ಎಂಟಿವಿ ವಿಡಿಯೋ ಜಾಕಿಯಾಗಿದ್ದ ಮಿಂಚುಳ್ಳಿ ಚೆಲುವೆ ರಿಯಾ ಚಕ್ರವರ್ತಿ ಪಡ್ಡೆಗಳ ಹಾಟ್‌ ಫೇವರೆಟ್‌ ಆಗಿದ್ದರು. ವಿಜೆಯಾಗೋದ್ರ ಜೊತೆಗೆ ‘ಜಲೇಬಿ- ದಿ ಎವರ್‌ಲಾಸ್ಟಿಂಗ್‌ ಟೇಸ್ಟ್‌ ಆಫ್‌ ಲವ್‌’ ಚಿತ್ರದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದರು. ಆಮೇಲೆ ಕಾಣದಂತೆ ಮಾಯವಾಗಿದ್ದ ರಿಯಾ ಈಗ ರಾರ‍ಯಪಿಡ್‌ ಚೇಂಜ್‌ನೊಂದಿಗೆ ಇನ್ನಷ್ಟುಪಡ್ಡೆಗಳ ಮನ ಕಲಕಿದ್ದಾರೆ. ತಮ್ಮ ಫಿಟ್ನೆಸ್‌ ಹಿಂದಿನ ಸೀಕ್ರೆಟ್‌ ಹಂಚಿಕೊಂಡಿದ್ದಾರೆ.

ತಿನ್ನೋದು ಒಳ್ಳೆಯದನ್ನೇ

ಹೆಲ್ದಿ ಫುಡ್‌ ಅನ್ನೇ ಇಷ್ಟಪಡುವ ರಿಯಾ, ತಿನ್ನುವುದಕ್ಕಾಗಿ ಬದುಕುತ್ತೇನೆ ಎನ್ನುತ್ತಾರೆ. ಅದಕ್ಕಾಗಿ ಎಣ್ಣೆ ಪದಾರ್ಥ, ಜಂಗ್‌ ಫುಡ್‌, ಹೆಚ್ಚು ಉಪ್ಪು-ಸಕ್ಕರೆ ಇರುವ ಪದಾರ್ಥ ಮುಟ್ಟುವುದೇ ಇಲ್ಲ. ತರಕಾರಿ ಹಣ್ಣುಗಳು ಜಾಸ್ತಿ. ಇದರಿಂದ ಮನಸ್ಸು ಆರೋಗ್ಯಕರವಾಗಿ, ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ. ಅಂದ ಹಾಗೆ ಚಾಕ್ಲೇಟ್‌, ನಾನ್‌ ವೆಜ್‌, ಮೀಲ್ಸ್‌ ಮತ್ತು ಸ್ಟ್ರೀಟ್‌ ಫುಡ್‌ ಎಂದರೆ ಇಷ್ಟ.

ಎತ್ತರ : 5’7

ಸುತ್ತಳತೆ: 30-26-32

ತೂಕ: 50 ಕೆಜಿ

View post on Instagram

ತೂಕ ಕರಗಿಸೋ ಪ್ರಶ್ನೆನೇ ಇಲ್ಲ

ರಿಯಾ ತೂಕ ಇಳಿಸುವುದಕ್ಕಾಗಿ ಯಾವ ಕಸರತ್ತು ನಡೆಸೋದಿಲ್ಲ. ಕಡಿಮೆ ತಿಂದು ಜಾಸ್ತಿ ದೇಹ ದಂಡಿಸಿ ಕರಗಿಸುವುದೇ ತೂಕ ಕಾಯ್ದುಕೊಳ್ಳುವ ಮಂತ್ರ ಅಂತೆ. ಅದಕ್ಕಾಗಿ ಯೋಗ, ವ್ಯಾಯಾಮ, ಸ್ವಿಮ್ಮಿಂಗ್‌, ಜಾಗಿಂಗ್‌, ಪ್ರಾಣಾಯಾಮ ಪ್ರತಿ ನಿತ್ಯ ತಪ್ಪದೆ ಮಾಡುತ್ತಾರಂತೆ.