ಮಕ್ಕಳಾಗಲು ಸಮಸ್ಯೆ ಎದುರಿಸುತ್ತಿರುವವರಿಗೆ ವರವಾಗಿ ನಿಲ್ಲುತ್ತದೆ ಕೃತಕ ಗರ್ಭಧಾರಣೆ. ಆದರೆ, ಈ ಕುರಿತ ಕೆಲವು ಮಿಥ್ಯ ನಂಬಿಕೆಗಳಿಂದಾಗಿ, ಬಹಳಷ್ಟು ಜನ ಇದರ ಲಾಭ ಪಡೆಯಲು ಹೆದರುತ್ತಾರೆ. ಆದರೆ, ಐವಿಎಫ್ ಕುರಿತು ಹಬ್ಬಿರುವ ಈ ಸುದ್ದಿಗಳು ನಿಜವಾಗಿಯೂ ನಿಜವಲ್ಲ...

1. ಕೃತಕ ಗರ್ಭಧಾರಣೆ ಸುರಕ್ಷಿತ ಆಯ್ಕೆಯಲ್ಲ 
ಕೃತಕ ಗರ್ಭಧಾರಣೆಯಿಂದ ಜನಿಸಿದ ಮಗುವಿನ ಆರೋಗ್ಯ ಭವಿಷ್ಯದಲ್ಲಿ ಚೆನ್ನಾಗಿರುವುದಿಲ್ಲ ಎಂಬ ನಂಬಿಕೆಯಿದೆ. ಈ ವಿಧಾನದಲ್ಲಿ ತಾಯಿಯಾಗುವುದು ಕೂಡಾ ಅಪಾಯ ಎಂದು ವಾದಿಸುವವರು ಇದ್ದಾರೆ. ಆದರೆ, ಮಕ್ಕಳಾಗಲು ಸಮಸ್ಯೆಗಳಿವೆ ಎಂಬ ದಂಪತಿಗೆ ಕೃತಕ ಗರ್ಭಧಾರಣೆ ಅತ್ಯಂತ ಸುರಕ್ಷಿತ ಆಯ್ಕೆ. ಮಾತ್ರವಲ್ಲ, ವರದಾನ ಕೂಡಾ. ವೈಜ್ಞಾನಿಕ ವಿಧಾನಗಳನ್ನು ಬಳಸಿ, ಎಗ್ ಹಾಗೂ ಸ್ಪರ್ಮ್‌ಗಳನ್ನು ಹೊರಗಿನಿಂದಲೇ ಜೋಡಿಸಿ, ಕೆಲವು ದಿನಗಳ ಕಾಲ ಅದರ ಬೆಳವಣಿಗೆಯನ್ನು ಗಮನಿಸಿ, ಆ ಬಳಿಕ ಮತ್ತೆ ಅದನ್ನು ಹೆಣ್ಣಿನ ಗರ್ಭಕ್ಕೆ ಸೇರಿಸಲಾಗುತ್ತದೆ. ನಂತರದಲ್ಲಿ ಅದು ಇತರೆ ತಾಯಂದಿರ ಹೊಟ್ಟೆಯಲ್ಲಿ ಗರ್ಭ ಬೆಳೆಯುವಂತೆಯೇ ಬೆಳೆದು ಹುಟ್ಟುತ್ತದೆ. ಇದರಲ್ಲಿ ಮಗುವಿಗಾಗಲೀ, ತಾಯಿಗಾಗಲೀ ಅಪಾಯವಾಗುವಂಥದ್ದು ಏನೂ ಇಲ್ಲ. 

IVFನಿಂದ 74ನೇ ವಯಸ್ಸಿಗೆ ಅಮ್ಮನಾದ ಅಜ್ಜಿ

2. ದಪ್ಪಗಿರುವವರಿಗೆ ಐವಿಎಫ್ ವಿಧಾನ ಕೆಲಸ ಮಾಡುವುದಿಲ್ಲ
ಬೊಜ್ಜು ಎಂಬುದು ಐವಿಎಫ್ ಮೊರೆ ಹೋದವರಿಗೆ ಮಾತ್ರವಲ್ಲ, ಸಾಮಾನ್ಯವಾಗಿ ಮಗು ಹೊಂದುವವರಿಗೂ ಅಲ್ಪಸ್ವಲ್ಪ ಅಡ್ಡಿಯುಂಟು ಮಾಡಬಹುದು. ಇದರಲ್ಲಿ ಐವಿಎಫ್ ಪಾತ್ರವೇನಿಲ್ಲ. ಹೀಗಾಗಿ, ಸಾಮಾನ್ಯ ದೇಹ ಹಾಗೂ ಬಿಎಂಐ ಹೊಂದಿದವರು ಮಾತ್ರ ಕೃತಕ ಗರ್ಭಧಾರಣೆಯ ಸಹಾಯ ಪಡೆಯಬಹುದು ಎಂಬುದು ಸುಳ್ಳು. ಬೊಜ್ಜಿನಿಂದಾಗಿ ಮಹಿಳೆಯರಲ್ಲಿ ಎಗ್ ಸಂಖ್ಯೆ ಕಡಿಮೆಯಾಗಬಹುದು. ಆದರೆ, ಬಂಜೆತನ ಬರುವುದಿಲ್ಲ. ಯಾವುದೇ ರೀತಿಯ ದೇಹ, ತೂಕ, ಎತ್ತರ ಹೊಂದಿದ ಮಹಿಳೆ ಕೂಡಾ ಗರ್ಭವತಿಯಾಗಬಹುದು ಎನ್ನುತ್ತಾರೆ ವೈದ್ಯರು. 

