ಪೇಜಾವರ ಶ್ರೀಗಳ ಲವಲವಿಕೆಯ ಗುಟ್ಟೇನು ಗೊತ್ತಾ?

Pejavara Shri Yoga Practice
Highlights

ಪ್ರತಿದಿನ ಬೆಳಿಗ್ಗೆ 4  ಗಂಟೆಗೆ ಎದ್ದು ವಿದ್ಯಾರ್ಥಿಗಳಿಗೆ ಪಾಠ, ಜಪ, ಪೂಜೆ, ನಂತರ ರಾತ್ರಿಯವರೆಗೂ ನಾಲ್ಕೈದು ಕಾರ್ಯಕ್ರಮಗಳು, ನಡುವೆ ನೂರಾರು ಭಕ್ತರ ಭೇಟಿ, ಮಾತುಕತೆ, ಆಶೀರ್ವಚನ, ಸಂಜೆ ಪ್ರವಚನ, ರಾತ್ರಿ ಮಲಗುವಾಗ 10 ಗಂಟೆ, ಇವತ್ತು ಇಲ್ಲಿ ಮೊಕ್ಕಾಂ ಇದ್ದರೆ, ನಾಳೆ ನೂರಾರು ಮೈಲಿ ದೂರದಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಭಾಗಿ, ಹತ್ತಾರು ಶಿಕ್ಷಣ ಸಂಸ್ಥೆ, ಗುರುಕುಲ, ವಿದ್ಯಾಪೀಠಗಳ ನಿರ್ವಹಣೆ - ಇದು ಉಡುಪಿಯ ಪೇಜಾವರ ಶ್ರೀಗಳ ನಿತ್ಯದಿನಚರಿ.  

88 ರ ಈ ಹರೆಯದಲ್ಲೂ ಅವರು ಇಂದಿಗೂ ಇದನ್ನೆಲ್ಲಾ ಅದೇ ಲವಲವಿಕೆಯಿಂದ ಮಾಡುತ್ತಿದ್ದಾರೆ. ಇದರ ಹಿಂದಿರುವ ಗುಟ್ಟು ಯೋಗ. ಕಳೆದ 40 ವರ್ಷಗಳಿಂದ ಅವರ ನಿತ್ಯ ತಪ್ಪದೇ ಮಾಡುವ ಅನುಷ್ಠಾನಗಳಲ್ಲಿ ಯೋಗವೂ ಒಂದು. ಅವರು ಉಡುಪಿಯ ಮಠದಲ್ಲಿರಲಿ, ಬೆಂಗಳೂರು ವಿದ್ಯಾಪೀಠದಲ್ಲಿರಲಿ, ಮಲೆನಾಡಿನ ನಕ್ಸಲ್ ಪೀಡಿತ ಗ್ರಾಮದಲ್ಲಿಯೇ ಇರಲಿ, ಅಥವಾ ಹರಿದ್ವಾರ ಅಥವಾ ಹಿಮಾಲಯದ ಯಾವುದೋ ಪುಣ್ಯಕ್ಷೇತ್ರದಲ್ಲಿಯೇ ಇರಲಿ, ಯೋಗವನ್ನು ಮಾತ್ರ ಒಂದು ದಿನವೂ ಬಿಟ್ಟದ್ದಿಲ್ಲ. ಯೋಗದಿಂದ ದೇಹವನ್ನು ಮಿತವಾಗಿ ದಂಡಿಸಿ, ಅತ್ಯಂತ ಮಿತಿಯಲ್ಲಿ ಆಹಾರವನ್ನು ಸೇವಿಸಿ, ದೇಹ ಕೃಷವಾಗಿದ್ದರೂ, ಆರೋಗ್ಯವನ್ನು ಕಾಪಾಡಿಕೊಂಡಿರುವ ಪೇಜಾವರ ಶ್ರೀಗಳು ನಿಜಾರ್ಥದಲ್ಲಿ ಯೋಗಿ.

ಶ್ರೀಗಳದ್ದು ಸರಳ ಯೋಗ:

ಸಾರ್ವಜನಿಕವಾಗಿ ಯೋಗ ಮಾಡುವುದಕ್ಕೆ ಮುಜುಗರ ಪಡುವ ಶ್ರೀಗಳು, ತಮ್ಮ ಕೋಣೆಯಲ್ಲಿ ಸುಮಾರು 15 ನಿಮಿಷ ಕಾಲ ತಮ್ಮದೇ ಆದ ಸರಳ ಯೋಗಾಸನಗಳನ್ನು ಮಾಡುತ್ತಾರೆ. ಅವರಿಗೆ ಯೋಗ ಎಂದರೆ ಕಸರತ್ತು ಅಲ್ಲ. ತಮ್ಮ ವಯಸ್ಸಿಗೆ ತಕ್ಕಂತೆ ಮುಖ್ಯವಾಗಿ ಕಾಲು, ಬೆನ್ನು ಮತ್ತು ಕೈಗಳಿಗೆ ವ್ಯಾಯಾಮ ಆಗುವಂತಹ ಆಸನಗಳನ್ನು ಮಾಡುತ್ತಾರೆ. ಜೊತೆಗೆ ಜಪ, ಧ್ಯಾನ, ಪ್ರಾಣಾಯಾಮಗಳನ್ನೂ ಮಾಡುತ್ತಾರೆ. ನೆಮ್ಮದಿಯ  ಜೀವನಕ್ಕೆ ದೇಹಶಕ್ತಿ ಮತ್ತು ಮನಃ ಶಕ್ತಿ ಕೂಡ ಬೇಕಾಗುತ್ತದೆ. ಅದು ಯೋಗದಿಂದ ಲಭಿಸುತ್ತದೆ ಎನ್ನುತ್ತಾರೆ ಶ್ರೀಗಳು. 

loader