ಹಿಂಗೂ ಆಗುತ್ತೆ: ವಿಮಾನದಲ್ಲೊಂದು ಕ್ಯೂಟ್ ಲವ್ ಸ್ಟೋರಿ!

one small decision on a flight might have created the greatest love story of our time
Highlights

ವಿಮಾನದಲ್ಲಿ ಹೀಗೊಂದು ಲವ್ ಸ್ಟೋರಿ

ಪಕ್ಕ ಬಂದು ಕುಳಿತವ ಜೀವನ ಸಂಗಾತಿ

ಒಂದು ಸಣ್ಣ ವಿಶ್ ನಿಜವಾಗಿದ್ದು ಹೇಗೆ? 

ಬೆಂಗಳೂರು(ಜು.4): ಹೃದಯಕ್ಕೂ, ಮೆದುಳಿಗೂ ಆಗಿ ಬರೋಲ್ಲ. ಹೃದಯ ಹೇಳೊದನ್ನು ಮೆದುಳು ಎಂದು ತಾನೇ ಕೇಳಿದೆ ಹೇಳಿ?. ಆದರೆ ಹೃದಯದ ಪಿಸು ಮಾತು ಮೆದುಳಿನ ನೂರಾರು ಆಲೋಚನೆಗಳಿಗಿಂತ ಸುಂದರವಾಗಿರುತ್ತದೆ. ಹೃದಯದ ಮಾತನ್ನ ಕೇಳಿದವನೇ ಗೆದ್ದಂತೆ. ಆದರೆ ಹೃದಯ ಮತ್ತು ಮೆದುಳು ಬಹಳ ಅಪರೂಪಕ್ಕೊಮ್ಮೆ ಪರಸ್ಪರ ಬೆರೆಯುತ್ತವೆ. ಆವಾಗಲೇ ಜೀವನದಲ್ಲಿ ಚಮತ್ಕಾರ ಎಂಬುದು ನಡೆಯುವುದು.

ವಿಮಾನವೊಂದರಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆ ಪ್ರಯಾಣಿಸುತ್ತಿದ್ದ ರೋಸಿ ಬ್ಲೇರ್ ಎಂಬ ಮಹಿಳೆ, ತನಗೂ ಮತ್ತು ತನ್ನ ಬಾಯ್‌ಫ್ರೆಂಡ್ ಗೂ ಅಕ್ಕಪಕ್ಕ ಸೀಟ್ ಸಿಗದೇ ಪೇಚಾಡಿದ್ದಾಳೆ. ಆಗ ಪಕ್ಕದಲ್ಲಿದ್ದ ಯುವತಿಗೆ ಸೀಟು ಬದಲಾಯಿಸುವಂತೆ ಮನವಿ ಮಾಡಿದ್ದಾಳೆ. ಇದಕ್ಕೆ ಸ್ಪಂದಿಸಿದ ಆಕೆ ತನ್ನ ಸೀಟನ್ನು ರೋಸಿಯ ಬಾಯ್‌ಫ್ರೆಂಡ್ ಗೆ ಬಿಟ್ಟು ಕೊಟ್ಟಿದ್ದಾಳೆ.

ಇಷ್ಟೇ ಆಗಿದ್ದರೆ ಇದರಲ್ಲಿ ಏನು ವಿಶೇಷತೆ ಇರಲಿಲ್ಲ. ತನಗಾಗಿ ಸೀಟು ಬಿಟ್ಟು ಕೊಟ್ಟ ಆ ಯುವತಿಗಾಗಿ ರೋಸಿ ವಿಶೇಷ ವಿಶ್‌ವೊಂದನ್ನು ಮಾಡಿದ್ದಾಳೆ. ‘ನೀನು ನನ್ನ ಬಾಯ್‌ಫ್ರೆಂಡ್ ಗಾಗಿ ಸೀಟು ಬಿಟ್ಟು ಕೊಟ್ಟಿದ್ದೀಯ. ಅದರಂತೆ ನಿನಗೆ ನಿನ್ನ ಪಕ್ಕದ ಸೀಟ್‌ನಲ್ಲಿ ಕೂರುವವನೇ ಗಂಡನಾಗಲಿ’ ಎಂದು ರೋಸಿ ವಿಶ್ ಮಾಡಿದ್ದಾಳೆ.

ರೋಸಿ ವಿಶ್‌ನ್ನು ತುಂಬ ಹಗುರವಾಗಿ ಪರಿಗಣಿಸಿದ ಆ ಯುವತಿ ಮುಗುಳ್ನಕ್ಕು ಮುಂದಿನ ಸೀಟ್ ನಲ್ಲಿ ಹೋಗಿ ಕುಳಿತಿದ್ದಾಳೆ. ಅಷ್ಟೇ ನೋಡಿ, ರೋಸಿ ವಿಶ್‌ನಂತೆ ಯುವತಿ ಪಕ್ಕದ ಸೀಟ್ ನಲ್ಲಿ ಬಂದ ಯುವಕನೇ ಆಕೆಯ ಜೀವನ ಸಂಗಾತಿಯಾಗಿದ್ದಾನೆ. ಹೌದು, ತನ್ನ ಪಕ್ಕ ಬಂದು ಕುಳಿತ ಯುವಕನ ಜೊತೆ ಆ ಯುವತಿಗೆ ಪರಿಚಯವಾಗಿದೆ. ಅದೃಷ್ಟ ಎಂದರೆ ಇಬ್ಬರೂ ಜಿಮ್ ಟ್ರೇನರ್ ಆಗಿದ್ದು, ಮಾತು ತಮ್ಮ ಪ್ರೋಫೆಶನ್‌ನಿಂದ ಪ್ರಾರಂಭವಾಗಿ ಪಸರ್ನಲ್ ವಿಷಯಕ್ಕೆ ಬಂದು ನಿಂತಿದೆ.

ವಿಮಾನದಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೇಮವಾಗಿ ಬದಲಾಗಿ, ಇದೀಗ ಅದೇ ಯುವತಿ ಮತ್ತು ಯುವಕ ಶಾಶ್ವತವಾಗಿ ಜೀವನ ಸಂಗಾತಿಗಳಾಗಿದ್ದಾರೆ. ಈ ವಿಷಯವನ್ನು ಖುದ್ದು ರೋಸಿ ಹಂಚಿಕೊಂಡಿದ್ದು, ತಮಾಷೆಗೆಂದು ಮಾಡಿದ ವಿಶ್ ನಿಜವಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

loader