ನೀವು ಎಲ್ಲ ಕೆಲಸಗಳಲ್ಲೂ ಪರ್ಫೆಕ್ಷನ್ ಬಯಸುತ್ತೀರಾ? ಹೌದು ಅಂತಾದರೆ ಈ ರೀತಿ ಎಲ್ಲ ಕೆಲಸಗಳಲ್ಲೂ ಪರಿಪೂರ್ಣತೆ ಬಯಸುವ ಗುಣದಿಂದ ನಿಮಗೆ ಖುಷಿ ಸಿಗುತ್ತದಾ? ಖಂಡಿತವಾಗಿಯೂ ನಿಮ್ಮ ಉತ್ತರ ಇಲ್ಲ ಎಂದೇ ಇರುತ್ತದೆ. ಪರ್ಫೆಕ್ಷನ್‍ಗೆ ಸಂಬಂಧಿಸಿ ನಡೆದ ಅನೇಕ ಅಧ್ಯಯನಗಳ ಪ್ರಕಾರ ಈ ಗುಣದಿಂದ ನೀವು ಬದುಕಿನಲ್ಲಿ ಹಿಂದುಳಿಯುವ ಸಾಧ್ಯತೆಯಿದೆ. ಪರ್ಫೆಕ್ಷನ್‍ಗಾಗಿ ಹಾತೊರೆಯುವುದರಿಂದ ನಿಮ್ಮನ್ನು ನೀವು ಅಗತ್ಯಕ್ಕಿಂತ ಹೆಚ್ಚಾಗಿ ವಿಮರ್ಶೆಗೊಳಪಡಿಸುವ ಗುಣ ಬೆಳೆಸಿಕೊಳ್ಳುತ್ತೀರಿ, ಇದು ಮಾನಸಿಕ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಸಿಂಪಲ್‌ ಟ್ರಿಕ್ಕು, ಎಕ್ಸರ್‌ಸೈಸ್‌​- ಮಾಡಿ, ಮಜಾ ನೋಡಿ!

ಬಾಥ್ ಯುನಿವರ್ಸಿಟಿ 2018ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ  ಈ ಹಿಂದಿನ ಜನರೇಷನ್ ಯುವಕರಿಗಿಂತ ಈ ಯುಗದ ಯುವಕರು ಪ್ರತಿ ಕೆಲಸದಲ್ಲೂ ಹೆಚ್ಚಿನ ಪರ್ಫೆಕ್ಷನ್ ಸಾಧಿಸಲು ಬಯಸುತ್ತಾರೆ.ಅದಕ್ಕಾಗಿ ಉನ್ನತ ಮಾನದಂಡಗಳನ್ನು ನಿಗದಿಪಡಿಸಿಕೊಳ್ಳುವ ಜೊತೆಗೆ ಅಗತ್ಯಕ್ಕಿಂತ ಹೆಚ್ಚಾಗಿ ಸ್ವ-ವಿಮರ್ಶೆ ನಡೆಸುತ್ತಾರೆ. ಈ ಅಧ್ಯಯನಕ್ಕಾಗಿ ಉತ್ತರ ಅಮೆರಿಕ ಹಾಗೂ ಬ್ರಿಟಿಷ್ ಯುನಿವರ್ಸಿಟಿಗಳ 40,000 ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಣೆಗೊಳಪಡಿಸಿದಾಗ ಯುವಜನತೆ ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕು ಎಂಬ ವಿಚಾರಕ್ಕೆ ತರ್ಕರಹಿತವಾಗಿ ಮಹತ್ವ ನೀಡುತ್ತಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಈ ಗುಣ ಕಾಲಕ್ರಮೇಣ, ಒಂದು ಜನರೇಷನ್‍ನಿಂದ ಮತ್ತೊಂದು ಜನರೇಷನ್‍ಗೆ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ತಮ್ಮ ಮೇಲೆ ಬೇರೆಯವರು ಅಗತ್ಯಕ್ಕಿಂತ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ,ಅದನ್ನು ಹೇಗಾದರೂ ಮಾಡಿ ತಲುಪಬೇಕು. ಆ ಮೂಲಕ ನಾನು ಪರ್ಫೆಕ್ಟ್ ಎಂದು ತೋರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎಲ್ಲ ಕೆಲಸಗಳಲ್ಲೂ ಪರಿಪೂರ್ಣತೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಯುವಜನತೆ ಪರಿಪೂರ್ಣತೆಗಾಗಿ ಅಗತ್ಯಕ್ಕಿಂತ ಹೆಚ್ಚು ತುಡಿಯಲು ಕಾರಣವಾಗಿರುವ ಅಂಶಗಳಲ್ಲಿ ಹೆತ್ತವರ ಅತಿಯಾದ ಬೇಡಿಕೆಗಳು ಕೂಡ ಸೇರಿವೆ.ಎಂದು ಅಧ್ಯಯನ ತಿಳಿಸಿದೆ. 

