ತನ್ನ ಸಹೋದರಿನಿಗೆ ಒಳ್ಳೆಯದಾಗಲಿ, ಅವನ ಭವಿಷ್ಯ ಪ್ರಜ್ವಲಿಸಲಿ ಎಂಬ ನಿಟ್ಟಿನಲ್ಲಿ ಅತ್ಯಂತ ಪ್ರೀತಿಯಿಂದ ತಂಗಿ ಬಂದು ಕಟ್ಟುವ ರಾಖಿ ಹಬ್ಬಕ್ಕೆ ಅದರದೇ ಆದ ಮಹತ್ವವಿದೆ. ಇಲ್ಲಿ ಬಾಂಧವ್ಯಗಳ ಬೆಸುಗೆಯಾಗುವುದಲ್ಲದೆ, ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತಲೇ ಹೋಗುತ್ತದೆ. ಜೊತೆಗೆ ಅಣ್ಣ ಸಹ ತಂಗಿಯ ರಕ್ಷಣೆಗೆ ನಿಲ್ಲುತ್ತೇನೆ ಎಂಬ ಅಭಯವನ್ನೂ ಇದೇ ಸಂದರ್ಭದಲ್ಲಿ ಆಶೀರ್ವಾದ ರೂಪದಲ್ಲಿ ನೀಡುತ್ತಾನೆ. ಈ ರಾಖಿ ಹಬ್ಬವು ಪ್ರತಿ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲ್ಪಡುತ್ತದೆ. ಈ ಬಾರಿ ಇದೇ ಸೋಮವಾರ (03-08-2020) ದಂದು ಆಚರಿಸಲ್ಪಡುತ್ತಿದೆ. ಅಂದಹಾಗೆ ಯಾವ ರಾಶಿಯ ಸಹೋದರನಿಗೆ ಯಾವ ಬಣ್ಣದ ರಾಖಿ ಕಟ್ಟಿದರೆ ಒಳಿತಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಶ್ರಾವಣ ಮಾಸದ ಹುಣ್ಣಿಮೆಯ ತಿಥಿ ದಿನವನ್ನು ರಕ್ಷಾ ಬಂಧನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಸಹೋದರಿ ತನ್ನ ಅಣ್ಣನಿಗೆ ರಾಖಿ ಕಟ್ಟುವ ಸಂಪ್ರದಾಯವಿದೆ. ಹೀಗೆ ರಾಖಿ ಕಟ್ಟುವುದರ ಮೂಲಕ ಸಹೋದರ ಸುಖೀ ಜೀವನ ನಡೆಸಲಿ ಎಂದು ಹಾರೈಸುತ್ತಾ, ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾಳೆ. ಇದೇ ವೇಳೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಿದರೆ ಒಳ್ಳೆಯದಾಗುತ್ತದೆ ಎಂಬ ಬಗ್ಗೆ ಉಲ್ಲೇಖವಿದೆ. ಅದು ಯಾವುದು ಎಂಬುದರ ಬಗ್ಗೆ ಗಮನಿಸೋಣ.

ಮೇಷ ರಾಶಿ
ಈ ರಾಶಿಯ ಸಹೋದರನಿದ್ದರೆ ಈ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದ್ದು, ಇವರಿಗೆ ಕೆಂಪು ಬಣ್ಣದ ರಾಖಿ ಕಟ್ಟುವುದು ಶುಭದಾಯಕ ಎಂದು ಹೇಳಲಾಗುತ್ತದೆ. ಇವರ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತದೆ. 

ವೃಷಭ ರಾಶಿ
ಈ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ನೀಲಿ ಬಣ್ಣದ ರಾಖಿಯು ಈ ರಾಶಿಯ ಸಹೋದರನಿಗೆ ಸೂಕ್ತವಾಗುತ್ತದೆ. ಇದನ್ನು ಕಟ್ಟಿದರೆ ಇವರಿಗೆ ತುಂಬಾ ಉತ್ತಮ ಪರಿಣಾಮಗಳಾಗಿ ಒಳ್ಳೆಯ ದಿನಗಳನ್ನು ಕಾಣುತ್ತಾರೆ.

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ಮಿಥುನ ರಾಶಿ
ಈ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಹಸಿರು ಬಣ್ಣದ ರಾಖಿಯನ್ನು ಇವರಿಗೆ ಕಟ್ಟುವುದು ಶುಭದಾಯಕ. ಇದರಿಂದ ಸುಖ-ಸಮೃದ್ಧಿ ಹಾಗೂ ದೀರ್ಘಾಯಸ್ಸು ಲಭಿಸುತ್ತದೆ. 



ಕರ್ಕಾಟಕ ರಾಶಿ
ಈ ರಾಶಿಯ ಅಧಿಪತಿ ಚಂದ್ರ ಗ್ರಹವಾಗಿದೆ. ಈ ರಾಶಿಯವರಿಗೆ ಹಳದಿ ಅಥವಾ ಬಿಳಿ ಬಣ್ಣದ ರಾಖಿ ಹೊಂದಾಣಿಕೆಯಾಗುತ್ತದೆ. ಈ ಬಣ್ಣಗಳ ರಾಖಿಯನ್ನು ಕಟ್ಟಿದರೆ ಇವರಿಗೆ ಶುಭವನ್ನು ತಂದುಕೊಡುತ್ತದೆ. 

ಸಿಂಹ ರಾಶಿ
ಈ ರಾಶಿಯ ಅಧಿಪತಿ ಸೂರ್ಯಗ್ರಹವಾಗಿದೆ. ಈ ರಾಶಿಯ ಸಹೋದರನಿಗೆ ಹಳದಿ ಅಥವಾ ಕೆಂಪು ಬಣ್ಣದ ರಾಖಿಯನ್ನು ಕಟ್ಟಬೇಕು. ಇದರಿಂದಾಗಿ ಇವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

ಕನ್ಯಾ ರಾಶಿ
ಈ ರಾಶಿಯ ಅಧಿಪತಿಯು ಬುಧ ಗ್ರಹವಾಗಿದೆ. ಹಸಿರು ಬಣ್ಣದ ರಾಖಿಯನ್ನು ಇವರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಯಾವುದೇ ದೋಷಗಳಿದ್ದರೂ ನಿವಾರಣೆಯಾಗುತ್ತದೆ. ಜೊತೆಗೆ ಸಹೋದರ ಹಾಗೂ ಸಹೋದರಿ ನಡುವಿನ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತದೆ. 

ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ತುಲಾ ರಾಶಿ
ಈ ರಾಶಿಯ ಅಧಿಪತಿಯು ಶುಕ್ರ ಗ್ರಹವಾಗಿದೆ. ಈ ರಾಶಿಯವರಿಗೆ ನೀಲಿ ಇಲ್ಲವೇ ಬಿಳಿ ಬಣ್ಣದ ರಾಖಿಯನ್ನು ಕಟ್ಟುವುದರಿಂದ ಒಳ್ಳೆಯದಾಗುತ್ತದೆ.