ಹಸುವಿನ ಸಗಣಿಯ 'ಕೊರೋನಾ ರಾಖಿ' ಇದು ಒಳ್ಳೆಯದು!
ದೇಶದಲ್ಲಿ ಕೊರೋನಾ ನಡುವೆ ರಕ್ಷಾ ಬಂಧನ ಸಂಭ್ರಮ/ ಹೈದರಾಬಾದಿನ ಅಂಗಡಿಯೊಂದರಲ್ಲಿ ಪರಿಸರ ಪ್ರೇಮ ಸಾರುವ ರಾಖಿ/ ಹಸುವಿನ ಸಗಣಿಯಿಂದ ತಯಾರಿಸಿದ ರಾಖಿ/ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ
ಹೈದರಾಬಾದ್(ಆ. 03) ತೆಲಂಗಾಣದ ಅಂಗಡಿಯೊಂದರಲ್ಲಿ 'ಕೊರೋನಾ ರಾಖಿ' ರಕ್ಷಾಬಂಧನದ ವಿಶೇಷ. ಹಸುವಿನ ಸಗಣಿಯಿಂದ ತಯಾರಿಸಿದ ರಾಖಿ ಪರಿಸರ ಪ್ರೇಮ ಸಾರಿದೆ.
ಕೊರೋನಾ ಕಾರಣದಿಂದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮವಾಗಿದ್ದು ಹೊಸ ಹೊಸ ಆಲೋಚನೆಗಳ ಮೂಲಕ ಜನರ ತಲುಪುವ ಕೆಲಸ ಮಾಡಲಾಗುತ್ತಿದೆ. ಅದರಲ್ಲಿ ಈ ಸಗಣಿ ರಾಖಿಯೂ ಒಂದು.
ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು
ಈ ಬಗ್ಗೆ ಮಾತನಾಡಿದ ಅಂಗಡಿ ಮಾಲೀಕ ಆಕಾಶ್, ಕೊರೋನಾ ಕಾರಣಕ್ಕೆ ವ್ಯಾಪಾರ-ವಹಿವಾಟು ಬಿದ್ದುಹೋಗಿದ್ದು ಇಂಥ ಪರ್ಯಾಯ ಕ್ರಮ ಮತ್ತು ಹೊಸ ಆಲೋಚನೆಗಳ ಮೊರೆ ಹೋಗಿದ್ದೇವೆ ಎಂದಿದ್ದಾರೆ.
ನಾವು ಸಹ ಹೆಚ್ಚಿನ ಜನ ಸೇರಲು ಅವಕಾಶ ಮಾಡಿಕೊಟ್ಟಿಲ್ಲ. ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡೆ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಾರೆ. ದೇಶದೆಲ್ಲೆಡೆ ರಕ್ಷಾ ಬಂಧನ ಸಂಭ್ರಮ ಇದೆ. ಕೊರೋನಾ ಕಾರಣಕ್ಕೆ ನಾಗರಿಕರು ಸಹ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡೆ ಹಬ್ಬ ಆಚರಣೆ ಮಾಡುತ್ತಿದ್ದಾರೆ.