ನಿಮ್ಮೆಲ್ಲ ಸಾಮಥ್ರ್ಯವನ್ನು ಉತ್ತಮವಾಗಿ ಬಳಸಿಕೊಂಡು ಏನಾದರೂ ಮಾಡುವುದಕ್ಕೂ ಹಾಗೂ ಇನ್ನೊಬ್ಬರನ್ನು ಮೆಚ್ಚಿಸುವುದಕ್ಕೋಸ್ಕರ ಯಾವುದೇ ಕಾರ್ಯವನ್ನು ಪರ್ಫೆಕ್ಟ್ ಆಗಿ ಪೂರ್ಣಗೊಳಿಸಲು ಪ್ರಯತ್ನಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬುದು ಅಧ್ಯಯನದಲ್ಲಿ ಪಾಲ್ಗೊಂಡ ತಜ್ಞರ ಅಭಿಪ್ರಾಯ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಪರ್ಫೆಕ್ಟ್ ಆಗಿ ಕಾರ್ಯನಿರ್ವಹಿಸಲು ಬಯಸುವುದರಿಂದ ಒತ್ತಡ ಹೆಚ್ಚುತ್ತದೆ,ಇದು ಕ್ರಮೇಣ ಮನೋವ್ಯಾಧಿಗಳಿಗೂ ಕಾರಣವಾಗಬಲ್ಲದು ಎಂದು ಅವರು ಹೇಳುತ್ತಾರೆ.

ಭಂಗಿಯಲ್ಲಿದೆ ಮಾನಸಿಕ ಆರೋಗ್ಯ

ಹೀಗೆಲ್ಲ ಆಗುತ್ತೆ: ಎಲ್ಲ ಕೆಲಸವನ್ನೂ ಪರ್ಫೆಕ್ಟ್ ಆಗಿ ಮಾಡಿ ಮುಗಿಸಬೇಕು ಎಂಬ ಭಾವನೆಯೇ ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಇದರಿಂದ ಏನೆಲ್ಲ ಸಮಸ್ಯೆಗಳು ಕಾಡಬಹುದು?
1.ಕೆಲಸವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ: ಪರ್ಫೆಕ್ಟ್ ಆಗಿರಬೇಕು ಎಂಬ ಭಾವನೆ ಮನಸ್ಸಿನಲ್ಲಿರುವಾಗ ಕೆಲಸವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಮನಸ್ಸು ಅಗತ್ಯಕ್ಕಿಂತ ಹೆಚ್ಚು ಜಾಗೃತವಾಗಿರುತ್ತದೆ. ಫಲಿತಾಂಶದ ಕಡೆಗೇ ಮನಸ್ಸು ನೆಟ್ಟಿರುವ ಕಾರಣ ಕೆಲಸವನ್ನು ಹೆಚ್ಚು ಯಾಂತ್ರಿಕವಾಗಿ ಮಾಡುತ್ತೇವೆ. ಹೀಗಾಗಿ ಕೆಲಸ ಮಾಡುವಾಗಿನ ಅನುಭವಗಳು, ಖುಷಿಗಳನ್ನು ಅನುಭವಿಸಲು ಸಾಧ್ಯವಾಗುವುದೇ ಇಲ್ಲ.

