. ಶನಿಯಿಂದ ಕಷ್ಟಗಳನ್ನು ಕಾಣಲಿದ್ದೀರಿ.

ಸಾಕುಪ್ರಾಣಿಗಳಿಂದ ತೊಂದರೆ ಅನುಭವಿಸಲಿದ್ದೀರಿ. ಹೃದಯಬೇನೆ ಹಾಗೂ

ಕಾಲಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಯಪಡುವ ಅವಶ್ಯಕತೆ

ಇಲ್ಲ. ಸಾಧ್ಯವಾದರೆ ೯ ವಾರ ಎಳ್ಳು ದಾನ ಮಾಡಿ, ಹಸಿರು ವಸ್ತ್ರ ಹಾಗೂ

ಹೆಸರುಕಾಳು ದಾನ ಮಾಡಿ. ಸಮಸ್ಯೆಗಳು ನಿವಾರಣೆಯಾಗಲಿವೆ.

 

ಕುಂಭ

ಆರು ತಿಂಗಳು ಸಮಾಧಾನದ ಜೀವನವನ್ನು ನಡೆಸುತ್ತೀರಿ. ಆರುತಿಂಗಳ ನಂತರ

ಸಮಸ್ಯೆಗಳು ಕಾಡಲಿವೆ. ಅಹಂಕಾರ ಬೇಡ. ಕಾಯಕದಲ್ಲಿ ಪ್ರಗತಿಬೇಕಾದರೆ

ದೇವಿಯ ಪ್ರಾರ್ಥನೆ ಮಾಡಿ. ಯಾರು ಏನೇ ಹೇಳಿದರೂ ವಿಚಾರಿಸಿ.

ಗರ್ಭಿಣಿಯರಿಗೆ ಸಮಸ್ಯೆಗಳು ಎದುರಾಗಲಿವೆ, ಹಿರಿಯರ ಮಾರ್ಗದರ್ಶನ

ಪಡೆಯಿರಿ. ಮರೆವು ನಿಮ್ಮನ್ನು ಕಾಡಲಿದೆ. ಒಂದೆಲಗವನ್ನು ಸೇವಿಸಿ.

 

ಮೀನ

ಈ ವರ್ಷ ಅಧಿಕ ಲಾಭ. ಮಾನಸಿಕ ಶಾಂತಿ. ಭೂಲಾಭವೂ ಇದೆ. ಬೆಳಕು

ಕಾಣುವ ದಿನಗಳು ನಿಮ್ಮ ಮುಂದಿವೆ. ಹಿರಿಯರು ಸ್ನೇಹಿತರು ಹೇಳಿದ

ಮಾತನ್ನು ಕೇಳಿ. ಗಂಭೀರವಾಗಿ ವಿಚಾರ ಮಾಡುವ ಗುಣ ಬೆಳೆಸಿಕೊಳ್ಳಿ. ರಾತ್ರಿ

ಕಾಲದಲ್ಲಿ ಹೆಚ್ಚು ಬಲಯುತರಾಗಿರುತ್ತೀರಿ. ಗುರುಗಳ ದರ್ಶನ ಮಾಡಿದರೆ

ಜೀವನ ಸಾರ್ಥಕವಾಗುವುದು. ಕಂದು ಬಣ್ಣದ ಹಸುವಿನ ದರ್ಶನ ಮಾಡಿದಲ್ಲಿ

ಈ ವರ್ಷ ಹರ್ಷದಾಯಕವಾಗಿರುವುದು.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk