ತನಗೆ ಯಾವುದೇ ರೀತಿಯ ವಂಚನೇ ಮಾಡಿಕೊಳ್ಳದೇ ಇತರರರಿಗೂ ಹಾನಿಯೆಸಗದೇ ತನ್ನ ಹಸಿವಿಗೆ ಯಾವುದೇ ಸಂಕೋಚವಿಲ್ಲದೇ ಕೈಚಾಚಿ ಇನ್ನೊಬ್ಬರ ಹಸಿವಿಗೆ ಧಾರಾಳವಾಗಿ ದಾನ ಮಾಡುತ್ತಾ, ಒಳ್ಳೆಯವರು, ಕೆಟ್ಟವರು ಎನ್ನದೇ ಎಲ್ಲರನ್ನೂ ಸಮ ವಾಗಿ ಸೇರುತ್ತಾ, ನೋಡುತ್ತಾ, ಖಳನ ಮನೆಯಾಗಲಿ ಸಂಯಮಿಯ ಮನೆಯಾಗಲೀ ಆದಿಭಿಕ್ಷು ಶಿವನಿಗೆ ಭೇದವೆಲ್ಲಿ ಅಂದಹಾಗೆ ಎಲ್ಲರೊಳಗೊಂದಾಗಿ ಎಲ್ಲ ರಿಗೂ ಬೇಕಾದವರಿಗೆ ಎಲ್ಲೆಲ್ಲೂ ಆನಂದ.

ಮೊದಲು ನಾವು ಒಳ್ಳೆಯವರ ಮತ್ತು ಕೆಟ್ಟವರ ಲಕ್ಷಣವನ್ನು ತಿಳಿಯೋಣ, ಇನ್ನೊಬ್ಬರ ಕಷ್ಟಕ್ಕೆ ಹೆಗಲು ಕೊಡಲು ಸಂಕೋಚ ಪಡದೆ ತಮ್ಮ ಕಷ್ಟವನ್ನು ಹಂಚಿಕೊಳ್ಳಲು ನಾಚುವಂತಹವರು ಒಳ್ಳೆಯ ವರು. ಇವರ ಈ ಅತೀ ನಾಜೂಕಿನ ಒಳ್ಳೆಯತನವೇ ಇವರಿಗೆ ಮುಪ್ಪು, ಅಂದರೇ ತಾನು ತಿನ್ನದೇ ಉಪವಾಸ ವಿದ್ದು ಮಕ್ಕಳ ಹೊಟ್ಟೆ ತುಂಬಿಸುವ ಅಮ್ಮಂದಿರ ಹಾಗೆ, ತಮ್ಮ ಮನೆಯನ್ನೇ ಬೆಳಗದೇ ದೇಶ ಬೆಳಗಿದ ಮಹಾತ್ಮನ ಹಾಗೆ.

ಇನ್ನು ಕೆಟ್ಟವರೆಂದರೇ ಹಿಟ್ಲರನ ಹಾಗೆ ಐಶ್ವರ್ಯದ ಅಮಲಿನಲ್ಲಿ ನರಮೇ‘ ನಡೆಸಿದ ಸರ್ವಾಧಿಕಾರಿ ಸ್ವಭಾವದವರು. ಒಬ್ಬರು ಕಷ್ಟಗಳಲ್ಲೆ ಹುತಾತ್ಮ ರಾದರು ಇನ್ನೊಬ್ಬರೂ ದುಃಖದಲ್ಲೇ ಕಗ್ಗೊಲೆಯಾದರು. ಅಂದರೇ ಈ ಜಗದಲ್ಲೀ ಅತೀ ಒಳ್ಳೆಯವರೂ ಮತ್ತು ಅತೀ ಕೆಟ್ಟವರೂ ಇಬ್ಬರಿಗೂ ದುಃಖ ಕಟ್ಟಿಟ್ಟ ಬುತ್ತಿಯಾಯಿತಲ್ಲವೇ? ಇನ್ನು ಸುಖ ಎಂತಹವರಿಗೆ ಸಿಗುತ್ತದೇ? ಆನಂದ ಅಂದರೇನು? ಎನ್ನುವ ಪ್ರಶ್ನೆ ಉಳಿಯಿತಲ್ಲವೇ? ಓದಿ ಮುಂದೆ. ಒಳ್ಳೆಯತನ ಕೆಟ್ಟತನಕ್ಕೂ ಸುಖ ದುಃಖಕ್ಕೂ ಸಂಬಂಧವೇ ಇಲ್ಲಾರೀ.

