ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನು ತಂದೆ, ತಾಯಿ ಇಬ್ಬರೂ ರೈಲ್ವೇ ಸ್ಟೇಷನ್'ನ ಪ್ಲಾಟ್'ಪಾರ್ಮ್'ನಲ್ಲಿ ಬಿಟ್ಟು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಸ್ಟೇಷನ್'ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಈ ದುಷ್ಕೃತ್ಯ ಬಯಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಹೆತ್ತವರ ಈ ಕೆಟ್ಟ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮುಂಬೈ(ಡಿ.16): ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನು ತಂದೆ, ತಾಯಿ ಇಬ್ಬರೂ ರೈಲ್ವೇ ಸ್ಟೇಷನ್'ನ ಪ್ಲಾಟ್'ಪಾರ್ಮ್'ನಲ್ಲಿ ಬಿಟ್ಟು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಸ್ಟೇಷನ್'ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಈ ದುಷ್ಕೃತ್ಯ ಬಯಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಹೆತ್ತವರ ಈ ಕೆಟ್ಟ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿಗಳಾದ ಹಿಂದೆ ಗೋರಖ್ ಯಾದವ್ ಹಾಗೂ ಸುಭದ್ರಾ ಯಾದವ್ ಇಬ್ಬರೂ ಪರಸ್ಪರ ಪ್ರೀತಿಸಿ ಕಳೆದ 3 ವರ್ಷಗಳಹಿಂದೆ ವಿವಾಹವಾಗಿದ್ದರು. ಆದರೆ ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಬ್ಬರೂ ಓಡಿ ಹೋಗಿ ಹೋಗಿದ್ದರು. ಬಳಿಕ ಇವರಿಬ್ಬರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮದುವೆಯಾದ ಬಳಿಕ ಹುಟ್ಟಿದ ಪುಟ್ಟ ಕಂದಮ್ಮನನ್ನು ಕಳೆದ ನವೆಂಬರ್ 28 ಮುಂಬೈನ ಖಡ್ವಲೀ ರೈಲ್ವೇ ಸ್ಟೇಷನ್'ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ವೀಕ್ಷಕರು ಹೆತ್ತವರ ಈ ವರ್ತನೆಯನ್ನು ಖಂಡಿಸಿದ್ದಾರೆ.