ಮೃತ ಆತ್ಮೀಯರೊಂದಿಗೆ ಮಾತನಾಡೋ ವಿಂಡ್ ಫೋನ್ ಬೂತ್!

ಜಪಾನ್‌ನ ಒತ್ಸುಕಿಯಲ್ಲೊಂದು ವಿಂಡ್ ಫೋನ್ ಎಂದು ಕರೆಯುವ ಬೂತ್ ಇದೆ. ಇದನ್ನು ವ್ಯಕ್ತಿಯೊಬ್ಬ ತನ್ನ ಕಳೆದು ಹೋದ ಸಹೋದರನ ನೆನಪಿಗಾಗಿ ಕಟ್ಟಿಸಿದ್ದಾನೆ. ಈ ಫೋನ್ ಬೂತ್ ಹಿಂದೆ ಇರೋ ಕಣ್ಣೀರ ಕತೆ ಕೇಳಿ...

Phone of the Wind Where people talks with lost family

ಈ ಫೋನ್ ಬೂತ್ ಬಗ್ಗೆ ಕೇಳಿದರೆ ನಿಮಗೆ ವಿಚಿತ್ರ ಎನಿಸಬಹುದು. ಈ ಬೂತ್‌ನಲ್ಲಿ ಫೋನ್ ಇದೆ. ಆದ್ರೆ ಕನೆಕ್ಷನ್ ಇಲ್ಲ. ಆದರೂ ನೂರಾರು ಜನರು ಇಲ್ಲಿ ಬಂದು ಫೋನ್ ಮೂಲಕ ಮಾತನಾಡುತ್ತಾರೆ! ಜಪಾನ್‌ನ  ಒತ್ಸುಕಿಯಲ್ಲಿರುವ ಈ ಬೂತಿನಲ್ಲಿ ಜನರು ಮೃತ ಪ್ರಿಯರೊಂದಿಗೆ ಮಾತನಾಡಲು ಬಳಸುತ್ತಾರೆ. 

ಇಲ್ಲಿ ಬರುವ ಜನರು ಫೋನ್ ತೆಗೆದುಕೊಂಡು ಯಾವುದೊ ನಂಬರ್ ಡಯಲ್ ಮಾಡಿ ತಮ್ಮ ದುಃಖ ಹೇಳುತ್ತಾರೆ. ಮನಸಿನಲ್ಲಿ ಇರುವ ಎಲ್ಲಾ ಭಾವನೆಗಳನ್ನೂ ಹೊರ ಹಾಕುತ್ತಾರೆ. ಇದರಿಂದ ಮನಸು ಹಗುರಾಗುತ್ತದೆಯಂತೆ. ಈ ಬೂತಿನ ಫೋನಿಗೆ ವಿಂಡ್ ಫೋನ್ ಎನ್ನುತ್ತಾರೆ. ಇಲ್ಲಿಗೆ ಹೆಚ್ಚಾಗಿ 2011ರಲ್ಲಿ ಉಂಟಾದ ಸುನಾಮಿಯಲ್ಲಿ ಪ್ರಾಣ ಕಳೆದುಕೊಂಡ 20 ಸಾವಿರ ಮಂದಿಯ ಸಂಬಂಧಿಕರೇ ಬರುತ್ತಾರೆ. 

ಭಾರತದ ಈ ಸುಂದರ ತಾಣಗಳೀಗ ದೆವ್ವ ನಗರಿ...!

ಈ ಬೂತ್ ಸ್ಥಾಪಿಸಿದ್ದಾರು?

ಒತ್ಸುಕಿಯ ಇತರು ಸಸಾಕಿ ಎನ್ನುವವರು ಸುನಾಮಿ ಆಗುವ ಒಂದು ವರ್ಷಕ್ಕೆ ಮುಂಚೆ ತಮ್ಮ ಸಹೋದರನ್ನು ಕಳೆದುಕೊಂಡಿದ್ದರು. ತಮ್ಮ ಸಹೋದರನ ನೆನಪಿನಲ್ಲಿ ತಮ್ಮ ತೋಟದಲ್ಲಿ ಅವರು ಈ ಫೋನ್ ಬೂತ್ ಮಾಡಿದರು. ಪ್ರತಿದಿನ ಆ ಫೋನ್ ಬೂತ್ ಬಳಿ ಹೋಗಿ, ತಮ್ಮ ದುಃಖವನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡುತ್ತಿದ್ದರು. ಬೇರೆ ಬೇರೆ ನಂಬರ್‌ಗೆ ಡಯಲ್ ಮಾಡಿ ಮನದ ಮಾತುಗಳನ್ನು ಹೇಳುತ್ತಿದ್ದರು. ಇದು ತಮ್ಮ ಸಹೋದರನಿಗೆ ತಲುಪುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು. 

ಟ್ರಾವೆಲ್‌ ಬ್ಯಾಗ್‌ನಲ್ಲಿ ಇರಲೇ ಬೇಕಾದ 7 ವಸ್ತುಗಳು!

ಸುನಾಮಿ ನಂತರ ಈ ಫೋನ್ ಬೂತ್ ಸಾರ್ವಜನಿಕರದ್ದಾಯಿತು. ಬೇರೆ ಬೇರೆ ಕಡೆಗಳಿಂದ ಜನರು ಇಲ್ಲಿ ಬಂದು ಫೋನ್ ಮೂಲಕ ಮಾತನಾಡಿ ತಮ್ಮ ಮನದ ಮಾತುಗಳನ್ನು ಆಡುತ್ತಿದ್ದರು. ಈ ಫೋನ್ ಸಾರ್ವಜನಿಕಗೊಂಡ ಮೂರು ವರ್ಷದಲ್ಲಿ ಸುಮಾರು ಹತ್ತು ಸಾವಿರ ಜನ ಇಲ್ಲಿ ಭೇಟಿ ನೀಡಿ ಫೋನಿನಲ್ಲಿ ಮಾತನಾಡಿದ್ದಾರೆ.  

ಜಪಾನ್‌ನ ನ್ಯಾಷನಲ್ ಪಬ್ಲಿಕ್ ಬ್ರಾಡ್ ಕಾಸ್ಟಿಂಗ್ ಸೆಂಟರ್ ಇದರ ಮೇಲೆ  'ಫೋನ್ ಆಫ್ ವಿಂಡ್ - ವಿಷ್ಪರ್ ಟು ಲಾಸ್ಟ್ ಫ್ಯಾಮಿಲಿಸ್' ಎಂಬ ಡಾಕ್ಯುಮೆಂಟರಿ ಚಿತ್ರ ತಯಾರಿಸಿದೆ. ಜೊತೆಗೆ ಒಂದು ಪುಸ್ತಕವೂ ಸದ್ಯದಲ್ಲೇ ರಿಲೀಸ್ ಆಗಲಿದೆ. ಅಲ್ಲದೆ ನೊಬುಹೀರೋ ಸುವಾ ಎಂಬುವವರು ಚಿತ್ರವನ್ನು ನಿರ್ದೇಶಿಸಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ. 

Latest Videos
Follow Us:
Download App:
  • android
  • ios