ಪ್ರತಿಯೊಂದೂ ಧರ್ಮವೂ ದಾನದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. ರಕ್ತ, ವಿದ್ಯೆ, ಧಾನ್ಯ...ಜೀವ ದಾನ ಸೇರಿ ಹಲವು ರೀತಿಯ ಕೊಡುಗೆಗಳು ಅನನ್ಯ. ಆದರೆ, ಹಿಂದೂ ಧರ್ಮದಲ್ಲಿ ಕೆಲವೊಂದು ವಸ್ತುಗಳ ದಾನವನ್ನು ನಿಷೇಧಿಸಲಾಗಿದೆ. ಏನವು?

ಹಿಂದೂ ಧರ್ಮದಲ್ಲಿ ದಾನಕ್ಕೆ ತನ್ನದೇ ಆದ ಮಹತ್ವವಿದೆ. ಆದರೆ, ಕೆಲವು ವಸ್ತುಗಳ ದಾನ ಇಲ್ಲಿ ನಿಷಿದ್ಧ. ಕೊಟ್ಟರೆ ಒಳ್ಳೆಯದೇ ಕೊಡಬೇಕೆಂಬ ಉದ್ದೇಶದಿಂದಲೋ ಏನು, ಈ ವಸ್ತುಗಳನ್ನು ದಾನ ನೀಡಬಾರದೆನ್ನಲಾಗುತ್ತದೆ. ಅವು ಯಾವುವು?

ಧರಿಸಿದ ಬಟ್ಟೆ

ಒಬ್ಬರು ಧರಿಸಿದ ಬಟ್ಟೆಯನ್ನು ಮತ್ತೊಬ್ಬರಿಗೆ ದಾನ ಮಾಡಬಾರದು. ಧರಿಸಿದ ವಸ್ತ್ರದಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿ ಇರೋದ್ರಿಂದ ಅದು ಮತ್ತೊಬ್ಬರ ಮೇಲೆ ದುಷ್ಪರಿಣಾಮ ಬೀರಬಹುದು. ಅಕಸ್ಮಾತ್ ಕೊಡುವುದೇ ಆದರೆ, ಒಗೆದು ಕೊಡಬೇಕು.

ಪೆನ್ 

ಪೆನ್ ನಮ್ಮಲಿರುವ ಭಾವನೆ ಮತ್ತು ಜ್ಞಾನ ಹೊರಬರಲು ಬಳಸುವ ಒಂದು ದಾರಿ ಪೆನ್. ಕೆಲವರಿಗೆ ಇದು ಕರ್ಮದ ಸಂಕೇತವೂ ಹೌದು. ಆದ್ದರಿಂದ ಇದನ್ನು ದಾನವಾಗಿ ಕೊಟ್ಟರೆ ನಮ್ಮ ಕರ್ಮವನ್ನೇ ದಾನ ಮಾಡಿದಂತೆ. ಹಾಗಾಗಿ ಪೆನ್‌ ದಾನ ಹಿಂದೂ ಧರ್ಮದಲ್ಲಿ ನಿಷಿದ್ಧ.

ಪುಸ್ತಕ

ಜ್ಞಾನ ದಾನ ಶ್ರೇಷ್ಠ ನಿಜ. ಆದರೆ, ಜ್ಞಾನದ ರೂಪವಾದ ಪುಸ್ತಕವನ್ನು ಕೊಡುವಾಗಲೂ ಹುಷಾರಾಗಿರಬೇಕು. ಹೊಸ ಪುಸ್ತಕವನ್ನು ದಾನವಾಗಿ ಕೊಟ್ಟರೆ ಒಳ್ಳೆಯದು.

ಕರ್ಚಿಫ್

ಸದಾ ಪರ್ಸಿನೊಂದಿಗೆ ಇರೋ ಕರ್ಚೀಫ್ ಐಶ್ವರ್ಯದ ಸಂಕೇತವೂ ಹೌದು. ಆದ್ದರಿಂದ ಇದನ್ನು ದಾನವಾಗಿ ಕೊಟ್ಟರೆ ನಮ್ಮೊಂದಿಗಿರುವ ಲಕ್ಷ್ಮಿಯನ್ನೇ ದಾನ ಮಾಡಿದಂತೆ. ಆದ್ದರಿಂದ ಕರ್ಚೀಫ್ ಅನ್ನು ದಾನ ಮಾಡದಿದ್ದರೆ ಒಳ್ಳೆಯದು.