ಒಂದಕ್ಕಿಂತ ಹೆಚ್ಚು ಕೀಲುಗಳು ಊದಿಕೊಂಡಾಗ ಸಂಧಿವಾತ ಕಾಡುತ್ತದೆ. ಇದರಿಂದ ನೋವು, ಉರಿ, ಮರಗಟ್ಟುವುದು, ಊತ ಹಾಗೂ ಕೆಂಪಾಗುವಂಥ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಂಧಿವಾತವನ್ನು ತಡೆಯಲು ಇಲ್ಲಿವೆ ಸಿಂಪಲ್ ಮನೆ ಮದ್ದು... 

ಅರಿಷಿಣ

ಅರಿಷಿಣದಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ಆ್ಯಂಟಿ ಇನ್ಫ್ಲೇಷನ್ ಗುಣಗಳಿದ್ದು, ದಿನಕ್ಕೊಂದು ಸಲ ಬಿಸಿ ಹಾಲಿನೊಂದಿಗೆ ಕುಡಿಯಬೇಕು.

ಗ್ರೀನ್ ಟೀ

ಇದು ಪರಿಣಾಮಕಾರಿ ಮನೆ ಔಷಧಿಯಾಗಿದ್ದು, ದಿನಕ್ಕೆ ಒಂದೆರಡು ಸಲ ಕುಡಿದರೆ ಒಳಿತು. ಟೀ ಬ್ಯಾಗ್ ಬಳಸದಿದ್ದರೆ ಒಳ್ಳೆಯದು. 

ಶುಂಠಿ

ಅಡುಗೆ ಪದಾರ್ಥಗಳಲ್ಲಿ ಬಳಸಿ ಸೇವಿಸಬಹುದು. ಇದು ವಾಯುವಿಗೆ ಉತ್ತಮ ಮದ್ದು. ಸಾಮಾನ್ಯವಾಗಿ ಸಂಧಿವಾತ ಕಾಡುವುದು ವಾಯುವಿನಿಂದ.

ಬೆಳ್ಳುಳ್ಳಿ

ಊತವಾದ ಜಾಗದಲ್ಲಿ ಬೆಳ್ಳುಳ್ಳಿಯಿಂದ  ಮಸಾಜ್ ಮಾಡಬೇಕು. ಇಲ್ಲವಾದರೆ 2-3 ಬೆಳ್ಳುಳ್ಳಿ ಜಗಿದು ತಿಂದರೂ, ಪರಿಣಾಮಕಾರಿ.

ದಾಲ್ಚಿನ್ನಿ

ಇದನ್ನು ಪುಡಿ ಮಾಡಿಕೊಂಡು ಕಾಫಿ, ಟೀ ಅಥವಾ ಅಡುಗೆಗೆ ಬಳಸಬೇಕು.