Asianet Suvarna News Asianet Suvarna News

Palm Oil: ಕೂದಲು, ಚರ್ಮದ ಸಮಸ್ಯೆಗೆ ಬೆಸ್ಟ್ ಮೆಡಿಸಿನ್!

ಹೆಣ್ಣು ಮಕ್ಕಳಿಗೆ ತ್ವಚೆ (Skin) ಹಾಗೂ ಕೂದಲು (Hair) ಬಗ್ಗೆ ಎಷ್ಟು ಕಾಂಶಿಯಸ್(Conscious) ಆಗಿ ಇರ್ತಾರೆಂದರೆ ಮಾರುಕಟ್ಟೆಯಲ್ಲಿ(Market) ಸಿಗುವ ಎಲ್ಲಾ ಪ್ರಾಡಕ್ಟಗಳನ್ನೂ(Product) ಟ್ರೆöÊ ಮಾಡಿರುತ್ತಾರೆ. ಆದರೂ ಕೂದಲು ಉದುರುವುದು(Hair Fall), ದಟ್ಟಣೆ(Density), ಸ್ಪಿಲಿಟ್ಸ್(Splits) ಸಮಸ್ಯೆಗಳು ಕಾಣಿಸುವುದು ಮಾತ್ರ ತಪ್ಪುವುದಿಲ್ಲ. ತಾಳೆ ಎಣ್ಣೆ(Palm Oil) ಬಳಸುವುದರಿಂದ ಕೂದಲು ಹಾಗೂ ಚರ್ಮಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

Palm Oil Is the best solution for Hair & Skin
Author
Bangalore, First Published Jun 15, 2022, 5:48 PM IST

ಹೆಣ್ಣು ಮಕ್ಕಳಿಗೆ ತ್ವಚೆ(Skin) ಹಾಗೂ ಕೂದಲು(Hair) ಬಗ್ಗೆ ಎಷ್ಟು ಕಾಂಶಿಯಸ್(Conscious) ಆಗಿ ಇರ್ತಾರೆಂದರೆ ಮಾರುಕಟ್ಟೆಯಲ್ಲಿ(Market) ಸಿಗುವ ಎಲ್ಲಾ ಪ್ರಾಡಕ್ಟಗಳನ್ನೂ(Product) ಟ್ರೆöÊ ಮಾಡಿರುತ್ತಾರೆ. ಆದರೂ ಕೂದಲು ಉದುರುವುದು(Hair Fall), ದಟ್ಟಣೆ(Density), ಸ್ಪಿಲಿಟ್ಸ್ ಸಮಸ್ಯೆಗಳು ಕಾಣಿಸುವುದು ಮಾತ್ರ ತಪ್ಪುವುದಿಲ್ಲ. ಮನೆಯಲ್ಲೇ ಕೆಲವು ಔಷಧಿಗಳನ್ನು(Medicine) ಮಾಡಿದರೂ ರಿಸಲ್ಟ್ ಮಾತ್ರ ಸಿಗುವುದೇ ಇಲ್ಲ ಎನ್ನುವವರಿಗೆ ಇಲ್ಲೊಂದು ಆಯಿಲ್(Oil) ಇದೆ. ಅದನ್ನು ಡೈರೆಕ್ಟ್ ಆಗಿ ಕೂದಲು ಹಾಗೂ ಚರ್ಮಕ್ಕೆ ಬಳಸಿದರೆ ಆಶ್ಚರ್ಯ ಪಡುವಂತಹ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ.

ತಾಳೆ ಎಣ್ಣೆ(Palm Oil) ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಈಗಂತು ಮಾರ್ಕೆಟನಲ್ಲಿ ಸಿಗುವ ಎಷ್ಟೋ ಕಾಸ್ಮೆಟಿಕ್ಸಗಳಲ್ಲಿ(Cosmetic) ತಾಳೆ ಎಣ್ಣೆಯನ್ನು ಬಳಸಿರುತ್ತಾರೆ. ಈ ಎಣ್ಣೆ ಬಳಸುವುದರಿಂದ ಕೂದಲು ಹಾಗೂ ಚರ್ಮಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