3. ಕೃತಕ ಗರ್ಭಧಾರಣೆಯಿಂದ ಹುಟ್ಟಿದ ಮಕ್ಕಳು ಸಾಮಾನ್ಯ ಮಕ್ಕಳಂತಿರುವುದಿಲ್ಲ

ಕೃತಕ ಎನಿಸಿದ್ದರಲ್ಲಿ, ನಂಬಲಸಾಧ್ಯ ವಿಜ್ಞಾನದಲ್ಲಿ ತಪ್ಪು ಹುಡುಕುವುದರಲ್ಲಿ, ತಮ್ಮ ಕಲ್ಪನೆಯನ್ನು ತೂರಿಸುವುದರಲ್ಲಿ ಜನ ನಿಸ್ಸೀಮರು. ಆದರೆ, ಐವಿಎಫ್ ಮಕ್ಕಳಿಗೂ, ಸಾಮಾನ್ಯ ಮಕ್ಕಳಿಗೂ ಗರ್ಭಧಾರಣೆಯಾದ ರೀತಿ ವಿಭಿನ್ನ ಎಂಬುದು ಬಿಟ್ಟರೆ ಬೇರಾವ ವ್ಯತ್ಯಾಸವೂ ಇರಲಾರದು. ಕೃತಕ ಗರ್ಭಧಾರಣೆಯಿಂದ ಜನಿಸಿದ ಮಕ್ಕಳು ಉಳಿದೆಲ್ಲ ಮಕ್ಕಳಷ್ಟೆಯೇ ಆರೋಗ್ಯವಾಗಿಯೂ, ಮುದ್ದಾಗಿಯೂ, ಚುರುಕಾಗಿಯೂ ಇರುತ್ತವೆ. 

4. ಎಗ್ ಫ್ರೀಜ್ ಮಾಡುವುದರಿಂದ ಅವು ಹಾಳಾಗುತ್ತವೆ
ಐವಿಎಫ್ ವಿಧಾನದಲ್ಲಿ ಮಹಿಳೆಯ ಎಗ್‌ನ್ನು ಫ್ರೀಜ್ ಮಾಡುತ್ತಾರಾದ್ದರಿಂದ, ಮಕ್ಕಳು ಹುಟ್ಟುವಾಗ ಅಂಗವಿಕಲರಾಗಬಹುದು, ಉಳಿದ ಮಕ್ಕಳಷ್ಟು ಬಲಿಷ್ಠರಾಗಿಲ್ಲದಿರಬಹುದು, ಫ್ರೀಜಿಂಗ್‌ನಿಂದಾಗಿ ಅವುಗಳ ಬೆಳವಣಿಗೆಯ ಸಾಮರ್ಥ್ಯ ಕುಗ್ಗುತ್ತದೆ ಎಂದು ಯೋಚಿಸಿ ಐವಿಎಫ್‌ನಿಂದ ದೂರ ಉಳಿಯುವ ಮಹಿಳೆಯರು ಹಲವರು. ಆದರೆ, ಇವೆಲ್ಲವೂ ಮೂಢನಂಬಿಕೆಗಳೇ ಹೊರತು ಖಂಡಿತಾ ನಿಜವಲ್ಲ. ಮನುಷ್ಯರ ಭ್ರೂಣಗಳು ನೀವು ಅಂದುಕೊಳ್ಳುವುದಕ್ಕಿಂತ ಹೆಚ್ಚು ಬಲಿಷ್ಠವಾಗಿರುತ್ತವೆ. ಅವು ಫ್ರೀಜರ್‌ನೊಳಗೆ ಬಹುಕಾಲ ಕೆಡದೆ ಅಥವಾ ವೀಕ್ ಆಗದೆಯೇ ಸಾಮಾನ್ಯವಾಗಿ ಉಳಿಯಬಲ್ಲವು. ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದಿರುವಾಗ ತೀರಾ ಹಿಂದುಳಿದವರಷ್ಟೇ ಇಷ್ಟೆಲ್ಲ ಅನುಮಾನದಲ್ಲಿ ಕಾಲ ಕಳೆಯಲು ಸಾಧ್ಯ.

ನೂರಾರು ಗರ್ಭಪಾತದ ನಂತರ ಅಮ್ಮನಾದ ಹೆಣ್ಣು

5. ಐವಿಎಫ್ ಎಲ್ಲ ವಯೋಮಾನದ ಮಹಿಳೆಯರಿಗೆ ಕೆಲಸ ಮಾಡುತ್ತದೆ
ಇದು ವೈಜ್ಞಾನಿಕ ವಿಧಾನವಾದ್ದರಿಂದ, ದೇಹದ ಹೊರಗೆ ಎಗ್ ಹಾಗೂ ವೀರ್ಯವನ್ನು ಜೋಡಿಸುವುದರಿಂದ ಎಲ್ಲ ವಯಸ್ಸಿನ ಮಹಿಳೆಯರು ಕೂಡಾ ಇದರಿಂದ ಮಕ್ಕಳು ಪಡೆಯಬಹುದು ಎಂದು ಹಲವರು ನಂಬಿದ್ದಾರೆ. ಆದರೆ, ಇದು ಸ್ವಲ್ಪ ಮಟ್ಟಿಗೆ ನಿಜವಾದರೂ 45 ವರ್ಷದ ನಂತರದವರಲ್ಲಿ ಯಶಸ್ವಿಯಾಗುವುದು ಕಡಿಮೆ. ಮಧ್ಯವಯಸ್ಸು ದಾಟಿದ ಬಳಿಕ ಶೇ.50ರಷ್ಟು ಮಹಿಳೆಯರಿಗೆ ಮಾತ್ರ ಐವಿಎಫ್ ಕೆಲಸ ಮಾಡಬಹುದು.