ಹೊಸಬಾಳ ಹೊಸಿಲು ದಾಟಿದ ನವಜೋಡಿ ಹೊಣೆ ಇದು....

Newly married couples must do this works
Highlights

ಅದೊಂದು ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದು, ಸತಿ ಪತಿಗಳಾಗುವ ದಂಪತಿಗೆ ಕೂಡಲೇ ಹೊರಲೇಬೇಕಾದ ಜವಾಬ್ದಾರಿಗಳಿರುತ್ತವೆ. ತಕ್ಕ ಪ್ಲ್ಯಾನ್ ಮಾಡಿಕೊಂಡು ಹಸೆಮಣೆ ಏರುವ ವಧು-ವರರು, ಜೀವನವೂ ಪ್ಲ್ಯಾನ್‌ನಂತೆ ನಡೆಯುತ್ತದೆ ಎಂದುಕೊಳ್ಳಲಾಗುವುದಿಲ್ಲ. ಆದರೆ, ವ್ಯವಸ್ಥಿತವಾದ ಲೈಫ್‌ಸ್ಟೈಲ್ ರೂಢಿಸಿಕೊಂಡರೆ ತಕ್ಕಮಟ್ಟಿಗೆ ಬದುಕು ಹಸನಾಗುವುದರಲ್ಲಿ ಅನುಮಾನವೇ ಇಲ್ಲ

ಈ ನವಜೋಡಿ ತಕ್ಷಣವೇ ಮುಗಿಸಬೇಕಾದ ಜವಾಬ್ದಾರಿಗಳು ಇಂತಿವೆ....

  • ಮದುವೆಗೆ ಆಗಮಿಸಿದ ಗೆಳೆಯರು ಹಾಗೂ ಸಂಬಂಧಿಕರಿಗೆ ತಪ್ಪದೇ ಧನ್ಯವಾದ ತಿಳಿಸಿ, ಇದರಿಂದ ಅವರಿಗೂ ಮಹತ್ವ ನೀಡಿದ್ದೀರೆಂಬ ಭಾವನೆ ಅವರಲ್ಲಿ ಮೂಡುತ್ತದೆ. ನಿಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಕಷ್ಟಕಾಲದಲ್ಲಿ ಸಹಕರಿಸುತ್ತಾರೆ.
  • ಮದುವೆ ಸಂಭ್ರಮದಲ್ಲಿ ಸಹಜವಾಗಿಯೇ ಬೆಲೆಯುಳ್ಳ ಉಡುಗೆ ತೊಟ್ಟಿರುತ್ತಾರೆ. ಅದನ್ನು ಶುಭ್ರಗೊಳಿಸಿ, ಜೋಪಾನವಾಗಿಟ್ಟುಕೊಳ್ಳಿ. 
  • ಹನಿಮೂನ್‌ಗೆ ಅಗತ್ಯವಾದ ತಯಾರಿ ಮಾಡಿಕೊಳ್ಳಿ. ವಿದೇಶಕ್ಕೆ ತೆರಳುವುದಾದರೆ ಮೊದಲೇ ವೀಸಾ, ಪಾಸ್‌ಪೋರ್ಟ್ ಮೊದಲಾದ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
  • ಮದುವೆ ಆಲ್ಬಂ ಅನ್ನು ಸಾಧ್ಯವಾದಷ್ಟು ಬೇಗ ತರಿಸಿಕೊಳ್ಳಿ. ಜೀವನದ ಅತ್ಯಂತ ಅಪ್ಯಾಯಮಾನವಾದ ಘಟನೆಗಳನ್ನು ನೆನಪಿಸುವಂಥ ಫೋಟೋಗಳನ್ನು ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳುವುದನ್ನು ಮರೆಯದಿರಿ.
  • ಅಗತ್ಯವಿದ್ದರೆ ಕಾನೂನಾತ್ಮಕವಾಗಿ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಿ. ಮದುವೆ ಸರ್ಟಿ‌ಫಿಕೇಟ್ ಮಾಡಿಸಿಕೊಳ್ಳಿ. ಪಾಸ್‌ಪೋರ್ಟ್, ಎಲೆಕ್ಷನ್ ಕಾರ್ಡ್, ಆಧಾರ್ ಕಾರ್ಡ್...ಹೀಗೆ ಅಗತ್ಯ ದಾಖಲೆಗಳಲ್ಲಿ ವಿಳಾಸ ಬದಲಿಸುವುದನ್ನು ಮರೆಯದಿರಿ. 
  • ಹಣದ ವಿಚಾರವಾಗಿಯೂ ವ್ಯವಸ್ಥಿತ ಪ್ಲ್ಯಾನ್ ಮಾಡಬೇಕು. ಮನೆ, ಮಕ್ಕಳು ಮಾಡುವಾಗ ಉಳಿತಾಯ ಮಾಡಿದ ಹಣ ನೆರವಿಗೆ ಬರುತ್ತದೆ. 
  • ಮದುವೆ ಎಂದರೆ ಜವಾಬ್ದಾರಿ. ಎಲ್ಲವನ್ನೂ ಸೂಕ್ತವಾಗಿ ನಿಭಾಯಿಸಿದಾಗ ಜೀವನ ಸುಸೂತ್ರವಾಗುತ್ತದೆ. ಬಾಳು ಬಂಗಾರವಾಗುತ್ತದೆ. 
loader