ಚೊಚ್ಚಲ ಮಗುವಾದ ನಂತರ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆಯೇ ?
- ಮಹಿಳೆಯರು ಮೊದಲ ಮಗು ಜನಿಸಿದ ನಂತರ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು.
- ಈ ಸಂದರ್ಭದಲ್ಲಿ ತಾಯಿಯರ ಆರೈಕೆ ಮುಖ್ಯವಾಗುತ್ತದೆ.
- ಆರೈಕೆಯಲ್ಲಿ ವ್ಯತ್ಯಾಸವಾದರೆ ಸೆಕ್ಸ್ ಹಾಗೂ ಆರೋಗ್ಯದ ಮೇಲೆ ಪರಿಣಾಮ
ಮೊದಲ ಮಗುವಾದ ಮಹಿಳೆಯರು ಸೆಕ್ಸ್ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂಬ ಭಾವನೆ ಹಲವರಲ್ಲಿದೆ. ಆದರೆ ಹಲವು ಊಹಾಪೋಹಗಳಿಗೆ ವಿಶ್ವದ ವಿವಿಧವೈದ್ಯಕೀಯ ತಜ್ಞರು ನೀಡಿರುವ ಅಭಿಪ್ರಾಯದ ಮಾಹಿತಿಯಿದು.
ಮಹಿಳೆಯರು ಮೊದಲ ಮಗು ಜನಿಸಿದ ನಂತರ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಗಂಡನೊಂದಿಗೆ ಮುಂದಿನ ಸೆಕ್ಸ್ ಜೀವನಕ್ಕೆ ತೊಂದರೆ ಸಂಭವಿಸುತ್ತದೆ.
ಮೊದಲ ಮಗುವಾದ ಸ್ತೀಯರು ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ. ಈ ಸಂದರ್ಭದಲ್ಲಿ ತಾಯಿಯರ ಆರೈಕೆ ಮುಖ್ಯವಾಗುತ್ತದೆ. ತಾಯಿ ಈ ಸಂದರ್ಭದಲ್ಲಿ ಮಗಳು ಮತ್ತು
ಮೊಮ್ಮಕ್ಕಳನ್ನು ಚೆನ್ನಾಗಿ ಪೋಷಿಸಬೇಕು.
ಆರೈಕೆಯಲ್ಲಿ ವ್ಯತ್ಯಾಸವಾದರೆ ಸ್ತ್ರೀಯರು ತಮ್ಮ ಪುರುಷನಿಗೆ ಲೈಂಗಿಕ ಸುಖ ನೀಡಲು ಮಾತ್ರವಲ್ಲ ದಿನನಿತ್ಯದ ಚಟುವಟಿಕೆಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.