ಮದುವೆಯಾಗಿ ವಾರವಾಯ್ತು, ಅದು ಸಾಧ್ಯವಾಗ್ಲಿಲ್ಲ!

Newly married woman expresses her inability to cope up with her hubby
Highlights

ನೂರಾರು ಕನಸುಗಳೊಂದಿಗೆ ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗೆ ಏನನ್ನೂ ಮಾಡದ ಸ್ಥಿತಿ ಬಂದೊದಗುತ್ತದೆ. ಅಯ್ಯೋ ನಮ್ಮ ಕೈಯಲ್ಲಿ ಏನೂ ಆಗೋಲ್ಲವೆನ್ನುವ ಆತಂಕ ಅವರನ್ನು ಎಡಬಿಡದೇ ಕಾಡುತ್ತದೆ. ಇಂಥ ಸ್ಥಿತಿಯಲ್ಲಿರುವ ನವ ವಿವಾಹಿತೆಯೊಬ್ಬಳಿಗೆ ಲೈಂಗಿಕ ತಜ್ಞರು ಸಮಾಧಾನ ಹೇಳಿದ್ದು ಹೇಗೆ?

ನನಗೆ 26 ವರುಷ. ವಿವಾಹಿತೆ. ಮದ್ವೆಯಾಗಿ ಒಂದು ವಾರವಾಯಿತು. ಪತಿಯೊಂದಿಗೆ ಹಲವು ಸಲ ಸಂಭೋಗಿಸಲೆತ್ನಿಸಿದಾಗಲೂ ಜನನಾಂಗ ಪ್ರವೇಶ ಸಾಧ್ಯವಾಗುತ್ತಿಲ್ಲ. ವಿಪರೀತ ನೋವಾಗುತ್ತದೆ. ಯೋನಿ ಕಿರಿದಾದರೆ ಹೀಗಾಗುವುದೇ? ಅಥವಾ ನನ್ನ ಪತಿಯಲ್ಲೇ ದೌರ್ಬಲ್ಯ ಇದೆಯೇ? ಇದಕ್ಕಿರುವ ಸೂಕ್ತ ಚಿಕಿತ್ಸೆ ಅಥವಾ ಪರಿಹಾರಗಳೇನು?
- ಹೆಸರುಬೇಡ, ಊರುಬೇಡ

ಮೊದಮೊದಲು ಹೀಗೆ ಸ್ವಲ್ಪ ಕಷ್ಟವಾಗುವುದು ಸಹಜ. ನಾಚಿಕೆ, ಮುಜುಗರ, ಭಯ, ಪೂರ್ವಸಿದ್ಧತೆ ಇಲ್ಲದಿರುವುದು- ಇವುಗಳಿಂದ ಯೋನಿ ಸೆಟೆದು, ಸಂಕುಚಿತಗೊಂಡು ಹೀಗಾಗಿದೆಯಷ್ಟೇ. ಮೊದಲು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಿ. ಯೋನಿ ಪ್ರವೇಶ ಸುಲಭ ಆಗಬೇಕೆಂದರೆ, ಹೆಚ್ಚು ಹೊತ್ತು ಸಂಭೋಗಪೂರ್ವ ರತಿಯಾಟಗಳಲ್ಲಿ ತೊಡಗಬೇಕು. ಅನೇಕ ಪುರುಷರು ಹೆಚ್ಚು ಹೊತ್ತು ರಸಿಕತೆಯಿಂದ ಆಲಿಂಗನ, ಚುಂಬನಾದಿಗಳನ್ನು ನಡೆಸದೆ ಬೇಗನೆ ಸಂಭೋಗಕ್ಕೆ ಪ್ರಯತ್ನಿಸುವುದರಿಂದ ಸ್ತ್ರೀಯರು ಇನ್ನೂ ಸಿದ್ಧವಾಗಿರದೇ ಹೀಗಾಗುತ್ತದೆ. 

ರತಿಯಾಟಗಳಿಂದ ಮೈಮರೆತು ಯೋನಿ ಒದ್ದೆಯಾದಾಗ ಪ್ರವೇಶ ಸುಲಭ. ಅಲ್ಲದೆ ಈ ವೇಳೆ ನೋವಿರುವುದಿಲ್ಲ. ಅಷ್ಟು ಒದ್ದೆಯಾಗುತ್ತಿಲ್ಲವೆಂದರೆ ‘ಕೆವೈ ಜೆಲ್ಲಿ’ ಎಂಬ ದ್ರಾವಣ ಸವರಿಕೊಳ್ಳಬಹುದು. ಕನ್ಯಾಪೊರೆ ಅಥವಾ ಹೈಮೆನ್ ಇನ್ನೂ ಹರಿದಿಲ್ಲದಿದ್ದರೆ, ಕೆಲವೊಮ್ಮೆ ಅದು ಹರಿಯಲು ಕಷ್ಟವಾಗಿ ಹೀಗಾಗಬಹುದು. ಮೇಲೆ ತಿಳಿಸಿದ ಪರಿಹಾರದಿಂದ ಸಮಸ್ಯೆ ಬಗೆಹರಿಯದಿದ್ದರೆ, ಸ್ತ್ರಿರೋಗ ತಜ್ಞರನ್ನು ಭೇಟಿಯಾಗಿ. ಅವರು ಯೋನಿಯನ್ನು ಪರೀಕ್ಷಿಸಿ, ಕನ್ಯಾಪೊರೆ ಇನ್ನೂ ಹರಿದಿಲ್ಲವಾದರೆ, ಶಸ್ತ್ರ ಕ್ರಿಯೆಯಿಂದ ಹರಿಯುತ್ತಾರೆ. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

- ಡಾ ಬಿ ಆರ್ ಸುಹಾಸ್, ಲೈಂಗಿಕತಜ್ಞ

ಸೆಕ್ಸ್ ಆಸಕ್ತಿ ಹೆಚ್ಚಿಸೋ ಆಸನಗಳಿವು

ಸೆಕ್ಸ್ ವರ್ಕರ್ಸ್ ಬಗ್ಗೆ ಜಯಾಮಾಲ ಹೇಳಿಕೆಗೆ ವಿರೋಧ

ನಗ್ನ ಸ್ಥಿತಿಯಲ್ಲಿ ಸೆಕ್ಸ್ ವರ್ಕರ್ ಮೃತದೇಹ ಪತ್ತೆ

ಚೊಚ್ಚಲ ಮಗುವಾದ ನಂತರ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆಯೇ ?

 

 

loader