ಜಿಯೋ ಸಿಮ್'ನಲ್ಲಿ ಎಲ್ಲಾ ಪೋರ್ನ್ ಸೈಟ್ ಬ್ಯಾನ್ !
ಬ್ಯಾನ್ ಬಗ್ಗೆ ಜಿಯೋದ ಅಧಿಕೃತ ವೆಬ್ ಸೈಟ್ ನಲ್ಲಾಗಲಿ ಅಥವಾ ಬೇರೆ ಯಾವ ಸುದ್ದಿ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಕೆಲವರು ಹೇಳುವ ಪ್ರಕಾರ ಒಂದಷ್ಟು ನಿಮಿಷ ಸ್ಥಗಿತವಾಗಿದ್ದರೂ ತಾಂತ್ರಿಕ ಕಾರಣದಿಂದ ಈಗಾಗಿತ್ತು ಎನ್ನಲಾಗಿದೆ.
ಬೆಂಗಳೂರು[ಅ.24]: ಜಿಯೋ ಸಿಮ್ ನಲ್ಲಿ ಪೋರ್ನ್ ಸೈಟ್ ಗಳು ಬ್ಯಾನ್ ಆಗಿದೆಯಾ ? ಈ ರೀತಿಯ ಒಂದು ಸುದ್ದಿ ದೇಶದಾದ್ಯಂತ ಹರುಡುತ್ತಿದೆ.
ಈ ಸುದ್ದಿ ಕೇಳಿ ಕೆಲವರಂತೂ ಗಾಬರಿಯಲ್ಲಿ ತಮಗೆ ಬೇಕಾದ ಪೋರ್ನ್ ಸೈಟ್ ಗಳನ್ನು ಚೆಕ್ ಮಾಡಿದ್ದು ಉಂಟು. ಆದರೆ ವಾಸ್ತವದಲ್ಲಿ ಇದನ್ನು ನಿಷೇಧಿಸಲಾಗಿಲ್ಲ. ಬ್ಯಾನ್ ಬಗ್ಗೆ ಜಿಯೋದ ಅಧಿಕೃತ ವೆಬ್ ಸೈಟ್ ನಲ್ಲಾಗಲಿ ಅಥವಾ ಬೇರೆ ಯಾವ ಸುದ್ದಿ ಮಾಧ್ಯಮಗಳಲ್ಲೂ ವರದಿಯಾಗಿಲ್ಲ.
ಕೆಲವರು ಹೇಳುವ ಪ್ರಕಾರ ಒಂದಷ್ಟು ನಿಮಿಷ ಸ್ಥಗಿತವಾಗಿದ್ದರೂ ತಾಂತ್ರಿಕ ಕಾರಣದಿಂದ ಈಗಾಗಿತ್ತು ಎನ್ನಲಾಗಿದೆ. ಒಂದು ವೇಳೆ ಪೋರ್ನ್ ಸೈಟ್ ಗಳನ್ನು ಬ್ಯಾನ್ ಮಾಡಿದರೂ ಕಂಪನಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚು. ಪೋರ್ನ್ ಗೀಳು ಅಂಟಿಸಿಕೊಂಡಿರುವವರೆಲ್ಲ ಪರ್ಯಾಯವಾಗಿ ಬೇರೆ ಸಿಮ್ ಗಳತ್ತಾ ವಾಲುವುದುಂಟು. ಬೇಡಿಕೆಯೂ ಕುಸಿಯುವ ಸಾಧ್ಯತೆಯೂ ಹೆಚ್ಚಿದೆ. ಆದ ಕಾರಣ ಬ್ಯಾನ್ ಮಾಡುವ ಕೆಲಸಕ್ಕೆ ಸಂಸ್ಥೆಯು ಮುಂದಾಗುವುದಿಲ್ಲ ಎನ್ನುವುದು ವಾಸ್ತವದ ಲೆಕ್ಕಾಚಾರ.