ನೈಸರ್ಗಿಕವಾಗಿ(Naturally) ಸಿಗುವ ಎಷ್ಟೋ ವಸ್ತುಗಳು ನಮ್ಮ ಆರೋಗ್ಯದ(Health) ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಲೋವೆರ(Alovera), ಮೆಹೆಂದಿ ಸೊಪ್ಪು, ಕರಿಬೇವಿನ ಎಲೆ(Curry Leaves), ಹರಳೆಣ್ಣೆ ಹೀಗೆ(Castrol Oil) ಎಲ್ಲವೂ ನಮ್ಮ ಚರ್ಮ(Skin) ಹಾಗೂ ಕೂದಲಿಗೆ ಒಳ್ಳೆಯ ಮೆಡಿಸಿನ್ ಎಂದು ಹಿರಿಯರು(Elders) ಹೇಳುತ್ತಾರೆ. ಸೀಗೆಕಾಯಿಯನ್ನು ಬಳಸಿದರೆ ಕೂದಲು ಹಾಗೂ ಚರ್ಮ ಎರಡೂ ಆರೋಗ್ಯಕರವಾಗಿ ಹಾಗೂ ಕಾಂತಿಯುಕ್ತವಾಗಿ ಇರುವಂತೆ ನೋಡಿಕೊಳ್ಳುತ್ತದೆ ಎನ್ನುತ್ತಾರೆ. ಅದನ್ನು ಬಳಸಿರುವವರೂ ಇದ್ದಾರೆ. ಇದೇ ಸಾಲಿನಲ್ಲಿ ಈಗ ತಾಳೆ ಎಣ್ಣೆಯೂ ಫೇಮಸ್ ಆಗ್ತಿದೆ. ಇದರಿಂದ ಹಲವು ಪ್ರಯೋಜನಗಳಿವೆ ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.

ಅಮೆರಿಕಾದಲ್ಲಿ ಈಗ ಒಂದು ಹೇರ್ ಸ್ಟೈಲ್‌ ರೇಟ್ ಎಷ್ಟಿರಬಹುದು ಗೊತ್ತಾ?

1. ಹಿಂದಿನ ಕಾಲದಲ್ಲೆಲ್ಲಾ ತಲೆಗೆ ಎಣ್ಣೆ ಹಚ್ಚಿ, ಜಡೆ ಹಾಕಿ ಮಡಚಿ ಕಟ್ಟುತ್ತಿದ್ದರು. ಆಗೆಲ್ಲ ಕೂದಲು ದಪ್ಪ(Thick) ಹಾಗೂ ಉದ್ದವಾಗಿ(Lengthy) ಇರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಕೂದಲಿಗೆ ಎಣ್ಣೆ ಹಾಕುವುದಿರಲಿ ಅದನ್ನು ಕಟ್ಟುವುದೂ ಇಲ್ಲ. ಗಾಳಿಗೆ ಹಾರಿಬಿಡುವುದರಿಂದ ಕೂದಲು ಹಾಳಾಗುತ್ತದೆ. ತಾಳೆ ಎಣ್ಣೆಯಲ್ಲಿ ಆಯಂಟಿ ಬ್ಯಾಕ್ಟೀರಿಯಾ(Anti Bacteria) ಹಾಗೂ ಆಂಟಿ ಫಂಗಲ್(Anti Fungus) ಅಂಶವು ಇರುವುದರಿಂದ ತಲೆಯ ಬುರುಡೆ(Scul) ಡ್ರೆöÊ(Dry) ಆಗದಿರುವಂತೆ ನೋಡಿಕೊಳ್ಳುತ್ತದೆ.

2. ಬೇಸಿಗೆಯಲ್ಲಿ(Summer) ತಾಳೆ ಎಣ್ಣೆ ಬಳಸುವುದರಿಂದ ಸೂರ್ಯನ(Sun) ಹಾನಿಕಾರಕ ಕಿರಣಗಳಿಂದ(Rays) ಚರ್ಮಕ್ಕೆ ಉಂಟಾಗುವ ಸಮಸ್ಯೆಗಳು ದೂರವಾಗುತ್ತದೆ. ಏಕೆಂದರೆ ಇದರಲ್ಲಿ ಆಂಟಿ ಆಕ್ಸಿಡೆಂಟ್(Anti Oxident), ವಿಟಮಿನ್ ಇ(Vitamin E) ಇದ್ದು, ಟ್ಯಾನ್(Tan), ಸನ್‌ಬರ್ನ(Sunburn), ಸೂರ್ಯನ ಅಪಾಯಕಾರಿ ಕಿರಣಗಳಿಂದ(Sun UV Rays) ರಕ್ಷಿಸುತ್ತದೆ.

3. ಪ್ರತೀ ದಿನ ತಾಳೆ ಎಣ್ಣೆಯನ್ನು ಮೈ ಕೈಗೆ ಹಚ್ಚುವುದರಿಂದ ವಯಸ್ಸಾದ ನಂತರ ಕಾಣಿಸಿಕೊಳ್ಳುವ ಚರ್ಮದ ಸುಕ್ಕಿನ ಸಮಸ್ಯೆಗಳು(Wrinkle), ಫೈನ್ ಲೈನ್ಸಗಳು(Fine Lines) ದೂರವಾಗುತ್ತವೆ. 

