Asianet Suvarna News Asianet Suvarna News

ಬೆಂಗಳೂರಿನಲ್ಲಿ ಸಾಕುಪ್ರಾಣಿಗಳಿಗೆಂದೇ ಇದೆ ವಿಶಿಷ್ಟ ರೆಸಾರ್ಟ್

ಸಾಕುಪ್ರಾಣಿಗಳು ಖುಷಿಯಾಗಿರಬೇಕು, ಚೆನ್ನಾಗಿರಬೇಕು ಅಂತ ಬಯಸಿ ಸಾಕುಪ್ರಾಣಿಗಳಿಗೆಂದೇ ಒಂದು ರೆಸಾರ್ಟ್ ರೂಪಿಸಿದ್ದಾರೆ ಶೇಖರ್ ಗಾಂವ್ಕರ್. ಇವರ ಜೊತೆ ನಿಂತು ರೆಸಾರ್ಟ್ ಕನಸನ್ನು ಪೂರ್ತಿಯಾಗುವಂತೆ ಮಾಡಿದು ನಿಲೇಂದು ಮೈತಿ. ಬೆಂಗಳೂರಿನಲ್ಲಿರುವವರು ಸಾಕುಪ್ರಾಣಿಗಳನ್ನು ಇಲ್ಲಿ ಬಿಟ್ಟುಹೋಗಬಹುದು. ಅಥವಾ ಸಾಕುಪ್ರಾಣಿಗಳ ಜೊತೆಗೆ ಅಲ್ಲಿಗೆ ಹೋಗಿ ಸಂತೋಷದಿಂದ ಕಾಲಕಳೆಯಬಹುದು. ದೇಶದ ಅತಿ ದೊಡ್ಡ ಪೆಟ್ ರೆಸಾರ್ಟ್ ಅನ್ನಿಸಿಕೊಂಡಿರುವ ಪೆಟ್‌ಕಾರ್ಟ್ ನೆಸ್ಟ್‌ನ ಕುತೂಹಲಕರ ಕಥೆ ಇಲ್ಲಿದೆ.

Petcart nest resort for Dogs in Bangalore
Author
Bengaluru, First Published Oct 20, 2018, 11:31 AM IST
  • Facebook
  • Twitter
  • Whatsapp

ಸಾಕುಪ್ರಾಣಿಗಳಿಗೆಂದೇ ಒಂದು ರೆಸಾರ್ಟು ಸ್ಥಾಪಿಸುವುದು ತುಂಬಾ ಅಪರೂಪ. ಅಂಥಾ ಅಪರೂಪದಲ್ಲಿ ಅಪರೂಪದ ಕೆಲಸ ಮಾಡಿರುವುದು ಶೇಖರ್ ಗಾಂವ್ಕರ್. ಅವರು ಭಾರತದಲ್ಲಿಯೇ ಮೊದಲ ಬಾರಿಗೆ ಸಾಕುಪ್ರಾಣಿಗಳಿಗಾಗಿಯೇ ನೂತನ ‘ಪೆಟ್ ಕಾರ್ಟ್’ ರೆಸಾರ್ಟ್ ಸ್ಥಾಪಿಸಿದ್ದಾರೆ. ಸುತ್ತಲೂ ಹಸಿರಿನಿಂದ ಕೂಡಿರುವ ಈ ರೆಸಾರ್ಟ್ ಭಾರಿ ವಿಶಾಲವಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಈ ರೆಸಾರ್ಟ್ ಇದೆ. ಶ್ವಾನಗಳು, ಬೆಕ್ಕುಗಳು ಇಲ್ಲಿ ಆರಾಮಾಗಿ ಕಾಲ ಕಳೆಯಬಹುದು.

