ಇಯರ್‌ಬಡ್ ಮರೆತು ಹೋದ ಮಗಳು: ಬುತ್ತಿಯಲ್ಲಿ ತುಂಬಿಸಿ ಕಳುಹಿಸಿದ ಅಮ್ಮ
ಮಗಳ ಇಯರ್‌ಬಡ್ಸ್‌ಗಳನ್ನು ಊಟದ ಡಬ್ಬದಲ್ಲಿಟ್ಟು ಕಳುಹಿಸಿದ ತಾಯಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮಕ್ಕಳ ವಸ್ತುಗಳನ್ನು ಪೋಷಕರು ಬಹಳ ಜೋಪಾನವಾಗಿ ಎತ್ತಿಡುತ್ತಾರೆ. ಅದು ಅಪ್ಪನಾದರೂ ಅಷ್ಟೇ ಅಮ್ಮನಾದರೂ ಅಷ್ಟೇ ಅದಕ್ಕೊಂದು ಉತ್ತಮ ಉದಾಹರಣೆ ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ಈ ಪೋಸ್ಟ್. ಮಕ್ಕಳೇನಾದರು ಕೆಲಸಕ್ಕೆ ಹೋಗುವ ಸಮಯದಲ್ಲಿ ಏನನ್ನಾದರು ಅಗತ್ಯ ವಸ್ತುಗಳನ್ನು ಮನೆಯಲ್ಲೇ ಬಿಟ್ಟು ಹೋದರೂ ಪೋಷಕರು ಚಡಪಡಿಸುತ್ತಾರೆ. ಆದರೆ ಈಗ ಎಲ್ಲದಕ್ಕೂ ತಂತ್ರಜ್ಞಾನ ಪರಿಹಾರ ಕಲ್ಪಿಸಿದೆ. ನೀವು ಮನೆಯಲ್ಲಿ ಬಿಟ್ಟು ಬಂದ ಅಗತ್ಯ ವಸ್ತುಗಳು ನಿಮಗೇ ಆಗಲೇ ಬೇಕು ಎಂದಾದಲ್ಲಿ ಕೆಲ ನಿಮಿಷಗಳಲ್ಲಿ ಅವು ನಿಮ್ಮ ಬಳಿ ತಲುಪುವಂತಹ ವ್ಯವಸ್ಥೆಯನ್ನು ಡುಂಜೋದಂತಹ ಸ್ಟಾರ್ಟ್‌ಪ್ ಆಪ್‌ಗಳು ಮಾಡಿಕೊಟ್ಟಿವೆ. ನಿಮ್ಮ ಬಳಿ ಹಣವೊಂದು ಇದ್ದರಾಯಿತು ಅಷ್ಟೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಬರುವುದಿಲ್ಲ.
ಅದೇ ರೀತಿ ಇಲ್ಲೊಬ್ಬರು ಯುವತಿ ತಾನು ಮನೆಯಲ್ಲಿ ಬಿಟ್ಟು ಬಂದ ಇಯರ್‌ಬಡ್‌ಗಳನ್ನು ಆನ್‌ಲೈನ್ ಮೂಲಕ ಆಫೀಸಿಗೆ ತರಿಸಿಕೊಂಡಿದ್ದಾಳೆ. ಆದರೆ ಇಲ್ಲಿ ಗಮನ ಸೆಳೆದಿದ್ದು, ಆ ಇಯರ್‌ಬಡ್‌ಗಳನ್ನು ಅಮ್ಮ ಪ್ಯಾಕ್ ಮಾಡಿದ ರೀತಿ. ಇಯರ್ ಬಡ್ ಮರೆತು ಬಂದ ಮಗಳು ಅಮ್ಮನಿಗೆ ಅದನ್ನು ಆನ್ಲೈನ್ ಡೆಲಿವರಿ ಬಾಯ್ ಮನೆ ಬಳಿ ಬಂದರೆ ಸುರಕ್ಷಿತವಾಗಿ ಪ್ಯಾಕ್ ಮಾಡಿ ಕೊಟ್ಟು ಕಳುಹಿಸುವಂತೆ ಹೇಳಿದ್ದಾರೆ.