4. ಬೇಸಿಗೆಯಲ್ಲಿ ಎಷ್ಟೇ ಸನ್‌ಸ್ಕಿçÃನ್(Sunscreen) ಹಚ್ಚಿದರೂ ಚರ್ಮ ಒಣಗಿಹೋಗುತ್ತದೆ(Dry Skin). ತಾಳೆ ಎಣ್ಣೆ ಹಚ್ಚುವುದರಿಂದ ಇದರಲ್ಲಿನ ವಿಟಮಿನ್ ಇ, ಎ ಮತ್ತು ಕೆ(Vitamin E, A, K) ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಚರ್ಮಕ್ಕೆ ನ್ಯೂಟ್ರೀಶಿಯಸ್(Nutritious) ಒದಗಿಸುವುದರ ಜೊತೆಗೆ ರಕ್ತ ಸಂಚಾರ(Blood Circulation), ಚರ್ಮ ಒಣಗುವುದನ್ನು ಕಡಿಮೆ ಮಾಡುವುದು ಹಾಗೂ ತ್ವಚೆಯು ನೈಸರ್ಗಿಕವಾಗಿ ಹೊಳೆಯುವಂತೆ(Natural Skin Glow) ಮಾಡುತ್ತದೆ.

5. ತಾಳೆ ಎಣ್ಣೆಯಲ್ಲಿ ಬಿಟಾ ಕೆರೋಟಿನ್(Beta Carotene) ಅಂಶವಿದೆ. ಹಾಗಾಗಿ ಕುದಲು ಸ್ಪಿಟ್ಸ್(Splits) ಆಗುವುದನ್ನು ತಡೆಯುತ್ತದೆ. ಜೊತೆಗೆ ವಿಟಮಿನ್ ಕೆ ಮತ್ತು ಇ(Vitamin K, E) ಅಂಶವನ್ನು ಕೂದಲಿಗೆ ಒದಗಿಸಿ ಬೆಳೆಯುವಂತೆ ಮಾಡುತ್ತದೆ.

ಕ್ಯಾಕ್ಟಸ್ ಆಯಿಲ್ ಕೂದಲ ಬೆಳವಣಿಗೆಯಲ್ಲಿ ಹೇಗೆ ಸಹಾಯ ಮಾಡತ್ತೆ?

ತ್ವಚೆಗೆ ಹೀಗೆ ಹಚ್ಚಿ
ಹಲವು ಕಾರಣಕ್ಕೆ ಅಲ್ಲಲ್ಲಿ ಡಾರ್ಕ್ ಪ್ಯಾಚಸ್(Dark Patch),  ಹೈಪರ್ ಪಿಗ್ಮೆಂಟೇಶನ್(Hyperpigmentation) ಮತ್ತು ಚರ್ಮದ ಮೇಲೆ ಕಪ್ಪು ಬಣ್ಣ(Dark Color) ಇರುವವರು ಈ ತಾಳೆ ಎಣ್ಣೆಯ ಮಾಸ್ಕ್(Mask) ಹಚ್ಚಬೇಕು. ಎರಡು ಚಮಚ ಪುಡಿ ಮಣ್ಣು(Clay Powder), ಎರಡು ಚಮಚ ತಾಳೆ ಎಣ್ಣೆ ಹಾಗೂ ಒಂದು ಮೊಟ್ಟೆ(Egg) ಹಾಕಿ ಚೆನ್ನಾಗಿ ಕಲಸಿ ಮಾಸ್ಕ್ ತಯಾರಿಸಿಕೊಳ್ಳಿ. ಮುಖವನ್ನು ಚೆನ್ನಾಗಿ ತೊಳೆದು ಈ ಮಾಸ್ಕ್ ಹಚ್ಚಿ 15 ರಿಂದ 20ನಿಮಿಷಗಳ(Second) ಕಾಲ ಒಣಗಲು ಬಿಡಬೇಕು. ನಂತರ ನೀರಿನಲ್ಲಿ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಹೊಳೆಯುವ ತ್ವಚೆ(Lightening Skin) ನಿಮ್ಮದಾಗಬಹುದು.

ಕೂದಲಿಗೆ ತಾಳೆ ಎಣ್ಣೆ ಬಳಕೆ ಹೀಗಿರಲಿ
ಮೊದಲು ತಲೆಯನ್ನು ಚೆನ್ನಾಗಿ ತೊಳೆಯಬೇಕು. ತಲೆ ಇನ್ನೂ ತೇವ ಇರುವಾಗಲೆ ತಾಳೆ ಎಣ್ಣೆಯನ್ನು ಹಚ್ಚಬೇಕು. ಕೂದಲು ಒಣಗುವುದು(Dry Hair), ಕಿರಿಕಿರಿ(Irritating), ಕೂದಲು ಉದುರುವುದನ್ನು(Hair Fall) ತಡೆಗಟ್ಟಲು ಸಹಾಯವಾಗುತ್ತದೆ.

 

Palm Oil Is the best solution for Hair & Skin

 

Follow Us:
Download App:
  • android
  • ios