ನಗ್ನ ಸ್ಥಿತಿಯಲ್ಲಿ ಸೆಕ್ಸ್ ವರ್ಕರ್ ಮೃತದೇಹ ಪತ್ತೆ

Sex worker's naked dead body recovered from apartment
Highlights

ಸೆಕ್ಸ್ ವರ್ಕರ್ ಓರ್ವರ ಮೃತದೇಹ ನಗ್ನವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ಕುಲ್ಟಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಕೋಲ್ಕತಾ : ಪಶ್ಚಿಮ ಬಂಗಾಳದ ಕುಲ್ಟಿ ಪ್ರದೇಶದ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಸ್  ವರ್ಕ್ ಓರ್ವರ  ಮೃತ ದೇಹ ನಗ್ನವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಕುಲ್ಟಿ ಪ್ರದೇಶದ ರೆಡ್ ಲೈಟ್ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಮಹಿಳೆ ವಾಸವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಮನೆಯಿಂದ ಹೊರ ಬಂದಿರಲಿಲ್ಲ. 

ಈ ಬಗ್ಗೆ ಅಕ್ಕ ಪಕ್ಕದ  ನಿವಾಸಿಗಳು ಆತಂಕಗೊಂಡು ಮನೆಯ ಓನರ್ ಗೆ ಮಾಹಿತಿ ನೀಡಿದ್ದಾರೆ.  ಬಳಿಕ ಮನೆಯ ಬಳಿ ಹೋಗಿ ನೋಡಿದಾಗ ಒಳಗಿನಿಂದ ಲಾಕ್ ಮಾಡಿರುವುದು ತಿಳಿದು ಬಂದಿದೆ. 

ತಕ್ಷಣವೇ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಒಡೆದು ಒಳಕ್ಕೆ ತೆರಳಿದಾಗ ಆಕೆಯ ನಗ್ನವಾಗಿರುವ ಮೃತದೇಹ ಪತ್ತೆಯಾಗಿದೆ. 

ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದೀಗ ಈ ಸಂಬಂಧ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಅಲ್ಲದೇ ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಲೂ ಕೂಡ ಪ್ರಯತ್ನಿಸಿದ್ದಾರೆ.  

loader