ಎಮ್ಮಿ ಎನಿಸೋ ಹಾಲ್ಕೋವಾ ಮಾಡೋದು ಹೀಗೆ....

Palkova recipe | How to make palkova milk sweet
Highlights

ಹಾಲಿನಿಂದ ಮಾಡೋ ಸಿಹಿ ಸರ್ವಕಾಲಕ್ಕೂ ಸಮ್ಮತ. ಅದರಲ್ಲಿ ಹಾಲ್ಕೋವಾ ಸಹ ಒಂದು. ಬಹುತೇಕ ದೂಧ್‌ಪೇಡಾ ಎನಿಸುವಂಥ ಈ ಸಿಹಿಯನ್ನು ಹಾಲು, ಸಕ್ಕರೆ ಇದ್ದರೆ ಸಾಕು, ದಿಢೀರ್‌ ಆಗಿಯೂ ತಯಾರಿಸಬಹುದು. ಹೇಗೆ?

 

ಹಾಲ್ಕೋವಾ ಸರ್ವಕಾಲಕ್ಕೂ, ಸರ್ವ ಸಂದರ್ಭಕ್ಕೂ ಸೂಟ್ ಆಗೋ ಸ್ವೀಟ್. ಮನೆಯಲ್ಲಿ ಮಾಡಿದರಂತೂ ಇದರ ರುಚಿ ಹೆಚ್ಚು. ಸುಲಭವಾಗಿ ಮಾಡೋ, ಈ ರಿಚ್ ಸ್ವೀಟ್ ಮಾಡೋ ರೆಸಿಪಿ ಇಲ್ಲಿದೆ......

ಬೇಕಾಗುವ ಸಾಮಾಗ್ರಿ :

  • 5 ಲೀ. ಹಾಲು 
  • 1/2 ಕೆ.ಜಿ. ಸಕ್ಕರೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ, 20-30 ನಿಮಿಷಗಳ ನಂತರ ತುಸು ಗಟ್ಟಿಯಾಗುತ್ತದೆ. ಅದನ್ನು ಬಿಡದೇ, ಸೌಟಿನಲ್ಲಿ ಕೈಯಾಡಿಸುತ್ತಿರಿ. ಮತ್ತಷ್ಟು ಗಟ್ಟಿಯಾಗುತ್ತಿದ್ದಂತೆ, ಸಕ್ಕರೆ ಸೇರಿಸಿ. ಸಕ್ಕರೆ ಸೇರಿಸುತ್ತಿದ್ದಂತೆ, ಮತ್ತೆ ಹಾಲು ನೀರಾಗುತ್ತದೆ. ಅದು ಪುನಾ ಗಟ್ಟಿಯಾಗುವಷ್ಟು ಹೊತ್ತು ಒಲೆ ಮೇಲಿರಲಿ. ಸುಮಾರು 50 ನಿಮಿಗಳಲ್ಲಿ ಈ ಸಿಹಿ ಸಿದ್ಧವಾಗುತ್ತದೆ. 

ನೆನಪಿನಲ್ಲಿಡಿ: ಅಪ್ಪಿತಪ್ಪಿಯೂ ಸ್ಟೌ ದೊಡ್ಡ ಉರಿಯಲ್ಲಿರಬಾರದು. ಮಂದ ಉರಿಯಲ್ಲಿಯೇ ಈ ಸ್ವೀಟನ್ನು ತಯಾರಿಸಬೇಕು.

loader