ಅಬ್ಬಬ್ಬಾ..ವಿಶ್ವದ ಅತೀ ಉದ್ದದ ಮೂಗನ್ನು ನೋಡಿದ್ದೀರಾ ?

ಮನುಷ್ಯರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ಆಕಾರ, ರೂಪ ವಿಭಿನ್ನವಾಗಿರುತ್ತದೆ. ಕಣ್ಣು, ಮೂಗು, ತುಟಿ, ಕೈ, ಕಾಲು ಎಲ್ಲವೂ ಬೇರೆ ಬೇರೆ ರೀತಿಯಿರುತ್ತದೆ. ಹಾಗೆಯೇ ಕೆಲವರಿಗೆ ಮೂಗು ಅತಿ ಉದ್ದವಾಗಿರುತ್ತದೆ. ಸದ್ಯ ವಿಶ್ವದಲ್ಲಿಯೇ ಅತೀ ಉದ್ದದ ಮೂಗಿನ್ನು ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿದೆ.

Photo Of Man With Longest Nose Goes Viral, Here Is His Story Vin

ವ್ಯಕ್ತಿಯ ದೇಹ (Body) ಸಾಮಾನ್ಯವಾಗಿ ಸ್ಪಲ್ಪ ಮಟ್ಟಿಗೆ ವ್ಯಕ್ಯಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆದ್ರೆ ಇದು ಹೆಚ್ಚು ವಿಭಿನ್ನವಾಗಿದ್ದಾಗ ಎಲ್ಲೆಡೆ ವೈರಲ್ ಆಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಂಥಾ ವಿಚಿತ್ರವಾದ (Weird) ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಅತಿ ಉದ್ದದ ಮೂಗನ್ನು (Longest nose) ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದ್ದು, ಜನ ಫೋಟೋ ನೋಡಿ ಶಾಕ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮವು ವಿಚಿತ್ರವಾದ ವಿಷಯಗಳ ಭಂಡಾರವಾಗಿದೆ. ಈ ಬಾರಿ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿಯ ಬಗ್ಗೆ ತಿಳಿದು ಬಳಕೆದಾರರು ಬೆರಗಾಗಿದ್ದಾರೆ. ವೈರಲ್‌ ಆಗಿರುವ ಫೋಟೋ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿದೆ.

18ನೇ ಶತಮಾನದಲ್ಲಿ ಜೀವಿಸಿದ್ದ ಬ್ರಿಟಿಷ್‌ ಸರ್ಕಸ್‌ ಸಾಧಕ ಥಾಮಸ್‌ ವಾಡ್‌ಹೌಸ್‌ನ ಮೂಗು ಒಂದಲ್ಲ ಎರಡಲ್ಲ 19 ಸೆಂ.ಮೀ. (7.5 ಇಂಚು) ಉದ್ದವಿತ್ತು. ಈ ಮೂಲಕ ಅವರು ಅತಿ ಉದ್ದದ ಮೂಗು ಹೊಂದಿದ್ದ ವ್ಯಕ್ತಿ ಎಂಬ ದಾಖಲೆಗೆ (Record) ಪಾತ್ರನಾಗಿದ್ದರು. ಆದರೆ ಈಗ ಅವರಿಲ್ಲ. ಹೀಗಾಗಿ ಜೀವಂತ ಇರುವ ವ್ಯಕ್ತಿಗಳ ಪೈಕಿ ಅತಿ ಉದ್ದದ ಮೂಗು ದಾಖಲೆ 3.6 ಇಂಚಿನ ಮೂಗು ಇರುವ ಟರ್ಕಿಯ ಮೆಹ್ಮೆಂಟ್‌ ಝ್ಯುರೆಕ್‌ ಹೊಂದಿದ್ದಾನೆ.

Nose Transplant: ತೋಳಿನಲ್ಲಿ ಮೂಗು ಬೆಳೆಸಿ ಮಹಿಳೆಯ ಮುಖಕ್ಕೆ ಯಶಸ್ವಿ ಕಸಿ

ವಿಶ್ವದ ಅತಿ ಉದ್ದದ ವ್ಯಕ್ತಿ, ಅತೀ ಉದ್ದದ ಉಗುರು ಹೊಂದಿರುವ ವ್ಯಕ್ತಿ, ಅತಿ ಉದ್ದ ಕೂದಲಿನ ವ್ಯಕ್ತಿ ಹೀಗೆ ನಾನಾ ರೀತಿಯ ವ್ಯಕ್ತಿಗಳ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಹಾಗೆಯೇ ವಿಶ್ವದ ಅತಿ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಜಗತ್ತಿನ ಅತಿ ಉದ್ದನೆಯ ಮೂಗಿನ ವ್ಯಕ್ತಿಯ ಫೋಟೋವೊಂದು ಹರಿದಾಡುತ್ತಿದೆ.

ಟರ್ಕಿಯ ಮೆಹ್ಮೆಂಟ್‌ ಝ್ಯುರೆಕ್‌ಗೆ 3.6 ಇಂಚಿನ ಮೂಗು
ಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ವ್ಯಕ್ತಿಯ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಥಾಮಸ್ ವಾಡ್‍ಹೌಸ್ ಅವರ ಮೂಗು 7.5 ಇಂಚು ಉದ್ದವಿರುವುದರ ಬಗ್ಗೆ ಹೇಳಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‍ಸೈಟ್‍ನ ಪೇಜ್‍ನಲ್ಲಿ ಈ ವ್ಯಕ್ತಿಯ ಹೆಸರಿದೆ. ಅಲ್ಲದೇ ಈತನೊಬ್ಬ ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ ಎಂದು ತಿಳಿದುಬಂದಿದೆ. ಹಾಗೆಯೇ ಟರ್ಕಿಯ ಮೆಹ್ಮೆಂಟ್‌ ಝ್ಯುರೆಕ್‌ 3.6 ಇಂಚಿನ ಮೂಗು ಹೊಂದಿದ್ದು ದಾಖಲೆ ಮಾಡುತ್ತಿದ್ದಾರೆ.

ಛೇ..! ಮಹಿಳೆಯ ಮೂಗಿನೊಳಗಿತ್ತು ಭರ್ತಿ 145 ಹುಳ, ಚಿಕಿತ್ಸೆ ನೀಡಿದ ವೈದ್ಯರೇ ದಂಗು !

18 ನೇ ಶತಮಾನದಲ್ಲಿದ್ದ ಥಾಮಸ್ ವಾಡ್‍ಹೌಸ್ ಒಬ್ಬರು ಇಂಗ್ಲಿಷ್ ಸರ್ಕಸ್ ಕಲಾವಿದರಾಗಿದ್ದರು. 7.5 ಇಂಚುಗಳಷ್ಟು (19 ಸೆಂ) ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು. ಹಾಗೆಯೇ ಅದೇ ರೀತಿ ಉದ್ದ ಮೂಗನ್ನು ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗಿದೆ. ಸದ್ಯ ಈ ಫೋಟೋಗೆ ಸುಮಾರು 1.20 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7,200ಕ್ಕೂ ಹೆಚ್ಚು ರೀಟ್ವೀಟ್ ಬಂದಿದೆ.

Latest Videos
Follow Us:
Download App:
  • android
  • ios