ಸುಖಾ ಸುಮ್ಮನೆ ತೂಕ ಇಳಿಸುವ ಮದ್ದೆಂದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳನ್ನು ಸೇವಿಸಿದರೆ ಹಣವೂ ವೇಸ್ಟ್, ಟೈಮ್ ಸಹ ವೇಸ್ಟ್. ಅಲ್ಲದೇ ದೇಹದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಬದಲಾಗಿ ಆಹಾರದಲ್ಲಿ ತುಸು ಬದಲಾವಣೆ ಮಾಡಿಕೊಂಡು, ನೈಸರ್ಗಿಕವಾಗಿಯೇ ಕೆಲವು ನಿಯಮಗಳನ್ನು ಪಾಲಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ತೂಕ ಕಡಿಮೆ ಮಾಡಿಕೊಳ್ಳಲು ಪ್ರತಿಯೊಂದೂ ಹೆಣ್ಣೂ ಏನೇನೋ ಕಸರತ್ತು ಮಾಡುತ್ತಾಳೆ. ಇದಕ್ಕಾಗಿ ಹೆಚ್ಚಿನವರು ಔಷಧಿಗಳ ಮೊರೆ ಹೋಗುವುದೂ ಇದೆ. ಇದರಿಂದ ಬೇಗನೆ ತೂಕ ಇಳಿಸಿಕೊಳ್ಳಬಹುದು ಎಂದೇ ಭಾವಿಸುತ್ತಾರೆ. ಆದರೆ ಇದರಿಂದ ತುಂಬಾನೇ ಸೈಡ್ ಎಫೆಕ್ಟ್ಸ್ ಇರುತ್ತವೆ. ಅದಕ್ಕಾಗಿ ಕೆಲವೊಂದು ನ್ಯಾಚುರಲ್ ಥೆರಪಿಯೇ ಬೆಸ್ಟ್. 

- ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದ ಟಾಕ್ಸಿನ್ಸ್‌ ಹೊರಗೆ ಬರುವುದರ ಜೊತೆ ತೂಕ ಇಳಿಯುತ್ತದೆ.
- ಇದಲ್ಲದೆ ನಿಂಬೆ ಜ್ಯೂಸ್ ಸಹ ಸೇವಿಸಬಹುದು. ಆದರೆ ಅದಕ್ಕೆ ಸಕ್ಕರೆ ಬದಲು ಜೇನನ್ನು ಬೆರೆಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
- ಗ್ರೀನ್‌ ಟೀ ಆರೋಗ್ಯಕ್ಕೆ ಅತ್ಯುತ್ತಮ ಪಾನೀಯ. ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ.

ಲೈಫ್‌ಸ್ಟೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