Asianet Suvarna News Asianet Suvarna News

ಸೀರೆಗೂ ಬಂತು ಬ್ಲೌಸ್ ನಲ್ಲೇ ಬೆಲ್ಟ್ : ಏನಿದು ಹೊಸ ಸ್ಟೈಲ್.?

ಬಾಲಿವುಡ್‌ನ ಸ್ಟಾರ್ ಡಿಸೈನರ್ ಮಸಾಬಾ ಗುಪ್ತಾ ಅವರ 2018ರ ದಿ ಬೆಸ್ಟ್ ಡಿಸೈನ್‌ಗಳಲ್ಲಿ ಬೆಲ್ಟ್ ಸೀರೆಯೂ ಒಂದು. ವಸ್ತ್ರದ ಮೇಲಿನ ಇಂಥ ನೂರಾರು ಡಿಸೈನ್‌ಗಳು ರೂಪದರ್ಶಿಗಳು, ಅಪರೂಪ ಕ್ಕೊಮ್ಮೆ ಬಾಲಿವುಡ್ ನಟಿಯರ ಮೈಮೇಲಷ್ಟೇ ಕಾಣಿಸಿಕೊಂಡು ಮರೆಯಾಗೋದು ಸಾಮಾನ್ಯ. 

New trend of Saree blouse with belt
Author
Bengaluru, First Published Dec 22, 2018, 10:48 AM IST
  • Facebook
  • Twitter
  • Whatsapp

ಆದರೆ ಮದುವೆ ಮನೆಯಲ್ಲಿ ಸಿಗೋ ಹೆಣ್ಮಕ್ಕಳ ಮೈಮೇಲೂ ಕಾಣಿಸ್ಕೊಳುತ್ತೆ ಅಂದರೆ ಆ ಡಿಸೈನ್ ಪಸಂದಾಗದೆ ಅಂತಾನೇ ಅರ್ಥ. ಸೀರೆ ಮೇಲೆ ಬೆಲ್ಟ್ ಹಾಕೋ ಡಿಸೈನ್ ಮೊದಲು ಪರಿಚಯಿಸಿದ್ದು ಸಭ್ಯಸಾಚಿ.

ಆದರೆ ಇದನ್ನು ತನ್ನ ಡಿಸೈನ್‌ಗಳಲ್ಲಿ ಜನಪ್ರಿಯಗೊಳಿಸಿದ್ದು ಮಸಾಬಾ. ಬ್ಲೌಸ್‌ನಲ್ಲೇ ಬೆಲ್ಟ್ ಸೀರೆ ಉಟ್ಟು ಸೊಂಟಕ್ಕೆ ಬಂಗಾರದ (ಅಥವಾ ಆ ಬಣ್ಣದ) ಪಟ್ಟಿ ಹಾಕೋದು ಭಾರತೀಯರಿಗೆ ಹೊಸತಲ್ಲ.

ಪುರಾತನವಾದ ಈ ಟ್ರೆಂಡ್ ಆಗಾಗ ಬಂದು ಹೋಗುತ್ತಿರುತ್ತೆ. ಆದರೆ ಈ ಪಟ್ಟಿ ಅದಲ್ಲ. ಸೀರೆ ಬ್ಲೌಸ್‌ನಲ್ಲೇ ಬರುವ ಪಟ್ಟಿ ಇದು. ಬ್ಲೌಸ್ ಹಾಕಿ ಸೀರೆ ಯುಟ್ಟು, ಸೀರೆಯ ಮೇಲಿಂದ ಬೆಲ್ಟ್‌ನ ಹಾಗೆ ಈ ಪಟ್ಟಿ ಹಾಕ್ಕೊ ಳ್ಳೋದು. ಹೆಣ್ಮಕ್ಕಳಲ್ಲಿ ಸೌಂದರ್ಯ ಅನ್ನೋ ದನ್ನು ಹೀಗೇ ಅಂತ ಡಿಫೈನ್ ಮಾಡೋದು ಕಷ್ಟ. ಆದರೆ ಈ ಡಿಸೈನ್ ಹೆಣ್ಮಕ್ಕಳಿಗೊಂದು ಡಿಗ್ನಿಫೈಡ್ ಲುಕ್ ತರುತ್ತೆ ಅನ್ನೋದು ವಾಸ್ತವ.