ಬೆಂಗಳೂರಿನಲ್ಲಿರುವವರು ದೂರ ಪ್ರಯಾಣ ಬೆಳೆಸುತ್ತಿದ್ದರೆ, ಮನೆಯ ಸದಸ್ಯರಲ್ಲಿ ಒಂದಾಗಿರುವ ಶ್ವಾನವನ್ನು ದೀರ್ಘಾವಧಿಗೆ ಬಿಟ್ಟು ಹೋಗುವ ಸನ್ನೀವೇಶಗಳು ಎದುರಾದರೆ ಆ ಶ್ವಾನವನ್ನು ಪೆಟ್‌ಕಾರ್ಟ್ ರೆಸಾರ್ಟ್‌ನಲ್ಲಿ ನಿಶ್ಚಿಂತೆಯಿಂದ ಬಿಟ್ಟು ಹೋಗಬಹುದು. ಸಾಮಾನ್ಯವಾಗಿ ನಾಯಿಗಳನ್ನು ಕಟ್ಟಿಹಾಕಿಯೋ ಪಕ್ಕದ ಮನೆಯಲ್ಲಿ ಬಿಟ್ಟು ಹೋಗಬೇಕಾಗಿಯೋ ಬರುತ್ತದೆ. ಇಂಥಾ ಹೊತ್ತಲ್ಲಿ ಸಾಕುಪ್ರಾಣಿಗಳು ತೊಂದರೆಯಾಗಬಾರದು ಅನ್ನುವುದೇ ಈ ಪೆಟ್ ರೆಸಾರ್ಟ್ ಸ್ಥಾಪನೆಯ ಹಿಂದಿರುವ ಉದ್ದೇಶ. 

ಇಂಟರೆಸ್ಟಿಂಗ್ ಅಂದ್ರೆ ಸಾಕುಪ್ರಾಣಿಗಳ ಜೊತೆಗೆ ಅವುಗಳ ಪೋಷಕರು ಕೂಡ ಬಂದು ಇಲ್ಲೇ ಒಂದು ದಿನ ಕಳೆಯಬಹುದು. ಇದೊಂದು ವಿನೂತನ ಐಡಿಯಾ ಎಂದೆ ಪರಿಗಣಿಸಲ್ಪಟ್ಟಿದೆ. ಹಾಗಾಗಿ ಶೇಖರ್ ಗಾಂವ್ಕರ್ ಅವರ ಈ ರೆಸಾರ್ಟು ಕಡಿಮೆ ಅವಧಿಯಲ್ಲಿ ಬಹಳ ಜನರನ್ನು ಸೆಳೆಯಿತ್ತಿದೆ.

ಕಾರ್ಪೊರೇಟ್ ಜಗತ್ತಿನಿಂದ ಬಂದವರು: ಕಾರ್ಪೊರೇಟ್ ಜಗತ್ತಿನಲ್ಲಿದ್ದ ಶೇಖರ್ ತಮ್ಮ ಸ್ನೇಹಿತನ ಸಲಹೆಯ ಪ್ರಕಾರ ವಿದೇಶದಲ್ಲಿ ಶ್ವಾನಗಳಿಗಾಗಿ ರೆಸಾರ್ಟ್ ಇರುವಂತೆ ಸುಮಾರು ಎರಡುವರೆ ವರ್ಷಗಳ ಕಾಲ ಅದರ ಸಂಪೂರ್ಣ ಅಧ್ಯಯನ ನಡೆಸಿ ಈ ರೆಸಾರ್ಟ್ ಸ್ಥಾಪಿಸಿದ್ದಾರೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಅದರಲ್ಲೂ ಕೆಲಸಕ್ಕೆ ಹೋಗುವವರಿಗೆ ಶ್ವಾನಗಳ ಆರೈಕೆ ಮಾಡುವುದು ಕಠಿಣ. ಅಲ್ಲದೆ ಎಲ್ಲಾ ರೀತಿಯಲ್ಲೂ ಉತ್ತಮ ಪರಿಸರ ಸಿಗುವುದು ಕಷ್ಟ. ಹಾಗಾಗಿ ವೈದ್ಯರು, ತಜ್ಞರ ಸಲಹೆ ಪಡೆದು ಸತತ ಎರಡು ವರ್ಷಗಳ ಸಂಪೂರ್ಣ ಅಧ್ಯಯನ ನಡೆಸಿ ಪೆಟ್‌ಕಾರ್ಟ್ ರೆಸಾರ್ಟ್ ಅನ್ನು ಇದೇ ಸೆಪ್ಟಂಬರ್ 23ರಂದು ಆರಂಭಿಸಿದರು. ಶೇಖರ್ ಗಾಂವ್ಕರ್ ಜತೆ ಸಹ ಸ್ಥಾಪಕರಾಗಿ ನಿಲೇಂದು ಮೈತಿ ಇದ್ದಾರೆ. ಈ ರೆಸಾರ್ಟ್ ರೂಪಿಸುವಲ್ಲಿ ಅವರದು ಮಹತ್ವದ ಪಾತ್ರ ಇದೆ.

