ನೈಟ್ ಶಿಫ್ಟ್ ತರುತ್ತೆ ಆರೋಗ್ಯಕ್ಕೆ ಕುತ್ತು...
ನಿದ್ರೆ, ಊಟ..ಎಲ್ಲವನ್ನೂ ಹೊತ್ತ್ ಹೊತ್ತಿಗೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತೆ. ನಿದ್ರೆ ಮಾಡೋ ಟೈಮಲ್ಲಿ ಕೆಲಸ ಹಾಗೂ ಕೆಲಸದ ಟೈಮಲ್ಲಿ ನಿದ್ರೆ ಮಾಡಿದರೆ ಆರೋಗ್ಯಕ್ಕೆ ತರುತ್ತೆ ಕುತ್ತು. ಏಕೆ?
ರಾತ್ರಿ ಪಾಳಿ ಮಾಡುವವರಿಗೆ ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್. ಅದೇನೆಂದರೆ ಹೆಚ್ಚಾಗಿ ನೈಟ್ ಶಿಫ್ಟ್ ಮಾಡುವವರ ಡಿಎನ್ಎ ಡ್ಯಾಮೇಜ್ ಸಹ ಆಗಬಹುದು. ಇದು ಕ್ಯಾನ್ಸರ್‌ಗೂ ದಾರಿ ಮಾಡಿಕೊಡುತ್ತದೆ. ಇದಿಷ್ಟು ಮಾತ್ರವಲ್ಲದೇ ಕಾರ್ಡಿಯೋವಾಸ್ಕ್ಯುಲರ್, ಮೆಟಾಬಾಲಿಕ್ ಮತ್ತು ನ್ಯೂರೋ ಡಿಜೆನೆರೆಟಿವ್ ಸಮಸ್ಯೆಯೂ ಕಾಡುತ್ತೆ ಎನ್ನುತ್ತೆ ಸಂಶೋಧನೆಯೊಂದು.
ಈ ಸಂಶೋಧನಾ ವರದಿಯನ್ನು ಅನಸ್ತೇಷಿಯಾ ಜರ್ನಲ್ ಪ್ರಕಟಿಸಿದೆ. ಈ ಸಂಶೋಧನೆಗಾಗಿ ವಿವಿಧ ಪಾಳಿಯಲ್ಲಿ ಕೆಲಸ ಮಾಡುವ ಆರೋಗ್ಯವಂತ 49 ವೈದ್ಯರ ರಕ್ತದ ಸ್ಯಾಂಪಲ್ ತೆಗೆದುಕೊಳ್ಳಲಾಗಿತ್ತು.
ಒಂದು ರಾತ್ರಿ ನಿದ್ರೆ ಬಿಟ್ಟರೂ ದೀರ್ಘ ಕಾಲದ ಸಮಸ್ಯೆ ಕಾಡುತ್ತದೆ ಎನ್ನುತ್ತೆ ಈ ಸಂಶೋಧನೆ. ಹಾಂಗ್‌ಕಾಂಗ್ ವಿಶ್ವವಿದ್ಯಾಲಯ ನಡೆಸಿದ ಈ ಅಧ್ಯಯನದಲ್ಲಿ ಯಾವ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೋ ಅವರ ಡಿಎನ್‌ಎ ಉಳಿದ ವೈದ್ಯರಿಗೆ ಹೋಲಿಸಿದರೆ ಹೆಚ್ಚು ಡ್ಯಾಮೇಜ್ ಆಗಿರುವುದು ಪತ್ತೆಯಾಗಿದೆ.
ನೈಟ್ ಡ್ಯೂಟಿ ಮಾಡೋರಿಗೆ ಒಂಚೂರು ಕಿವಿಮಾತು!
ಈ ಡಿಎನ್‌ಎ ಡ್ಯಾಮೇಜ್ ಆದರೆ ಕ್ಯಾನ್ಸರ್, ಹೃದಯನಾಳ, ಮೆಟಾಬಾಲಿಕ್, ನರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ನಿದ್ರೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳೂ ಕಾಡುತ್ತವೆ. ಆದುದರಿಂದ ನೈಟ್ ಶಿಫ್ಟ್ ಮಾಡುವವರು ನಿದ್ರೆ, ಆಹಾರದ ಬಗ್ಗೆ ಹೆಚ್ಚು ಗಮನಿಸಬೇಕು.