ತನಗೆ ಯಾವುದೇ ರೀತಿಯ ವಂಚನೇ ಮಾಡಿಕೊಳ್ಳದೇ ಇತರರರಿಗೂ ಹಾನಿಯೆಸಗದೇ ತನ್ನ ಹಸಿವಿಗೆ ಯಾವುದೇ ಸಂಕೋಚವಿಲ್ಲದೇ ಕೈಚಾಚಿ ಇನ್ನೊಬ್ಬರ ಹಸಿವಿಗೆ ಧಾರಾಳವಾಗಿ ದಾನ ಮಾಡುತ್ತಾ, ಒಳ್ಳೆಯವರು, ಕೆಟ್ಟವರು ಎನ್ನದೇ ಎಲ್ಲರನ್ನೂ ಸಮ ವಾಗಿ ಸೇರುತ್ತಾ, ನೋಡುತ್ತಾ, ಖಳನ ಮನೆಯಾಗಲಿ ಸಂಯಮಿಯ ಮನೆಯಾಗಲೀ ಆದಿಭಿಕ್ಷು ಶಿವನಿಗೆ ಭೇದವೆಲ್ಲಿ ಅಂದಹಾಗೆ ಎಲ್ಲರೊಳಗೊಂದಾಗಿ ಎಲ್ಲ ರಿಗೂ ಬೇಕಾದವರಿಗೆ ಎಲ್ಲೆಲ್ಲೂ ಆನಂದ. ಕೆಟ್ಟವರು ತನ್ನ ಉನ್ನತಿಯ ಸಮಯದಲ್ಲಿ ಯಾರನ್ನೂ ಲೆಕ್ಕಿಸದೇ ಮತ್ತು ತನಗೆ ದಿಕ್ಕು ತೋಚದಾಗ ಎಲ್ಲರ ಮುಂದೆ ಕೈಚಾಚುವ ಕೀಳು ಮನಸ್ಸು ಇರುವುದರಿಂದ ಅವರು ಐಶ್ವರ್ಯದ ಪರಮಾ ವಧಿಯಲ್ಲಿದ್ದರೂ ದುಃಖದ ಬದುಕನ್ನೇ ಅನುಭವಿಸುವರು.

ಒಳ್ಳೆಯವರು ಯಾವಾ ಗಲೂ ಕೆಟ್ಟವರ ಸಂಗ ಮಾಡರು, ಮತ್ತು ಕೆಟ್ಟವರು ಒಳ್ಳೆಯವರನ್ನು ಸಹಿಸರು. ಆದರೇ ಯಾವಾಗಲೂ ಸುಖದಲ್ಲಿರುವವನು ಇವರಿಬ್ಬ ರೊಡನೆ ಮುಟ್ಟೀ ಮುಟ್ಟದ ಹಾಗೆ ವ್ಯವಹಾರ ನಡೆ ಸುತ್ತಾ ಇತರರಿಗೆ ಬೇಕಾದಾಗ ಒಳಿತು ಮಾಡುತ್ತಾ ತನ್ನನ್ನು ದುಃಖಕ್ಕೊಡ್ಡದೇ ತನಗಾಗಿ ಇತರರ ಸಹಾಯ ಪಡೆಯಲು ಸಂಕೋಚ ಪಡದೇ ಮೂಢ ನಂಬಿಕೆ ಯಿಲ್ಲದೇ ದೇವರನ್ನು ನಂಬುತ್ತಾ, ದೇಶ‘ಕ್ತರಾಗಿ, ದೇಹದ ಆರೋಗ್ಯವನ್ನು ಕಾಪಾಡಿಕೊಂಡು ನಾಳೆಗೆ ಇಡದೇ ನೆನ್ನೆಗೆ ಅಳದೆ ಬದುಕುತ್ತಾರೆ.

-ಒಳಗನ್ನಡಿ, (ಕನ್ನಡಪ್ರಭ)