ಏನಿದು ಪೆಟ್ ಕಾರ್ಟ್?: ಸುಮಾರು 2000 ಎಕರೆ ಪ್ರದೇಶದಲ್ಲಿರುವ ರೆಸಾರ್ಟ್ ಪರಿಸರ ಸ್ನೇಹಿ ಪ್ರದೇಶವಾಗಿದೆ. ಶ್ವಾನಗಳಿಗಾಗಿಯೇ ಬಿದಿರಿನಿಂದ ಮಾಡಿರುವ ಮನೆಗಳ ವ್ಯವಸ್ಥೆ, ಸ್ವಿಮ್ಮಿಂಗ್ ಪೂಲ್, ಎರಡು ಆಟದ ಮೈದಾನ, ವಾಕಿಂಗ್ ಪಾತ್ ಮುಂತಾದ ವ್ಯವಸ್ಥೆಯನ್ನು ಈ ರೆಸಾರ್ಟ್ನಲ್ಲಿ ಕಾಣಬಹುದು. 

ಸೌಲಭ್ಯ ಹೀಗಿದೆ!: ಬಿದಿರಿನಿಂದ ಮಾಡಿದ 70ಮನೆಗಳಿದ್ದು, ಪ್ರತಿ ನಾಯಿಗೂ ಪ್ರತ್ಯೇಕ ವ್ಯವಸ್ಥೆ ಇಲ್ಲಿದೆ. ಪ್ರತಿ ಕೊಠಡಿಯೂ 60ಚದರಡಿ ಇದ್ದು, 18ಅಡಿ ಎತ್ತರದಲ್ಲಿ ಈ ಕೊಠಡಿ ಇದೆ. ಇದರೊಂದಿಗೆ, ಎರಡು ಆಟದ ಮೈದಾನಗಳೂ ಇವೆ. ಈ ರೆಸಾರ್ಟ್‌ನಲ್ಲಿ ಗಂಡು ಹಾಗೂ ಹೆಣ್ಣು ನಾಯಿಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಶ್ವಾನಗಳಿಗಾಗಿ 1800ಚದುರ ಅಡಿಯಲ್ಲಿ ಸ್ವಿಮ್ಮಿಂಗ್‌ಪೂಲ್‌ವ್ಯವಸ್ಥೆಯನ್ನೂ ಮಾಡಲಾಗಿದೆ. ಅಲ್ಲದೆ ಟೈರ್ ಜಂಪ್, ಚೆಂಡಾಟ ಸೇರಿದಂತೆ ಅವುಗಳಿಗೆ ಆಟ ಆಡಿಸಲಾಗುತ್ತದೆ. ಅವುಗಳ ಊಟ, ಉಪಚಾರ, ಸ್ನಾನ ಸೌಲಭ್ಯವನ್ನೂ ಮಾಡಲಾಗಿದೆ. ಅದಕ್ಕಾಗಿಯೇ ಸಿಬ್ಬಂದಿಗಳಿದ್ದಾರೆ. ನಾಯಿಗಳು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪಶು ವೈದ್ಯರೂ ಇದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ. 8861712345

Follow Us:
Download App:
  • android
  • ios