2.ಅವ್ಯಕ್ತ ಭಯ ಸದಾ ಕಾಡುತ್ತದೆ: ಕೆಲಸ ಪರ್ಫೆಕ್ಟ್ ಆಗಬೇಕೆಂದರೆ ಎಲ್ಲೂ ಒಂಚೂರು ತಪ್ಪಾಗಬಾರದು ಎಂದು ಮನಸ್ಸನ್ನು ಟ್ಯೂನ್ ಮಾಡಿಕೊಂಡು ಬಿಟ್ಟಿರುತ್ತೇವೆ. ಇದು ಪ್ರತಿ ಹೆಜ್ಜೆಯಲ್ಲೂ ಎಲ್ಲಾದರೂ ತಪ್ಪು ನಡೆದುಬಿಟ್ಟರೆ ಎಂಬ ಭಯವನ್ನು ಹುಟ್ಟು ಹಾಕುತ್ತದೆ. ಈ ಭಯ ಮನಸ್ಸಿನ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ.

 3.ಒತ್ತಡ ಹೆಚ್ಚಿ ನೆಮ್ಮದಿ ಮಾಯ: ಎಲ್ಲವನ್ನೂ ಸರಿಯಾಗಿ ಮಾಡಬೇಕು ಎಂಬ ಬಯಕೆ ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ.ಈ ಒತ್ತಡ ಮನಸ್ಸಿನ ನೆಮ್ಮದಿಯನ್ನು ಕಸಿಯುತ್ತದೆ.ಕೆಲಸ ಯಾವಾಗ ಮುಗಿಯುತ್ತದೋ ಎಂಬ ಭಾವನೆ ಮೂಡುತ್ತದೆ.

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

4.ಇಂಪೋಸ್ಟರ್ ಸಿಂಡ್ರೋಮ್: ನೀವು ನಿಮಗೆ ನಿಗದಿಪಡಿಸಿಕೊಂಡಿರುವ ಮಾನದಂಡಗಳು ವಾಸ್ತವಕ್ಕೆ ಹತ್ತಿರವಿಲ್ಲದಿದ್ದಾಗ ಅದನ್ನು ತಲುಪುವುದು ಕಷ್ಟವಾಗುತ್ತದೆ.ಇದು ನಿಮ್ಮನ್ನು ನೀವು ಅಗತ್ಯಕ್ಕಿಂತ ಹೆಚ್ಚು ವಿಮರ್ಶೆಗೊಳಪಡಿಸಲು ಕಾರಣವಾಗುತ್ತದೆ.ಇದರಿಂದ ನೀವು ಈ ಕಾರ್ಯವನ್ನು ಮಾಡಲು ಸಮರ್ಥರಲ್ಲ ಎಂಬ ಅಭಿಪ್ರಾಯ ನಿಮ್ಮಲ್ಲಿ ಮೂಡುತ್ತದೆ.ಇದು ಹೊಸ ಕೆಲಸಗಳಿಗೆ ಕೈಹಾಕದಂತೆ ನಿಮ್ಮನ್ನು ತಡೆಯುತ್ತದೆ. 

5.ಆಲಸ್ಯ ಆವರಿಸಿಕೊಳ್ಳುತ್ತದೆ: ಪರ್ಫೆಕ್ಷನ್‍ಗೆ ಹೊತೊರೆಯುವುದರಿಂದ ಹೊಸ ಸವಾಲುಗಳನ್ನು ಸ್ವೀಕರಿಸಲು ನೀವು ಹಿಂದೇಟು ಹಾಕುತ್ತೀರಿ.ಆ ಕೆಲಸವನ್ನು ಪರ್ಫೆಕ್ಟ್ ಆಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬ ಭಾವನೆ ಮೂಡುತ್ತದೆ.ಇದು ಕ್ರಮೇಣ ನಿಮ್ಮಲ್ಲಿ ಆಲಸ್ಯವನ್ನು ಹುಟ್ಟುಹಾಕುತ್ತದೆ.