ಕ್ಲಾಸ್ ಬಂಕ್ ಮಾಡಿ ಸ್ನೇಹಿತರ ಜೊತೆ ತಿರುಗಾಡ್ತಿದ್ದ ಮಗಳಿಗೆ ಅಪ್ಪ ಕೊಟ್ಟ ಶಿಕ್ಷೆಯೇನು ನೋಡಿ?
ಅದರಂತೆ ಅಮ್ಮ ಅದನ್ನು ಬಹಳ ಸುರಕ್ಷಿತವಾಗಿ ಬುತ್ತಿ ತೆಗೆದುಕೊಂಡು ಹೋಗುವ ಸ್ಟೀಲ್ ಡಬ್ಬಿಯಲ್ಲಿ ಹಾಕಿ ಪ್ಯಾಕ್ ಮಾಡಿ ಡೆಲಿವರಿ ಬಾಯ್ ಜೊತೆ ಕೊಟ್ಟು ಕಳುಹಿಸಿದ್ದಾರೆ. ಹೀಗೆ ಕಚೇರಿ ತಲುಪಿದ ಇಯರ್‌ಬಡ್‌ಗಳನ್ನು ಮಗಳು ಬಿಚ್ಚಿದಾಗ ಅಮ್ಮ ಪ್ಯಾಕ್ ಮಾಡಿದ ರೀತಿಗೆ ಅಚ್ಚರಿ ಪಟ್ಟಿದ್ದಾರೆ. ಅಲ್ಲದೇ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಆ ಫೋಸ್ಟ್ ಈಗ ಸಖತ್ ವೈರಲ್ ಆಗಿದೆ. 'ನಾನು ಇಯರ್‌ಬಡ್‌ಗಳನ್ನು ಮನೆಯಲ್ಲಿ ಮರೆತು ಬಂದಿದೆ. ಅದನ್ನು ಡೆಲಿವರಿ ಬಾಯ್‌ಗೆ ಅದೇನು ಎಂಬುದು ತಿಳಿಯದಂತೆ ಪ್ಯಾಕ್ ಮಾಡಿ ಕೊಟ್ಟು ಕಳುಹಿಸುವಂತೆ ಹೇಳಿದ್ದೆ. ಅದರಂತೆ ಆಕೆ ಇದನ್ನು ಊಟ ಸಾಗಿಸುವ ಸ್ಟೀಲ್ ಬಾಕ್ಸ್‌ನಲ್ಲಿ ತುಂಬಿಸಿ ಕಳುಹಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಅನೇಕರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರ ಅಮ್ಮನೂ ಬೆಸ್ಟ್ ಆಕೆಗೆ ಬಹಳ ಪ್ರೀತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಅಮ್ಮಂದಿರು ಯಾವಾಗಲೂ ಸ್ಮಾರ್ಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜಗತ್ತಿನಲ್ಲಿ ಅಮ್ಮ ಪರಿಹರಿಸಲಾಗದ ಮಕ್ಕಳ ಸಮಸ್ಯೆಯೇ ಇಲ್ಲ ಎಂದು ಅಮ್ಮನನ್ನು ಕೊಂಡಾಡಿದ್ದಾರೆ. ಮತ್ತೊಬ್ಬರು ಇದು ಝೆಡ್‌ಪ್ಲಸ್ ಸೆಕ್ಯೂರಿಟಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಅಮ್ಮ ಕೇವಲ ಡಬ್ಬಿಯಲ್ಲಿ ಹಾಕಿ ಪ್ಯಾಕ್ ಮಾಡಿದ್ದಾರೆ. ಆದರೆ ನಮ್ಮ ಅಮ್ಮ ಆಗಿದ್ದರೆ ಅದಕ್ಕೆ 4ರಿಂದ 5 ಬೇರೆ ಬೇರೆ ಕವರ್‌ಗಳನ್ನು ಸುತ್ತಿ ಕಳುಹಿಸುತ್ತಿದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಮ್ಮಂದಿರ ಕಾಳಜಿಯನ್ನು ಈ ಪೋಸ್ಟ್ ಬಿಂಬಿಸುತ್ತಿದೆ.