ಎಂಥಾ ಸೀರೆಗೆ ಇಂಥ ಡಿಸೈನ್ ಈ ಟ್ರೆಂಡ್ ಬಂತು ಅಂದಕೂಡಲೇ ಇರೋ ಬರೋ ಸೀರೆಗೆಲ್ಲ ಇದೇ ಡಿಸೈನ್ ಬ್ಲೌಸ್ ಹಾಕ್ಕೊಂಡ್ರೆ ಅದೊಂಥರ ಆಡ್ ಅನಿಸಬಹು ದು. ಆದರೆ ಫ್ಲೋರಲ್ ಡಿಸೈನ್‌ನ ಸೀರೆ ಪ್ರಿಯ ರು ನೀವಾಗಿದ್ದರೆ ಅದಕ್ಕೆ ಈ ಡಿಸೈನ್ ಸಖತ್ತಾ ಗಿರುತ್ತೆ. ಅದರಲ್ಲೂ ಗಾಢ ಬಣ್ಣದ ಪ್ಲೈನ್ ಸೀರೆಯ ಅಂಚಿನಲ್ಲಿ ಹೂವಿನ ಡಿಸೈನ್ ಇದ್ದರೆ ಚೆಂದ.

ಆ ಹೂಗಳನ್ನೆಲ್ಲ ಕಟ್ಟಿ ಮಾಲೆ ಮಾಡಿದ ಹಾಗೆ ನಡುವಿಗೆ ಸುತ್ತಿಕೊಳ್ಳಬಹು ದು. ಒಂದು ಬಗೆಯ ಮೋಹಕ ಲುಕ್ ಇದು. ಬಂಗಾರದ ಅಂಚುಳ್ಳ ಪ್ಲೈನ್ ಸೀರೆಗೂ ಚೆನ್ನಾಗಿರುತ್ತೆ. ನಾಜೂಕಾಗಿ ಸೀರೆ ಉಟ್ಕೊಳ್ಳಿ ಸೀರೆ, ಬ್ಲೌಸ್ ಎಷ್ಟೇ ಚೆಂದ ಇದ್ರೂ ಅದನ್ನು ಉಟ್ಟುಕೊಂಡ ರೀತಿ ವಡ್ ವಡ್ಡಾಗಿದ್ರೆ ಚೆಂದ ವನ್ನೆಲ್ಲ ನುಂಗಿಬಿಡುತ್ತೆ. ಹಾಗಾಗಿ ಇಂಥ ಟ್ರೆಂಡಿ ಸ್ಟೈಲ್‌ನ ಸೀರೆ ಉಡುವಾಗ ನಾಜೂ ಕಾಗಿ ಉಡಲು ಪ್ರಯತ್ನಿಸಿ. ಅಗಲವಾದ ಪಲ್ಲು ಚೆನ್ನಾಗಿರಲ್ಲ. ಸಣ್ಣ ಫ್ಲೀಟ್ಸ್ ಮಾಡಿ ಪಿನ್ ಮಾಡಿ. ಬ್ಲೌಸ್ ಮೇಲೆ ಫ್ಲೋರಲ್ ಡಿಸೈನ್ ಇರಲಿ. ಬೋಟ್‌ನೆಕ್ ಬ್ಲೌಸ್, ಬ್ಯಾಕ್ ಬಟನ್ ಇರುವ ಟೀಶರ್ಟ್‌ನ ಹಾಗೆ ರೌಂಡ್ ನೆಕ್ ಇರುವ ಬ್ಲೌಸ್ ಚೆನ್ನಾಗಿರುತ್ತೆ. ಇಯರ್ ರಿಂಗ್ ಹಾಕ್ಕೊಂಡ್ರೆ ಸಾಕು, ಉಳಿದ ಆ್ಯಕ್ಸೆಸರೀ ಸ್‌ಗೆ ದುಡ್ ವೇಸ್ಟ್ ಮಾಡುವ ಅಗತ್ಯ ಇಲ್ಲ.

  • ಹೂವಿನ ಅಂಚುಗಳಿರುವ ಪ್ಲೈನ್ ಸೀರೆಗೆ ಬೆಲ್ಟ್ ಇರುವ ಬ್ಲೌಸ್ ವಿನ್ಯಾಸ ಚೆನ್ನಾಗಿರುತ್ತೆ.
  • ಬ್ಲೌಸ್‌ನ ಮುಂದುವರಿದ ಭಾಗದ ಹಾಗಿರುವ ಈ ಬೆಲ್ಟ್ ಅರ್ಥಾತ್ ಪಟ್ಟಿಯನ್ನು ಬ್ಲೌಸ್ ಹೊಲಿಸುವಾಗಲೇ ಇಟ್ಟರಾಯ್ತು.
  • ಬಾಲಿವುಡ್ ನಟಿಯರಿಂದ ಹಿಡಿದು ಸಾಮಾನ್ಯ ಹೆಣ್ಮಕ್ಕಳವರೆಗೂ ಎಲ್ಲರೂ ಇಷ್ಟಪಡೋ ಸ್ಟೈಲ್
Follow Us:
Download App:
  • android
  • ios